Malala Yousafzai : ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮಲಾಲಾ ಯೂಸುಫ್‌ಜಾಯ್!

ಪಾಕಿಸ್ತಾನಿ ಹೋರಾಟಗಾರ್ತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯ್ ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ

Written by - Channabasava A Kashinakunti | Last Updated : Feb 9, 2022, 08:56 AM IST
  • ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ
  • ಮುಸ್ಲಿಂ ಯುವತಿಯ ವಿಡಿಯೋ ವೈರಲ್
  • ಪಾಕಿಸ್ತಾನಿಗಳಿಂದ ನಿರಂತರವ ಕಾಮೆಂಟ್
Malala Yousafzai : ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮಲಾಲಾ ಯೂಸುಫ್‌ಜಾಯ್! title=

ಬೆಂಗಳೂರು : ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಇದೀಗ ಪಾಕಿಸ್ತಾನದಲ್ಲೂ ಪ್ರತಿಧ್ವನಿಸುತ್ತಿದೆ. ಈ ವಿಚಾರವನ್ನೇ ನೆಪವಾಗಿಟ್ಟುಕೊಂಡು ಭಾರತದ ವಿರುದ್ಧ ವಿಷ ಉಗುಳುವ ಅವಕಾಶ ಪಾಕಿಸ್ತಾನಿಗಳಿಗೆ ಸಿಕ್ಕಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಆ ವೀಡಿಯೊಗೆ ಪಾಕಿಸ್ತಾನದಿಂದ ನಿರಂತರ ಪ್ರತಿಕ್ರಿಯೆಗಳು ಬರುತ್ತಿವೆ. ಪಾಕಿಸ್ತಾನಿ ಹೋರಾಟಗಾರ್ತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಜಾಯ್ ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ

ಹಿಜಾಬ್ ಧರಿಸಿದಕ್ಕೆ ಪ್ರವೇಶಿ ನಿಷೇಧಿಸುವುದು ಭಯಾನ!

ಹೆಣ್ಣುಮಕ್ಕಳು ಹಿಜಾಬ್(Hijab) ಧರಿಸಿ ಶಾಲೆ ಪ್ರವೇಶಿಸುವುದನ್ನು ತಡೆಯುವುದು ಭಯಾನಕವಾಗಿದೆ ಎಂದು ಮಲಾಲಾ ಯೂಸುಫ್‌ಜಾಯ್ ಹೇಳಿದ್ದಾರೆ. ವಾಸ್ತವವಾಗಿ, ಕರ್ನಾಟಕದ ಕೆಲವು ಹುಡುಗಿಯರು ಹಿಜಾಬ್ ಧರಿಸಿದ ಕಾರಣ ಕ್ಯಾಂಪಸ್ ಮತ್ತು ತರಗತಿಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಆರೋಪಿಸಿದರು. ಈ ಕುರಿತು ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಮಲಾಲಾ(Malala Yousafzai), 'ಹಿಜಾಬ್ ಧರಿಸಿರುವ ಹುಡುಗಿಯರನ್ನು ಶಾಲೆಗಳಿಗೆ ಪ್ರವೇಶಿಸದಂತೆ ತಡೆಯುವುದು ಭಯಾನಕವಾಗಿದೆ. ಮಹಿಳೆಯರು ಹೆಚ್ಚು ಕಡಿಮೆ ಬಟ್ಟೆ ಧರಿಸುವಂತೆ ಒತ್ತಡ ಹೇರುತಿದ್ದಾರೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Paracetamol ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ, ಸೇವಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ

'ದ್ವೇಷ ಬೆಳೆಯಲು ಬಿಡಬೇಡಿ'

ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರು ವೈರಲ್ ಆಗುತ್ತಿರುವ ವೀಡಿಯೊ(Video)ವನ್ನು ರಿಟ್ವೀಟ್ ಮಾಡಿ, 'ಮಾರ್ಟಿನ್ ಲೂಥರ್ ಕಿಂಗ್ ಅವರು ಒಂದು ಕಡೆ ಹೀಗೆ ಹೇಳಿದ್ದಾರೆ - ದ್ವೇಷವನ್ನು ದ್ವೇಷದಿಂದ ಕೊನೆಗೊಳಿಸಲಾಗುವುದಿಲ್ಲ, ದ್ವೇಷವನ್ನು ಪ್ರೀತಿಯಿಂದ ಮಾತ್ರ ಕೊನೆಗೊಳಿಸಬಹುದು. ಈ ದೃಶ್ಯ ನೋಡಿ..ಒಬ್ಬ ಮುಸ್ಲಿಂ ಹುಡುಗಿಗೆ ಹಿಂದೂಗಳ ದೊಡ್ಡ ಗುಂಪು ಕಿರುಕುಳ ನೀಡುತ್ತಿದೆ. ಸುತ್ತಮುತ್ತಲಿನ ಹುಡುಗಿಯರ ಮೇಲೆ ಮಾತ್ರ ದ್ವೇಷವನ್ನು ಹರಡಬೇಡಿ. ಈ ವೀಡಿಯೊದಲ್ಲಿ, ಮುಝಾಮಿಲ್ ಎಂಬ ಬಳಕೆದಾರರು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ಟ್ಯಾಗ್ ಮಾಡಿ, 'ಸರ್, ಭಾರತದಲ್ಲಿ ಮುಸ್ಲಿಮರಿಗೆ ಏನಾಯಿತು ಎಂಬುದನ್ನು ನೋಡಿ' ಎಂದು ಬರೆದಿದ್ದಾರೆ.

ಏನಿದು ವಿವಾದ?

ಕಳೆದ ತಿಂಗಳು ಉಡುಪಿ(Udupi)ಯ ಸರ್ಕಾರಿ ಕಾಲೇಜೊಂದರಲ್ಲಿ ಕಾಲೇಜು ಆಡಳಿತ ಮಂಡಳಿಯ ನಿಯಮಕ್ಕೆ ವಿರುದ್ಧವಾಗಿ 6 ​​ಹುಡುಗಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಇದಾದ ನಂತರ ರಾಜ್ಯದ ಇತರೆ ಕಾಲೇಜುಗಳಲ್ಲೂ ಹಿಜಾಬ್ ಧರಿಸಿ ವಿವಾದ ಎದ್ದಿತ್ತು. ಹಿಜಾಬ್ ವಿರುದ್ಧ ಪ್ರತಿಭಟನೆಯಲ್ಲಿ, ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲುಗಳೊಂದಿಗೆ ಶಾಲೆ ಮತ್ತು ಕಾಲೇಜಿಗೆ ಬರಲು ಪ್ರಾರಂಭಿಸಿದರು. ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಶಿವಮೊಗ್ಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಲ್ಲು ತೂರಾಟದ ವರದಿಯಾಗಿದೆ. ಹೆಚ್ಚುತ್ತಿರುವ ವಿವಾದವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿದೆ. ಮತ್ತೊಂದೆಡೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಬಹುದೇ ಎಂಬ ಬಗ್ಗೆ ರಾಜ್ಯ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ : ಕ್ಯಾನ್ಸರ್ ಅಂಶ ಇದೆ ಎನ್ನುವ ದೂರು ಹಿನ್ನೆಲೆ, ನಿಷೇಧಕ್ಕೊಳಗಾಗಲಿದೆ Johnson & Johnson ಬೇಬಿ ಪೌಡರ್ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News