ಹಾವು ಕಚ್ಚಿದವರ ಜೀವ ಉಳಿಸುವ ಏಕೈಕ ಮದ್ದು! ಈ ರೀತಿ ಮಾಡಿದ್ರೆ ದೇಹ ಸೇರೋದಿಲ್ಲ ವಿಷ..

Snake Bite Remedy: ಎಲ್ಲಾ ಹಾವುಗಳು ವಿಷಕಾರಿಯಲ್ಲ. ಆದರೆ ಯಾರಿಗಾದರೂ ಹಾವು ಕಚ್ಚಿದರೆ, ನಾವು ವಿಷದ ತೀವ್ರತೆಯ ಬಗ್ಗೆ ಗಾಬರಿಯಾಗುವುದು ಸಹಜ, ಅದರಲ್ಲೂ ವಿಶೇಷವಾಗಿ ಹಾವು ಕಚ್ಚಿದ್ದು ಮಗು ಅಥವಾ ವಯಸ್ಸಾದ ವ್ಯಕ್ತಿಯೆನಾದರು ಆಗಿದ್ದರೆ ಬದುಕುಳಿಯುವುದು ಕಷ್ಟ ಎಂದು ಜನ ತಮಗೆ ತಾವೇ ಊಹಿಸಿಕೊಳ್ಳುತ್ತಾರೆ. ಆದರೆ ಈ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಬಹಳ ಜಾಗರೋಕತೆಯಿಂದ ಎದುರಿಸಿವುದು ಅಗತ್ಯ.  
 

1 /6

ಹಾವು ಕಡಿತಗಳು ಭಯಪಡುವಂತದ್ದಲ್ಲ. ಅದರ ಬದಲಾಗಿ ಈ ಪ್ರಥಮ ಚಿಕಿತ್ಸೆ ಸಲಹೆಗಳನ್ನು ಪಾಲಿಸಿ: ಮೊದಲು ದೇಹದ ಕಚ್ಚಿದ ಭಾಗದ ಸುತ್ತಲೂ ಬಿಗಿಯಾಗಿರುವ ವಸ್ತುಗಳಿದ್ದರೆ ಅದನ್ನು ತೆಗೆದುಹಾಕಿ (ಉದಾ: ಉಂಗುರಗಳು, ದಾರ, ಬಳೆಗಳು) ಏಕೆಂದರೆ ಇವುಗಳಿಂದ ಉಂಟಾದ ಊತದಿಂದ  ಹಾನಿಯಾಗುತ್ತದೆ.ಗಾಯಾಳುಗಳಿಗೆ ಧೈರ್ಯ ತುಂಬಿ. ಎಲ್ಲಾ ಹಾವು ಕಡಿತಗಳು ವಿಷಕಾರಿಯಲ್ಲ ಒಂದುವೇಳೆ  ವಿಷಕಾರಿ ಹಾವಿನ ಕಡಿತದ ನಂತರವೂ ಚಿಕಿತ್ಸೆಯ ಮೂಲಕ ಬದುಕಿಸಬಹುದು.  

2 /6

ಸಾಮಾನ್ಯ ಪ್ರಥಮ ಚಿಕಿತ್ಸಾ ವಿಧಾನಗಳಾದ ಗಿಡಮೂಲಿಕೆ ಔಷಧಿಗಳು ಮತ್ತು ಸುರಕ್ಷಿತ ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡಿ ವ್ಯಕ್ತಿಗೆ ಸಾಧ್ಯವಾದಷ್ಟು ಬೇಗ ಆರೋಗ್ಯ ಸೌಲಭ್ಯ ಒದಗಿಸಿ.  

3 /6

ಕಚ್ಚಿದ ಸ್ಥಳವನ್ನು ನೀರಿನಿಂದ ತೊಳೆಯಬೇಡಿ. ಚರ್ಮ ಮತ್ತು ಬಟ್ಟೆಯ ಮೇಲೆ ಉಳಿದಿರುವ ವಿಷವು ಹಾವನ್ನು ಗುರುತಿಸಲು ಸಹಾಯ ಮಾಡುತ್ತದೆ. ರಕ್ತ ಪರಿಚಲನೆಯನ್ನು ನಿಲ್ಲಿಸಲು ಟೂರ್ನಿಕೆಟ್ (ಪಟ್ಟಿ) ಹಾಕಬೇಡಿ.ಗಾಯವನ್ನು ಕತ್ತರಿಸಬೇಡಿ. ವಿಷವನ್ನು ಬಾಯಿಂದ ಹೀರವುದು ಅಪಾಯಕಾರಿ, ಕಚ್ಚಿದ ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ.  

4 /6

ಮೊದಲು, ಕಚ್ಚಿದ ಜಾಗದ ಮೇಲೆ ರೋಲರ್ ಬ್ಯಾಂಡೇಜ್ (10cm ನಿಂದ 15cm ಅಗಲ) ಹಾಕಿ. ಬ್ಯಾಂಡೇಜ್ ಬಿಗಿಯಾಗಿರಬೇಕು, ಸ್ಪ್ಲಿಂಟ್‌ಗಳನ್ನು ಬಳಸುವ ಮೂಲಕ ಅಂಗ ಚಲಿಸದಂತೆ ನಿಲ್ಲಿಸಿ.ಕಚ್ಚಿದ ಸಮಯ ಮತ್ತು ಬ್ಯಾಂಡೇಜ್ ಅನ್ನು ಯಾವಾಗ ಹಾಕಲಾಯಿತು ಎಂಬುವುದನ್ನ ನೆನಪಿಟ್ಟುಕೊಳ್ಳಿ.ಸಾಧ್ಯವಾದರೆ ಬ್ಯಾಂಡೇಜ್ ಮೇಲೆ ಕಚ್ಚಿದ ಸ್ಥಳವನ್ನು ಪೆನ್ನಿನಿಂದ ಗುರುತಿಸಿ ಅಥವಾ ಕಚ್ಚಿದ ಸ್ಥಳದ ಫೋಟೋ ತೆಗೆದುಕೊಳ್ಳಿ.  

5 /6

ಕೆಲವು ಜನರಲ್ಲಿ, ಹಾವು ಕಡಿತದಿಂದ ಬಹಳಷ್ಟು ರಕ್ತಸ್ರಾವವಾಗಬಹುದು ಇದಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ ನಿರೋದಕ ಔಷದ ನೀಡಿದ ನಂತರ ವೈದ್ಯರು ಇದಕ್ಕೆ ಚಿಕಿತ್ಸೆ ನೀಡುತ್ತಾರೆ.   

6 /6

ಕೆಲವರಿಗೆ ಶಸ್ತ್ರಚಿಕಿತ್ಸೆಯ  ಅಗತ್ಯವಿರುತ್ತದೆ. ಕೆಲವೊಮ್ಮೆ, ಹಾವು ಕಡಿತವು "ರಾಬ್ಡೋಮಿಯೊಲಿಸಿಸ್‌" ( ಸ್ನಾಯು ಅಂಗಾಂಶವು ಒಡೆಯುವುದು) ಗೆ ಕಾರಣವಾಗಬಹುದು. ಇದು ಸಂಭವಿಸಿದಲ್ಲಿ, ನಿಮ್ಮನ್ನು ತೀವ್ರ ನಿಗಾ ಘಟಕಕ್ಕೆ (ICU) ಕರೆದೊಯ್ಯಲಾಗುತ್ತದೆ ಮತ್ತು ಡ್ರಿಪ್ ಮೂಲಕ ಇಂಟ್ರಾವೆನಸ್ (IV) ದ್ರವಗಳನ್ನು ನೀಡಲಾಗುತ್ತದೆ.