Shreyanka Patil boyfriend : ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ RCB ಪಡೆ 4 ವಿಕೆಟ್ಗಳಿಂದ ಜಯಗಳಿಸಿತು. ಇದೇ ಸಮಯದಲ್ಲಿ ಸ್ಟೇಡಿಯಂನಲ್ಲಿ ಶ್ರೇಯಾಂಕಾ ಪಾಟೀಲ್ ತಮ್ಮ ಗೆಳೆಯನ ಜೊತೆ ಕಾಣಿಸಿಕೊಂಡರು.. ಅಸಲಿಗೆ ಯಾರು ನಮ್ಮ ಪುಟ್ಟಿ ಹುಡುಗ.. ಬನ್ನಿ ನೋಡೋಣ..?
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ WPL ಪಂದ್ಯ ನಡೆಯಿತು. ಈ ಪಂದ್ಯದಲ್ಲಿ RCB ಗೆಲವು ಸಾಧಿಸಿತು.
ಇದೇ ವೇಳೆ ಪಂದ್ಯದ ಹೊರತಾಗಿ ಗಾಯದಿಂದಾಗಿ ಸ್ಪರ್ಧೆಯಿಂದ ಹೊರಗುಳಿದಿರುವ ಆರ್ಸಿಬಿ ಆಟಗಾರ್ತಿ ಶ್ರೇಯಂಕಾ ಪಾಟೀಲ್ ಸುದ್ದಿಯಲ್ಲಿದ್ದಾರೆ..
MI vs RCB ಪಂದ್ಯದ ಸಮಯದಲ್ಲಿ ಶ್ರೇಯಾಂಕ ಪಾಟೀಲ್ ಕ್ರೀಡಾಂಗಣದಲ್ಲಿದ್ದರು. ಈ ವೇಳೆ ಅವಳೊಂದಿಗಿದ್ದ ಕ್ರಿಕೆಟಿಗ ಎಲ್ಲರ ಗಮನ ಸೆಳೆದರು.
ಇವರು ಬೇರೆ ಯಾರೂ ಅಲ್ಲ, ಭಾರತೀಯ ಕ್ರಿಕೆಟಿಗ ಮಯಾಂಕ್ ಯಾದವ್. ಮಾಯಾಂಕ್ ಮತ್ತು ಶ್ರೇಯಾಂಕಾ ಒಟ್ಟಿಗೆ ಇರುವುದನ್ನು ನೋಡಿದ ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಅವರ ಸಂಬಂಧದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದಾರೆ.
ಶ್ರೇಯಾಂಕ ಮತ್ತು ಮಾಯಾಂಕ್ ಕೇವಲ ಸ್ನೇಹಿತರೇ ಅಥವಾ ಡೇಟಿಂಗ್ ಮಾಡುತ್ತಿದ್ದಾರೆಯೇ..? ಎಂಬ ಮುಂತಾದ ಪ್ರಶ್ನೆಗಳನ್ನು ನೆಟಿಜನ್ಗಳು ಕೇಳುತ್ತಿದ್ದಾರೆ.
ಇವು ವದಂತಿಗಳು... ಇಬ್ಬರೂ ಪ್ರಸ್ತುತ ಬೆಂಗಳೂರಿನ NCA ನಲ್ಲಿ ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುವುದು ಮಾತ್ರ ಸತ್ಯ..
ಈ ಮಧ್ಯ ಆರ್ಸಿಬಿಯ ಸ್ಟಾರ್ ಬೌಲರ್ ಶ್ರೇಯಾಂಕ ಪಾಟೀಲ್ ಡಬ್ಲ್ಯೂಪಿಎಲ್ನ ಮೊದಲ ವಾರದಲ್ಲೇ ಗಾಯಗೊಂಡರು. ಮಾಯಾಂಕ್ ಯಾದವ್ ಕೂಡ NCA ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.