IND vs PAK ಪಂದ್ಯ ನೋಡಲು ಧೋನಿ ಮಾಡಿದ ಕೆಲಸಕ್ಕೆ ಫ್ಯಾನ್ಸ್‌ ಫಿದಾ..! ಇದಲ್ವಾ ನಾಯಕನ ಗುಣ.. ಸೂಪರ್‌ MSD ಸರ್‌..

IND vs PAK live score : ಪ್ರತಿಯೊಬ್ಬ ಅಭಿಮಾನಿಯೂ ಕಾತರದಿಂದ ಕಾಯುತ್ತಿದ್ದ 2025 ರ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ (IND vs PAK) ದುಬೈನಲ್ಲಿ ನಡೆಯುತ್ತಿದೆ. ಫೆಬ್ರವರಿ 23, 2025 ರಂದು ಮಧ್ಯಾಹ್ನ 2.30 ಕ್ಕೆ ಪ್ರಾರಂಭವಾದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್‌ ಮಾಡುತ್ತಿದೆ.. ಇದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ವಿಡಿಯೋ ಒಂದು ವೈರಲ್‌ ಆಗಿದೆ.

Written by - Krishna N K | Last Updated : Feb 23, 2025, 08:18 PM IST
    • ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ
    • ಟೀಂ ಇಂಡಿಯಾ ಮಾಜಿ ನಾಯಕ ಧೋನಿ ವಿಡಿಯೋ ಒಂದು ವೈರಲ್‌ ಆಗಿದೆ.
    • ಧೋನಿ ಸಧ್ಯ ಮ್ಯಾಚ್‌ ನೋಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ.
IND vs PAK ಪಂದ್ಯ ನೋಡಲು ಧೋನಿ ಮಾಡಿದ ಕೆಲಸಕ್ಕೆ ಫ್ಯಾನ್ಸ್‌ ಫಿದಾ..! ಇದಲ್ವಾ ನಾಯಕನ ಗುಣ.. ಸೂಪರ್‌ MSD ಸರ್‌.. title=

IND vs PAK MS Dhoni : ಐಸಿಸಿ ಚಾಂಪಿಯನ್ಸ್ ಟ್ರೋಫಿಯಂತಹ ಮಹತ್ವದ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗ, ಕ್ರಿಕೆಟ್‌ ಬಗ್ಗೆ ಗಾಳಿ ಗಂಧ ಗೊತ್ತಿಲ್ಲದವರೂ ಮ್ಯಾಚ್‌ ನೋಡಲು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಈ ಪಂದ್ಯವನ್ನು ತಪ್ಪಿಸಿಕೊಳ್ಳಲು ಯಾರೂ ಇಷ್ಟ ಪಡುವುದಿಲ್ಲ ಬಿಡಿ..

ಅದರಂತೆ, ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಎಂಎಸ್ ಧೋನಿ ಮತ್ತು ಬಾಲಿವುಡ್ ತಾರೆ ಸನ್ನಿ ಡಿಯೋಲ್ ಒಟ್ಟಿಗೆ ಪಂದ್ಯವನ್ನು ನೋಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುವ ಧೋನಿ ಸಧ್ಯ ಮ್ಯಾಚ್‌ ನೋಡುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. 

ಇದನ್ನೂ ಓದಿ:Champions trophy 2025: ODI ನಲ್ಲಿ ಸಚಿನ್ ದಾಖಲೆ ಮುರಿದು ಸಾಧನೆಯ ಮೈಲಿಗಲ್ಲು ತಲುಪಿದ ಕೊಹ್ಲಿ

ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಎಲ್ಲಾ ಕೆಲಸವನ್ನು ನಿಲ್ಲಿಸಿ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಮುಂಬೈನಲ್ಲಿ ಜಾಹೀರಾತಿನ ಚಿತ್ರೀಕರಣದಲ್ಲಿ ನಿರತರಾಗಿದ್ದ ಧೋನಿ, ಅಲ್ಲಿ ತಮ್ಮ ಕೆಲಸವನ್ನು ನಿಲ್ಲಿಸಿ ಸ್ವಲ್ಪ ಹೊತ್ತು ಪಂದ್ಯವನ್ನು ವೀಕ್ಷಿಸಿದರು. ಅವರ ಜೊತೆ ಅನೇಕ ತಾಂತ್ರಿಕ ಕಲಾವಿದರು ಇದ್ದರು.

ಅಷ್ಟೇ ಅಲ್ಲ ಬಾಲಿವುಡ್ ಸೂಪರ್ ಸ್ಟಾರ್ ಸನ್ನಿ ಡಿಯೋಲ್ ಕೂಡ ಪಂದ್ಯ ವೀಕ್ಷಿಸಲು ಬಂದಾಗ, ಧೋನಿ ಕೂಡ ಎದ್ದು ನಿಂತು ಅವರನ್ನು ಅಪ್ಪಿಕೊಂಡು ಪಂದ್ಯ ವೀಕ್ಷಿಸುವಂತೆ ಹೇಳಿದರು.. ಅದಾದ ನಂತರ, ಇಬ್ಬರು ಸ್ವಲ್ಪ ಹೊತ್ತು ಒಟ್ಟಿಗೆ ಕುಳಿತು ಪಂದ್ಯವನ್ನು ನೋಡಿದರು.. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News