Story Behind Cinema: 'ಅಮರ್ ಅಕ್ಬರ್ ಆಂಟೋನಿ' ಕಥೆ ಹೊಳೆದ ಕೂಡಲೇ ನಿರ್ದೇಶಕ ಮನಮೋಹನ್ ದೇಸಾಯಿ ಅವರು ಪತ್ನಿ ಜೀವನ್ ಪ್ರಭಾರ ಬಳಿ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆಗ ಅವರ ಪತ್ನಿ ಹಾಗೂ ಪುಷ್ಪ ಶರ್ಮಾ ಸೇರಿಕೊಂಡು ಕಥೆಗೆ ಅಂತಿಮ ರೂಪವನ್ನು ನೀಡುತ್ತಾರೆ.
Amar Akbar Anthony: ಸಿನಿಮಾಗೆ ಕಥೆಗೆ ಎಲ್ಲಿಂದ ಬೇಕಾದರೂ ಸ್ಫೂರ್ತಿ ಸಿಗಬಹುದು. ನಿರ್ದೇಶಕರಿಗೆ, ಕಥೆಗಾರರಿಗೆ ಒಂದೇ ಒಂದು ಚಿಕ್ಕ ಎಳೆ ಸಿಕ್ಕರೂ ಇಡೀ ಸಿನಿಮಾದ ಕಥೆಯೇ ಸಿಕ್ಕಿಬಿಡುತ್ತದೆ. ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾವೊಂದಕ್ಕೆ ಇಂತಹದ್ದೇ ಒಂದು ಅದ್ಭುತ ಕಥೆ ಸಿಕ್ಕಿತ್ತು. ನ್ಯೂಸ್ ಪೇಪರ್‌ನಲ್ಲಿ ಬಂದಿದ್ದ ಚಿಕ್ಕದೊಂದು ಸುದ್ದಿ ಆ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಗೆ ಸೇರಿಸಿತ್ತು. ಚಿಕ್ಕ ನ್ಯೂಸ್ ಆಧರಿಸಿ ನಿರ್ಮಿಸಿದ ಈ ಸಿನಿಮಾ ಬರೋಬ್ಬರಿ 423 ಕೋಟಿ ರೂ. ಲೂಟಿ ಮಾಡಿತ್ತು. ಮಹಾನ್ ದಿಗ್ಗಜರು ನಟಿಸಿದ್ದ ಆ ಸಿನಿಮಾ ಯಾವುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಮನಮೋಹನ್ ದೇಸಾಯಿ... ಭಾರತೀಯ ಚಿತ್ರರಂಗಕ್ಕೆ ಹಲವು ಎವರ್‌ಗ್ರೀನ್ ಸಿನಿಮಾ ನೀಡಿರುವ ನಿರ್ದೇಶಕ. ಭಾರತೀಯರ ನಾಡಿ ಮೀಡಿತವನ್ನು ಚೆನ್ನಾಗಿ ಅರಿತಿದ್ದ ಈ ನಿರ್ದೇಶಕ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಪರಿಯೇ ಒಂದು ರೀತಿ ವಿಶೇಷ. ಬಾಲಿವುಡ್‌ನ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಇವರ ಬಹುತೇಕ ಎಲ್ಲಾ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ.
ಕಡಿಮೆ ಸಮಯದಲ್ಲಿ, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುವುದರಲ್ಲಿ ಈ ಮನಮೋಹನ್ ದೇಸಾಯಿ ಫೇಮಸ್. ಇವರು ನಿರ್ದೇಶಿಸಿದ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಒಂದು ದಿನ ಮನಮೋಹನ್ ದೇಸಾಯಿ ಅವರು ಸಂಜೆ ವೇಳೆ ಸಂಜೆ ಪತ್ರಿಕೆಯೊಂದನ್ನು ಓದುತ್ತಿದ್ದರು. ಆ ವೇಳೆ ನ್ಯೂಸ್ ಪೇಪರ್‌ನಲ್ಲಿ ಚಿಕ್ಕದೊಂದು ಸುದ್ದಿ ಪ್ರಕಟವಾಗಿತ್ತು. ಅದನ್ನು ಓದುತ್ತಿದ್ದಂತೆ ಮನಮೋಹನ್ ದೇಸಾಯಿಗೆ ಸೂಪರ್ ಹಿಟ್ ಸಿನಿಮಾದ ಕಥೆಯೇ ಹೊಳೆದು ಬಿಟ್ಟಿತ್ತು. ಅಲ್ಲಿಂದ ಶುರುವಾದ ಕೆಲಸ ಭಾರತೀಯ ಚಿತ್ರರಂಗ ಕಂಡ ಎವರ್‌ಗ್ರೀನ್ ಸಿನಿಮಾ ಕೊಡುವವರೆಗೂ ಸಾಗಿತ್ತು.
ನಿರ್ದೇಶಕ ಮನಮೋಹನ್ ದೇಸಾಯಿ ನಿರ್ದೇಶಿಸಿದ ಸಿನಿಮಾಗಳು ಕಣ್ಮುಂದೆ ಬರಬಹುದು. ಈ ಲೆಜೆಂಡರಿ ನಿರ್ದೇಶನಿಗೆ ಚಿಕ್ಕದೊಂದು ಸುದ್ದಿಯಿಂದ ಹೊಳೆದ ಆ ಸಿನಿಮಾ ಕತೆಯೇ 'ಅಮರ್ ಅಕ್ಬರ್ ಆಂಟೋನಿ'. ಈ ಸಿನಿಮಾ ಬಾಲಿವುಡ್ ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. 1977ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಅಂದು ಬರೋಬ್ಬರಿ 155 ಮಿಲಿಯನ್ ಡಾಲರ್ ಕಲೆ ಹಾಕಿತ್ತು. ಇಂದಿನ ಕಾಲಕ್ಕೆ ಹೋಲಿಸಿದರೆ ಅದರ ಮೌಲ್ಯ ಬರೋಬ್ಬರಿ 423 ಕೋಟಿ ರೂಪಾಯಿ ಆಗುತ್ತದೆ. ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ʼCineramaʼ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಇಂಟ್ರೆಸ್ಟಿಂಗ್ ಕಥೆಯನ್ನು ಹೇಳಿದ್ದಾರೆ.
"ಒಮ್ಮೆ ನಿರ್ದೇಶಕ ಮನಮೋಹನ್ ದೇಸಾಯಿಯವರು ಸಂಜೆ ಪತ್ರಿಕೆಯನ್ನು ಓದುತ್ತಿದ್ದರು. ಅದರಲ್ಲೊಂದು ಸುದ್ದಿ ಪ್ರಕಟವಾಗಿರುತ್ತದೆ. ಮದ್ಯ ವ್ಯಸನಿಯಾದ ತಂದೆಯೊಬ್ಬ ತನ್ನ ಮೂರು ಮಕ್ಕಳನ್ನು ಅನಾಥವಾಗಿ ಬಿಟ್ಟು ಎಲ್ಲೋ ಹೊರಟು ಹೋಗಿರುವ ಸುದ್ದಿ ಅದಾಗಿತ್ತು. ಈ ಸುದ್ದಿಯನ್ನು ಓದಿದ ಕೂಡಲೇ 'ಅಮರ್ ಅಕ್ಬರ್ ಆಂಟೋನಿ' ಕಥೆ ಸ್ಥೂಲವಾಗಿ ರೂಪುಗೊಳ್ಳುತ್ತದೆʼ ಎಂದು ಇಂಟ್ರೆಸ್ಟಿಂಗ್ ಕಥೆಯನ್ನು ಅವರು ಹೇಳಿದ್ದಾರೆ.
'ಅಮರ್ ಅಕ್ಬರ್ ಆಂಟೋನಿ' ಕಥೆ ಹೊಳೆದ ಕೂಡಲೇ ನಿರ್ದೇಶಕ ಮನಮೋಹನ್ ದೇಸಾಯಿ ಅವರು ಪತ್ನಿ ಜೀವನ್ ಪ್ರಭಾರ ಬಳಿ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆಗ ಅವರ ಪತ್ನಿ ಹಾಗೂ ಪುಷ್ಪ ಶರ್ಮಾ ಸೇರಿಕೊಂಡು ಕಥೆಗೆ ಅಂತಿಮ ರೂಪವನ್ನು ನೀಡುತ್ತಾರೆ. ಇದಾದ ಮೇಲೆ ಬಾಲಿವುಡ್‌ನ ಖ್ಯಾತ ನಟ ಹಾಗೂ ಸಂಭಾಷಣೆಗಾರ ಖಾದರ್ ಖಾನ್ ಡೈಲಾಗ್ ಬರೆಯುತ್ತಾರೆ. ಅಲ್ಲಿಗೆ ಒಂದು ಹಂತದಲ್ಲಿ ಸಿನಿಮಾ ಸಿದ್ಧವಾಗುತ್ತದೆ.
'ಅಮರ್ ಅಕ್ಬರ್ ಆಂಟೋನಿ'ಗೆ ದೊಡ್ಡ ತಾರಗಣವೇ ಬೇಕಿರುತ್ತದೆ. ಮೂರು ಪಾತ್ರಗಳಿಗೂ ಅಂದಿನ ಕಾಲದ ಸೂಪರ್‌ಸ್ಟಾರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ನಿರ್ದೇಶಕರ ಫೇವರಿಟ್ ಅಮಿತಾಭ್ ಬಚ್ಚನ್, ರಿಷಿ ಕಪೂರ್ ಹಾಗೂ ವಿನೋದ್ ಖನ್ನಾ ಈ ಪಾತ್ರಗಳಿಗೆ ಆಯ್ಕೆಯಾಗಿದ್ದರು. ಇವರಿಗೆ ಪರ್ವಿನ್ ಬಾಬಿ, ಶಬಾನಾ ಆಜ್ಮಿ ಹಾಗೂ ನೀತು ಸಿಂಗ್ ನಾಯಕಿಯರಾಗಿ ನಟಿಸಿದ್ದರು. ಜೊತೆಗೆ ಪ್ರಾಣ್, ಜೀವನ್ ಅಂತ ದಿಗ್ಗಜರು ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆದ ಮೇಲೆ ಬ್ಲ್ಯಾಕ್‌ಬಸ್ಟರ್ ಹಿಟ್ ಆಗುವ ಮೂಲಕ ದೊಡ್ಡ ದಾಖಲೆಯನ್ನೇ ನಿರ್ಮಿಸಿತ್ತು.