ಧನಿಷ್ಠ ನಕ್ಷತ್ರದಲ್ಲಿ ಸೂರ್ಯನ ಸಂಚಾರ: ಈ ಐದು ರಾಶಿಯವರು ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತಾರೆ!!

Sun transits in Dhanishtha Nakshatra: ಗ್ರಹಗಳ ರಾಜ ಸೂರ್ಯದೇವ ಫೆಬ್ರವರಿ 6ರಂದು ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದು, ಫೆಬ್ರವರಿ 19ರಂದು ಸೂರ್ಯನು ಧನಿಷ್ಠ ನಕ್ಷತ್ರದಿಂದ ನಿರ್ಗಮಿಸಿ ಶತಭಿಷ ನಕ್ಷತ್ರದಲ್ಲಿರುತ್ತಾನೆ. ಸೂರ್ಯನು ಧನಿಷ್ಠ ನಕ್ಷತ್ರಪುಂಜಕ್ಕೆ ಪ್ರವೇಶಿಸುವುದರಿಂದ ಐದು ರಾಶಿಯ ಜನರು ಅಪಾರ ಆರ್ಥಿಕ ಲಾಭ ಪಡೆಯುತ್ತವೆ.

Sun transits in Dhanishtha Nakshatra: ಸೂರ್ಯನು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಫೆಬ್ರವರಿ 19ರವರೆಗೆ ಈ ನಕ್ಷತ್ರಪುಂಜದಲ್ಲಿಯೇ ಆತ ಇರುತ್ತಾರೆ. ನಂತರ ಫೆಬ್ರವರಿ 19ರಂದು ಸೂರ್ಯನು ಶತಭಿಷ ನಕ್ಷತ್ರಕ್ಕೆ ಹೋಗುತ್ತಾನೆ. ಧನಿಷ್ಠ ನಕ್ಷತ್ರದ 4 ಹಂತಗಳ ಮೂಲಕ ಸೂರ್ಯನು ಹಾದುಹೋಗುವುದರಿಂದ ವಿಶೇಷವಾಗಿ ಐದು ರಾಶಿಯ ಜನರು ಅಪಾರ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಇವರು ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಗ್ರಹಗಳ ರಾಜ ಸೂರ್ಯದೇವ ಫೆಬ್ರವರಿ 6ರಂದು ಧನಿಷ್ಠ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದು, ಫೆಬ್ರವರಿ 19ರಂದು ಸೂರ್ಯನು ಧನಿಷ್ಠ ನಕ್ಷತ್ರದಿಂದ ನಿರ್ಗಮಿಸಿ ಶತಭಿಷ ನಕ್ಷತ್ರದಲ್ಲಿರುತ್ತಾನೆ. ಸೂರ್ಯನು ಧನಿಷ್ಠ ನಕ್ಷತ್ರಪುಂಜಕ್ಕೆ ಪ್ರವೇಶಿಸುವುದರಿಂದ ಐದು ರಾಶಿಯ ಜನರು ಅಪಾರ ಆರ್ಥಿಕ ಲಾಭ ಪಡೆಯುತ್ತವೆ. ಇವರ ಆದಾಯವು ಒಂದಲ್ಲ ಒಂದು ರೂಪದಲ್ಲಿ ಹೆಚ್ಚಾಗುತ್ತಲೇ ಹೋಗುತ್ತದೆ. ಧನಿಷ್ಠ ನಕ್ಷತ್ರದಲ್ಲಿ ಸೂರ್ಯನು ಸಂಚಾರ ಮಾಡುವುದರಿಂದ ಯಾವ 5 ರಾಶಿಗಳು ಆರ್ಥಿಕ ಲಾಭ ಪಡೆಯುತ್ತವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

2 /7

ಧನು ರಾಶಿಯವರು ಆರ್ಥಿಕವಾಗಿ ಸಫಲತೆಯನ್ನು ಸಾಧಿಸಲಿದ್ದಾರೆ. ಈ ಸಂದರ್ಭದಲ್ಲಿ ಹಣ ಸಂಪಾದಿಸಲು ನೀವು ಯಶಸ್ವಿಯಾಗಲಿದ್ದೀರಿ. ಹೂಡಿಕೆ ಕೂಡ ಮಾಡಬಹುದಾಗಿದ್ದು, ರಿಸ್ಕ್ ಇರುವ ಹೂಡಿಕೆಗಳಿಂದ ದೂರವಿರಿ. ನಿಮ್ಮನ್ನ ಆರ್ಥಿಕವಾಗಿ ಬಲಿಷ್ಠರಾಗಿಸುವಂತಹ ಸಾಮರ್ಥ್ಯ ಹೊಂದಿರುವಂತಹ ವ್ಯಕ್ತಿಗಳ ಜೊತೆಗೆ ಸ್ನೇಹ ಮಾಡಿರಿ. ಹಣಕಾಸು ಸಂಪಾದಿಸುವ ವಿಚಾರದಲ್ಲಿ ನೀವು ವಿಜಯ ಸಾಧಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಸಹ ನೀವು ಅಭಿವೃದ್ಧಿಯನ್ನು ಸಾಧಿಸುವುದು ಖಚಿತ. ಈ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆಗಿನ ನಿಮ್ಮ ಬಾಂಧವ್ಯ ಇನ್ನಷ್ಟು ಉತ್ತಮವಾಗಲಿದೆ.

3 /7

ಮೇಷ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದಾಗಿರುತ್ತದೆ. ನಿಮ್ಮ ಆರ್ಥಿಕ ಜೀವನದಲ್ಲಿ ಸುಧಾರಣೆಯ ಲಕ್ಷಣಗಳಿವೆ. ನಿಮ್ಮ ಆದಾಯ ಹೆಚ್ಚಾಗಬಹುದು. ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಿಸುವ ಅನೇಕ ಅವಕಾಶಗಳು ಸಿಗುತ್ತವೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಸಂಬಳ ಸಿಗಲಿದೆ.  

4 /7

ಕಟಕ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭವಾಗುತ್ತದೆ. ಶೀಘ್ರವೇ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ನೀವು ವೃತ್ತಿ ಜೀವನದಲ್ಲಿ ಹೊಸ ಯಶಸ್ಸು ಕಾಣುತ್ತೀರಿ. ನಿಮ್ಮ ಎಲ್ಲಾ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಾಲವಾಗಿ ನೀಡಿರುವ ಹಣ ನಿಮ್ಮ ಕೈಸೇರಲಿದೆ. ಪ್ರಗತಿಯ ಸಾಧ್ಯತೆಗಳಿದ್ದು, ದೊಡ್ಡ ಜವಾಬ್ದಾರಿಯೂ ಸಿಗಬಹುದು. ಇದು ಹೂಡಿಕೆ ಮಾಡಲು ಒಳ್ಳೆಯ ಸಮಯ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. 

5 /7

ಮಕರ ರಾಶಿಯವರ ಸಾಲದ ಹಣವನ್ನು ವಾಪಸ್‌ ಪಡೆಯಬಹುದು. ಉದ್ಯೋಗದಲ್ಲಿರುವವರಿಗೆ ವಿದೇಶ ಪ್ರಯಾಣ ಮಾಡುವ ಅವಕಾಶ ಸಿಗಬಹುದು. ಇದು ಅವರಿಗೆ ತೃಪ್ತಿ ನೀಡುತ್ತದೆ. ಆಮದು-ರಫ್ತು ವಲಯದ ಉದ್ಯಮಿಗಳು ಬೆಳವಣಿಗೆ ಮತ್ತು ಲಾಭದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಸಾಕಷ್ಟು ಹಣವಿದ್ದರೆ ಉಳಿತಾಯ ಮಾಡಲು ಸಹ ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಜೀವನ ಮತ್ತಷ್ಟು ಪ್ರಗತಿಯಾಗಲಿದೆ. ಹಠಾತ್‌ ಧನಲಾಭದಿಂದ ನೀವು ಐಷಾರಾಮಿ ಜೀವನ ನಡೆಸುತ್ತೀರಿ.

6 /7

ವೃಶ್ಚಿಕ ರಾಶಿಯವರಿಗೆ ಈ ಸಮಯವು ಉತ್ತಮವಾಗಿರುತ್ತದೆ. ಉದ್ಯೋಗಿಗಳು ಮತ್ತು ಉದ್ಯಮಿಗಳು ಇಬ್ಬರಿಗೂ ಒಳ್ಳೆಯದಾಗುತ್ತದೆ. ನೀವು ಕೆಲಸದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳು ಷೇರು ಮಾರುಕಟ್ಟೆಯಿಂದ ಉತ್ತಮ ಲಾಭ ಗಳಿಸಬಹುದು. ಕಠಿಣ ಪರಿಶ್ರಮ, ಸಮರ್ಪಣೆ ಆರ್ಥಿಕ ಪ್ರಯೋಜನಗಳನ್ನು ತರುತ್ತದೆ. ವೈಯಕ್ತಿಕ ಜೀವನದಲ್ಲಿ, ಸಂಬಂಧಗಳಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗುತ್ತವೆ. ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಕುಟುಂಬದಲ್ಲಿ ನೆಮ್ಮದಿ ಇರಲಿದೆ. 

7 /7

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)