ಸ್ವಾತಂತ್ರ್ಯೋತ್ಸವ: ರಾಜ್ಯದ 18 ಪೋಲಿಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿಗೆ ರಾಷ್ಟ್ರಪತಿ ಪದಕ ಲಭಿಸಿದೆ. 

Last Updated : Aug 15, 2018, 01:38 PM IST
ಸ್ವಾತಂತ್ರ್ಯೋತ್ಸವ: ರಾಜ್ಯದ 18 ಪೋಲಿಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ title=

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಭೇದಿಸಿದ ಎಸ್ಐಟಿ ಸಹಾಯಕ ತನಿಖಾಧಿಕಾರಿ ಡಿವೈಎಸ್ಪಿ ಟಿ.ರಂಗಪ್ಪ ಸೇರಿದಂತೆ 18 ಮಂದಿಗೆ ಸ್ವಾತಂತ್ರೋತ್ಸವ ನಿಮಿತ್ತ ಪೋಲಿಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪುರಸ್ಕಾರ ಲಭಿಸಿದೆ.

ಕೆಎಸ್‌ಆರ್‌ಪಿ ತುಮಕೂರು ಉಪಕಮಾಂಡೆಂಟ್‌ ಟಿ.ಸುಂದರರಾಜು, ಮೈಕೋ ಲೇಔಟ್‌ ಎಸಿಪಿ ಎಂ.ಎನ್‌.ಕರಿಬಸವನಗೌಡ, ಮೈಸೂರಿನ ಎಸಿಪಿ ಸಿ.ಗೋಪಾಲ್‌, ಸಿಐಡಿ ಡಿವೈಎಸ್ಪಿ ಕೆ.ಪುರುಷೋತ್ತಮ್, ಎಸ್‌ಐಟಿ ಡಿವೈಎಸ್ಪಿ ಟಿ.ರಂಗಪ್ಪ, ಬೆಂಗಳೂರು ಎಸಿಬಿ ಡಿವೈಎಸ್ಪಿ ಟಿ.ಕೋದಂಡರಾಮ, ಮೈಸೂರಿನ ಎಸಿಬಿ ಡಿವೈಎಸ್ಪಿ ಉಮೇಶ್‌ ಗಣಪತಿ ಶೇಠ್‌, ಕೊಪ್ಪಳದ ಎಸಿಬಿ ಡಿವೈಎಸ್ಪಿ ರುದ್ರಪ್ಪ ಎಸ್‌.ಉಜ್ಜನಕೊಪ್ಪ, ದಾವಣಗೆರೆ ಗ್ರಾಮಾಂತರ ವಿಭಾಗ ಡಿವೈಎಸ್ಪಿ ಮಂಜುನಾಥ ಕೆ.ಗಂಗಲ್‌, ದಾವಣಗೆರೆ ವಿಶೇಷ ಶಾಖೆ ಡಿವೈಎಸ್ಪಿ ಎಂ.ಬಾಬು ಅವರಿಗೆ ಪ್ರಶಸ್ತಿ ಲಭಿಸಿದೆ. 

ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ಸದಾನಂದ.ಎ.ತಿಪ್ಪಣ್ಣನವರ್‌, ಸಿಐಡಿ ಇನ್ಸ್‌ಪೆಕ್ಟರ್‌ ಸುಧೀರ್‌ ಎಸ್‌.ಶೆಟ್ಟಿ, ಕೋಲಾರ ಪಿಎಸ್‌ಐ ಎನ್‌.ಸೋಮಶೇಖರ್‌, ಸಿಐಡಿ ಎಎಸ್‌ಐ ಟಿ.ಎನ್‌.ನಾಗಭೂಷಣ್‌, ರಾಣೆಬೆನ್ನೂರು ಪಟ್ಟಣ ಠಾಣೆ ಎಎಸ್‌ಐ ಸಿ.ಕೋಮಲಾಚಾರ್‌, ಬೆಂಗಳೂರು ಕೆಎಸ್‌ಆರ್‌ಪಿ ತುಕಡಿ ಎಆರ್‌ಎಸ್‌ಐ ಎಂ.ಎಚ್‌.ಪಾಪಣ್ಣ, ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಸಿದ್ದಲಿಂಗೇಶ್ವರ, ಮೈಸೂರಿನ ಕೆಎಸ್‌ಆರ್‌ಪಿ 5ನೇ ಬೆಟಾಲಿಯನ್‌ ಹೆಡ್‌ ಕಾನ್‌ಸ್ಟೇಬಲ್‌ ಶಿವಪ್ಪ ಮಲ್ಲಿಕಾಜಪ್ಪ ಬಿಳಿಗಿ ಅವರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. 

 

 

Trending News