ಹರ್ ಘರ್ ತಿರಂಗಾ ಅಂಗವಾಗಿ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್.ಅಶ್ವತ್ಥ ನಾರಾಯಣ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ನಿವಾಸಿಗಳಾಗಿರುವ ವರನಟ, ದಿ. ಡಾ. ರಾಜಕುಮಾರ್ ಅವರ ಕುಟುಂಬದ ಸದಸ್ಯರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಪುನೀತ್ ರಾಜಕುಮಾರ್ ಮನೆಗೆ ತೆರಳಿದ ಅವರು, ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ತ್ರಿವರ್ಣ ಧ್ವಜವನ್ನು ಕೈಗಿತ್ತರು. ನಂತರ ನಟ ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ತೆರಳಿದ ಸಚಿವರು, ಅವರಿಗೂ ತಿರಂಗವನ್ನು ಹಸ್ತಾಂತರಿಸಿದರು.