ನವದೆಹಲಿ : Banana Benefits For Women: ಮಹಿಳೆಯರು ಇಡೀ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಯಾರು ಏನು ತಿನ್ನಬೇಕು, ಏನು ತಿನ್ನಬಾರದು ಯಾರ ಆರೋಗ್ಯಕ್ಕೆ ಯಾವುದು ಉತ್ತಮ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಹಿಳೆಯರೇ ಆಗಿರುತ್ತಾರೆ. ಆದರೆ ಅವರ ಆರೋಗ್ಯದ (Women health) ವಿಚಾರ ಬಂದಾಗ ಮಹಿಳೆಯರು ಅಸಡ್ಡೆ ತೋರುವುದೇ ಹೆಚ್ಚು. ಯಾಕೆಂದರೆ, ಹೆಚ್ಚಿನ ಮಹಿಳೆಯರು ಕುಟುಂಬವನ್ನು ನೋಡಿಕೊಳ್ಳುವಲ್ಲಿಯೇ ನಿರತರಾಗಿರುತ್ತಾರೆ. ಅವರ ಆರೋಗ್ಯ ಆಹಾರದ ವಿಚಾರ ಬಂದಾಗ, ಮಹಿಳೆಯರು ಗಂಭೀರವಾಗಿರುವುದೇ ಇಲ್ಲ. 45 ವರ್ಷ ದಾಟಿದ ನಂತರ ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು (women health problem) ಉಂಟಾಗುವುದಕ್ಕೆ ಇದೂ ಒಂದು ಕಾರಣವಾಗಿದೆ.
ಅತಿಯಾದ ಕೆಲಸ, ಪೀರಿಯೆಡ್ಸ್, ಗರ್ಭಧಾರಣೆ, ಟೆನ್ಶನ್ ನಿಂದಾಗಿ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುತ್ತಾರೆ. ಆದರೆ ಅದರ ಅರಿವು ಅನೇಕ ಮಹಿಳೆಯರಿಗೆ ಇರುವುದೇ ಇಲ್ಲ. ಆದರೆ ಎಲ್ಲರ ಆರೋಗ್ಯದ (Women Health) ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಿದರೆ ಆಗಬಹುದಾದ ತೊಂದರೆಯನ್ನು ತಪ್ಪಿಸಬಹುದು. ಆಹಾರದ ಬಗ್ಗೆ ಸರಿಯಾದ ಕಾಳಜಿ ವಹಿಸಿದರೆ, ಎದುರಾಗಬಹುದಾದ ಆರೋಗ್ಯ ಸಮಸ್ಯೆಯನ್ನು ತಪ್ಪಿಸಬಹುದು.
ಇದನ್ನೂ ಓದಿ : Avoid Curd In Monsoon: ಮಳೆಗಾಲದಲ್ಲಿ ಮೊಸರು ಸೇವನೆ ಈ ಸಮಸ್ಯೆಗಳಿಗೆ ಕಾರಣವಾಗಬಹುದು
ಪ್ರತಿ ಮಹಿಳೆ ಪ್ರತಿದಿನ ಸಂಪೂರ್ಣ ಆಹಾರವನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಸೀಸನಲ್ ಹಣ್ಣುಗಳ ಸೇವನೆಯೂ ಸೇರಿದೆ. ಆದರೆ, ನಿತ್ಯ ಬಾಳೆಹಣ್ಣಿನ ಸೇವನೆ ಮಹಿಳೆಯರ ಆರೋಗ್ಯಕ್ಕೆ ವರವಾಗಿ ಪರಿಣಮಿಸಲಿದೆ (benefits of Banana).
ಮಹಿಳೆಯರು ಪ್ರತಿದಿನ ಬಾಳೆಹಣ್ಣನ್ನು ಏಕೆ ತಿನ್ನಬೇಕು?
1.ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ಗ್ಲೂಕೋಸ್ ಅನ್ನು ಹೊಂದಿರುತ್ತದೆ. ದಿನವಿಡೀ ಕೆಲಸ ಮಾಡಲು ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
2.ಬಾಳೆಹಣ್ಣಿನಲ್ಲಿ (banana) ಮೆಗ್ನೀಸಿಯಮ್ ಪ್ರಮಾಣ ಹೇರಳವಾಗಿರುತ್ತದೆ. ಈ ಕಾರಣದಿನದಾಗಿ ಬಾಳೆಹಣ್ಣು ತಿಂದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವುದಿಲ್ಲ.
3. ಬಾಳೆಹಣ್ಣು ಫೋಲಿಕ್ ಆಸಿಡ್ ಅನ್ನು ಹೊಂದಿರುತ್ತದೆ. ಇದು ಮಹಿಳೆಯರ ದೇಹಕ್ಕೆ ಅತ್ಯಗತ್ಯ ಅಂಶವಾಗಿದೆ.
4.ಬಾಳೆಹಣ್ಣಿನಲ್ಲಿ ಬಹಳಷ್ಟು ಪೊಟ್ಯಾಸಿಯಮ್ ಇದೆ ಎ ನಮನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ದರಿಂದ, ಇದನ್ನು ತಿನ್ನುವುದರಿಂದ ಒತ್ತಡದ ಮಟ್ಟ ಕಡಿಮೆಯಾಗುತ್ತದೆ.
5. ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶವಿರುತ್ತದೆ. ಇದು ದೇಹದಲ್ಲಿ ರಕ್ತದ ಕೊರತೆಯಾಗದಂತೆ (Anemia) ನೋಡಿಕೊಳ್ಳುತ್ತದೆ.
ಇದನ್ನೂ ಓದಿ : Rice Water And Aloevera: ಅಲೋವೆರಾ, ಅಕ್ಕಿ ನೀರನ್ನು ಈ ರೀತಿ ಬಳಸಿ ಸುಂದರ ತ್ವಚೆ ನಿಮ್ಮದಾಗಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ