ಶಾಕಿಂಗ್‌..!! ಪ್ರಿಯಕರನಿಂದ ಮಾಜಿ ಬಿಗ್‌ಬಾಸ್‌ ಸ್ಪರ್ಧಿಯ ಮೇಲೆ ಹಲ್ಲೆ.. ಕಿರುಕುಳ

Tina Datta : ತಮ್ಮ ನಟನಾ ಕೌಶಲ್ಯದಿಂದ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದ, ಸ್ಟಾರ್‌ ನಟಿ ಇದೀಗ ತನ್ನ ಗೆಳೆಯನಿಂದ ಸಾರ್ವಜನಿಕವಾಗಿ ಹಲ್ಲೆಗೊಳಗಾಗಿದ್ದಾಳೆ.. ಈ ಸುದ್ದಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅಷ್ಟಕ್ಕೂ ಹಲ್ಲೆಗೊಳಗಾದ ಆ ನಟಿ ಯಾರು..? ಬನ್ನಿ ನೋಡೋಣ..
 

1 /8

ನಟಿ, ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ತನ್ನ ಗೆಳೆಯನಿಂದ ಸಾರ್ವಜನಿಕವಾಗಿ ಹಲ್ಲೆಗೊಳಗಾಗಿದ್ದಾರೆ. ಈ ಸುದ್ದಿ ಇದೀಗ ವೈರಲ್‌ ಆಗಿದೆ.  

2 /8

ಆಕೆ ಬೇರೆ ಯಾರೂ ಅಲ್ಲ ಟೀನಾ ದತ್ತ.. ಕೋಲ್ಕತ್ತಾ ಮೂಲದ ನಟಿ, 5ನೇ ವಯಸ್ಸಿನಲ್ಲಿ ಬಂಗಾಳಿ ಧಾರಾವಾಹಿಗಳು ಮತ್ತು ಚಲನಚಿತ್ರಗಳ ಮೂಲಕ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.  

3 /8

2003 ರ ಹಿಂದಿ ಚಲನಚಿತ್ರ ಚೋಖೇರ್ ಬಾಲಿಯಲ್ಲಿ ಐಶ್ವರ್ಯಾ ರೈ ಅವರೊಂದಿಗೆ ನಟಿಸಿ ಮುನ್ನೆಲೆಗೆ ಬಂದರು.   

4 /8

ಅಲ್ಲದೆ, ಟೀನಾ ಗೆಳೆಯ ಅವರನ್ನು ಸಾರ್ವಜನಿಕವಾಗಿ ಹೊಡೆದು ಅವಮಾನಿಸಿದ್ದ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.   

5 /8

ಹೌದು.. ನಾನು ಐದು ವರ್ಷಗಳಿಂದ ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದೆ. ನಾವು ಸಾಮಾನ್ಯ ಸ್ನೇಹಿತರ ಮೂಲಕ ಭೇಟಿಯಾಗಿದ್ದೆವು. ಆದರೆ ಅವನು ಮೌಖಿಕವಾಗಿ ಮತ್ತು ದೈಹಿಕವಾಗಿ ತುಂಬಾ ಹಿಂಸೆ ನೀಡುತ್ತಿದ್ದ ಎಂದು ಟೀನಾ 2019 ರ ಜನವರಿಯಲ್ಲಿ ಬಿಟಿಗೆ ತಿಳಿಸಿದ್ದರು.  

6 /8

ಟೀನಾ ದತ್ತಾ ತಮ್ಮ ಮಾಜಿ ಸ್ನೇಹಿತನ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದ್ದಾರೆ.. ಮನೆಗೆ ನುಗ್ಗಲು ಯತ್ನಿಸಿದ್ದಾಗಿಯೂ ನಟಿ ಹೇಳಿಕೊಂಡಿದ್ದರು.   

7 /8

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಟೀನಾಗೆ ವಾರಕ್ಕೆ 8-9 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು ಎಂದು ಹೇಳಲಾಗಿತ್ತು. ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಎಂದು ವರದಿಯಾಗಿತ್ತು.  

8 /8

ಪ್ರಸ್ತುತ, ಧಾರಾವಾಹಿ ಮತ್ತು ಸಿನಿಮಾ ಎರಡರಿಂದಲೂ ದೂರ ಸರಿದಿರುವ ಟೀನಾ ದತ್ತಾ, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. 65 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆಂದು ವರದಿಯಾಗಿದೆ.