ನವದೆಹಲಿ: ಕಳೆದ ಕೆಲವು ದಿನಗಳಿಂದ ಆಹಾರ ಸಿಗದೆ 11 ವರ್ಷ ವಯಸ್ಸಿನ ಮಗು ಮರಣ ಹೊಂದಿರುವಂತಹ ಹೃದಯ ವಿದ್ರಾವಕ ಘಟನೆ ಜಾರ್ಖಂಡ್ ರಾಜ್ಯದ ಸಿಮ್ದೆಗಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.
Jharkhand: Went to get rice but I was told that no ration will be given to me. My daughter died saying 'Bhat-bhat'-Koyli Devi, girl's mother pic.twitter.com/aRCIwcoSfL
— ANI (@ANI) October 17, 2017
ಮಗುವಿನ ತಾಯಿ ಹೇಳುವ ಪ್ರಕಾರ ಅವರ ಪಡಿತರ ಚೀಟಿ ಆಧಾರ್ಗೆ ಲಿಂಕ್ ಆಗದ ಕಾರಣ ಅವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಿದ್ದಾರೆ. ಪಡಿತರವನ್ನೇ ಅವಲಂಬಿಸಿದ್ದ ಕುಟುಂಬಕ್ಕೆ ಅಕ್ಕಿ (ಆಹಾರ) ನೀಡಲು ನಿರಾಕರಿಸಿದ ಕಾರಣ ಮಗುವಿಗೆ ಬಹಳ ದಿನಗಳಿಂದ ಆಹಾರ ಒದಗಿಸಲು ಸಾಧ್ಯವಾಗಲಿಲ್ಲ. ತನ್ನ ಮಗಳು ಈ ಕಾರಣದಿಂದಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
11 ವರ್ಷ ವಯಸ್ಸಿನ ಸಂತೋಷ್ ಕುಮಾರಿ ಎಂಬ ಮಗು ಸಾವಿಗೀಡಾದ ದುರ್ದೈವೆಯಾಗಿದ್ದಾರೆ. ಸಂತೋಷ್ ಕುಮಾರಿ ತನ್ನ ಕುಟುಂಬದೊಂದಿಗೆ ಕರೀಮತಿಯಲ್ಲಿ ವಾಸಿಸುತ್ತಿದ್ದರು. ಇದು ಸಿಮ್ದೆಗ ಜಿಲ್ಲೆಯ ಜ್ಲ್ದೆಗ ಬ್ಲಾಕ್ನ ಪ್ತಿಂಬ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ.
ಮಾಧ್ಯಮದೊಂದಿಗೆ ಮಾತನಾಡಿರುವ ಜಾರ್ಖಂಡ್ನ ಆಹಾರ ಸರಬರಾಜು ಮಂತ್ರಿ ಆಧಾರ್ ಲಿಂಕ್ ಇಲ್ಲದಿದ್ದರೆ ಬಿಪಿಎಲ್ ಕಾರ್ಡ್ ಅನ್ನು ನಿರಾಕರಿಸುವಂತಹ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Clear instructions that ration shouldn't be denied to those who haven't linked ration card with Aadhaar:Min in charge of Food&Civil Supplies pic.twitter.com/MPRTEXFheF
— ANI (@ANI) October 17, 2017
ಸಂತೋಷ್ ಅವರ ಕುಟುಂಬವು ಬಡತನ ರೇಖೆಗಿಂತ ಕೆಳಗಿರುವ ಕುತುಮ್ಬವಾಗಿತ್ತು. ಅವರ ಗಳಿಕೆಯನ್ನು ಉಳಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ. ಸಂತೋಷ್ನ ತಾಯಿಯು ಮನೆಯಲ್ಲಿಯೇ ಕೆಲಸ ಮಾಡುವ ಮೂಲಕ ಏನನ್ನಾದರೂ ಸಂಪಾದಿಸುತ್ತಿದ್ದರು.ಆದರೆ, ಕಳೆದ ಹಲವಾರು ದಿನಗಳಿಂದ, ಅವರು ಕೆಲಸ ಮಾಡಿ ಹಣ ಸಂಪಾದಿಸಲು ಸಾಧ್ಯವಾಗಿರಲಿಲ್ಲ. ತಂದೆ ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಿರುತ್ತಾನೆ. ಈ ಸಂದರ್ಭದಲ್ಲಿ, ಇಡೀ ಕುಟುಂಬವು ಸರ್ಕಾರವು ಒದಗಿಸಿದ ರಾಷ್ಟ್ರೀಯ ಆಹಾರ ಭದ್ರತೆಗೆ ಅವಲಂಬಿತವಾಗಿದೆ. ಆದರೆ ಔಪಚಾರಿಕತೆಗಳನ್ನು ಪೂರೈಸಲು ಸರ್ಕಾರ ವಿಫಲವಾದ ಕಾರಣ, ಅವರು ಲಾಭ ಪಡೆಯಲಿಲ್ಲ. ಸುದ್ದಿಯ ಪ್ರಕಾರ ಸಂತೋಶ್ ಕುಮಾರಿ ಶಾಲೆಯಲ್ಲಿ ದೊರೆಯುವ ಮಧ್ಯಾಹ್ನದ ಬಿಸಿ ಊಟದ ಮೂಲಕ ಹಸಿವು ನೀಗಿಸಿಕೊಳ್ಳುತಿದ್ದಳು. ಆದರೆ ಆ ದಿನಗಳಲ್ಲಿ (ಸೆಪ್ಟೆಂಬರ್ 28 ರಂದು) ದಸರಾ ರಜಾದಿನಗಳಲ್ಲಿ ಶಾಲೆಗಳನ್ನು ಮುಚ್ಚಲಾಯಿತು ಅದರಿಂದಾಗಿ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.