ಮಾಜಿ ಸಿಎಂ ಕೇಜ್ರಿವಾಲ್‌ಗೆ ಸೋಲಿನ ರುಚಿ ತೋರಿಸಿದ ಬಿಜೆಪಿ ಅಭ್ಯರ್ಥಿ ಯಾರ್‌ ಗೊತ್ತೆ..? ಮುಂದಿನ CM ಇವರೇನಾ..?

Parvesh Sahib Singh Verma : ನವದೆಹಲಿ ಕ್ಷೇತ್ರದಿಂದ ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಅವರು ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.. ಕಳೆದ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದ ಪರ್ವೇಶ್ ವರ್ಮಾ, ಸದ್ಯ ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ್ದಿದ್ದರು.

1 /9

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರು ನವದೆಹಲಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.. ಪರ್ವೇಶ್ ವರ್ಮಾ ಅವರು ಮೊದಲ ಬಾರಿಗೆ 16ನೇ ಲೋಕಸಭೆಗೆ ಮೇ 2014 ರಲ್ಲಿ ಆಯ್ಕೆಯಾಗಿದ್ದರು.   

2 /9

ನಂತರ ಅವರು 2019 ರ ರಾಷ್ಟ್ರೀಯ ಚುನಾವಣೆಯಲ್ಲಿ ಮರು ಆಯ್ಕೆಯಾದರು. ಕಳೆದ ಲೋಕಸಭಾ ಚುನಾವಣೆಯಿಂದ ದೂರ ಉಳಿದಿದ್ದ ಪರ್ವೇಶ್ ವರ್ಮಾ, ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಎಪಿ ನಾಯಕ ಕೇಜ್ರಿವಾಲ್ ವಿರುದ್ಧ ಗೆದ್ದರು.  

3 /9

ಪರ್ವೇಶ್ ವರ್ಮಾ ಅವರು ಹಿರಿಯ ಬಿಜೆಪಿ ನಾಯಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ರಾಷ್ಟ್ರ ರಾಜಧಾನಿಯ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬಗಳಲ್ಲಿ ಒಂದು. ಅವರ ಚಿಕ್ಕಪ್ಪ ಆಜಾದ್ ಸಿಂಗ್ ಪ್ರಸ್ತುತ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿದ್ದಾರೆ.   

4 /9

ನವೆಂಬರ್ 7, 1977 ರಂದು ಜನಿಸಿದ ವರ್ಮಾ. ಆರ್ ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಅದಾದ ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿಗೆ ಸೇರಿದರು. ಫೋರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  

5 /9

2013 ರ ವಿಧಾನಸಭಾ ಚುನಾವಣೆಯಲ್ಲಿ ಮೆಹ್ರೌಲಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದರು. ಅವರು ಮೆಹ್ರೌಲಿ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ಯೋಗಾನಂದ್ ಶಾಸ್ತ್ರಿ ಅವರನ್ನು ಸೋಲಿಸಿದರು. 2014 ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಸಂಸದರಾಗಿ ಗೆದ್ದರು.   

6 /9

2019 ರಲ್ಲಿ ಮತ್ತೊಮ್ಮೆ ಅದೇ ಕ್ಷೇತ್ರವನ್ನು ಉಳಿಸಿಕೊಂಡರು. ಸಂಸತ್ ಸದಸ್ಯರಾಗಿ, ಸಂಸತ್ ಸದಸ್ಯರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿಯ ಸದಸ್ಯರಾಗಿ ಮತ್ತು ನಗರಾಭಿವೃದ್ಧಿ ಸ್ಥಾಯಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.. ವರ್ಮಾ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. 2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎದುರಿಸಿದರು.  

7 /9

2019 ರ ಲೋಕಸಭಾ ಚುನಾವಣೆಯಲ್ಲಿ ವರ್ಮಾ ತಮ್ಮ ಕಾಂಗ್ರೆಸ್ ಪ್ರತಿಸ್ಪರ್ಧಿ ಮಹಾಬಲ್ ಮಿಶ್ರಾ ಅವರನ್ನು 5,78,486 ಮತಗಳ ಅಂತರದಿಂದ ಸೋಲಿಸಿದ್ದರು. ವರ್ಮಾ ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಲ್ಲದೆ, ದೆಹಲಿಯಲ್ಲಿ ಅತಿ ಹೆಚ್ಚು ಅಂತರದ ಗೆಲುವಿನ ಅಭ್ಯರ್ಥಿ ಎಂಬ ದಾಖಲೆಯನ್ನೂ ಸೃಷ್ಟಿಸಿದರು.   

8 /9

2020 ರ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಕರೆದ ನಂತರ ಚುನಾವಣಾ ಆಯೋಗವು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಕಾರಣ ವರ್ಮಾ ಅವರನ್ನು 24 ಗಂಟೆಗಳ ಕಾಲ ನಿಷೇಧಿಸಿತು.  

9 /9

ಇತ್ತೀಚೆಗೆ ನವದೆಹಲಿ ಕ್ಷೇತ್ರದಿಂದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದ ಪರ್ವೇಶ್ ವರ್ಮಾ ಅದ್ಧೂರಿ ಗೆಲುವು ಸಾಧಿಸಿದ್ದಾರೆ.. ಇದರೊಂದಿಗೆ, ಸದ್ಯ ದೆಹಲಿಯ ಮುಖ್ಯಮಂತ್ರಿ ಅಭ್ಯರ್ಥಿಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.. ಬಿಜೆಪಿ ಗೆಲುವಿನ ನಂತರ, ಪರ್ವೇಶ್ ವರ್ಮಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆಗೆ ಹೋಗಿ ಭೇಟಿಯಾದರು.