Actress Life : 1943 ರಲ್ಲಿ ಜನಿಸಿದ ಈ ಬಾಲಿವುಡ್ ನಟಿ ತನ್ನ ಜೀವನ ಇಷ್ಟೊಂದು ಕಷ್ಟಕರವಾಗಿರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಅನಿಸುತ್ತೆ.. ಗಂಡನಿಂದ ಜೀವನ ಹಾಳು ಮಾಡಿಕೊಂಡು, ಕೊನೆಗೆ ಗೆಳೆಯ ಈಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ.. ಯಾರು ಆ ನಟಿ..? ಬನ್ನಿ ನೋಡೋಣ..
"ವಿಮಿ" ಒಂದು ಕಾಲದಲ್ಲಿ ಪ್ರಮುಖ ನಟಿಯಾಗಿ ಮಿಂಚಿದ್ದರು.. ನಿರ್ದೇಶಕರು ಮತ್ತು ನಿರ್ಮಾಪಕರು ಈಕೆಯ ಮನೆ ಹೊರಗೆ ಸಾಲುಗಟ್ಟಿ ನಿಲ್ಲುತ್ತಿದ್ದರು.
ಈ ನಟಿಯ ಜೀವನದಲ್ಲಿ ಅನೇಕ ವಿಷಯಗಳು ಬಹಳ ಬೇಗನೆ ನಡೆದವು. ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಒಬ್ಬ ಉದ್ಯಮಿಯೊಂದಿಗೆ ಮದುವೆಯಾಗಿ, ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು.
ವಿಮಿಯ ವೃತ್ತಿಜೀವನವು ತುಂಬಾ ಸರಾಗವಾಗಿ ಪ್ರಾರಂಭವಾಯಿತು. ವಿಪರ್ಯಾಸ ಅಂದ್ರೆ, ಅತಿ ಹೆಚ್ಚಾಗಿ ವಿಮಿಯ ಕಾರ್ಯದರ್ಶಿಯ ಕೆಲಸವನ್ನು ಪತಿ ಮಾಡಲು ಪ್ರಾರಂಭಿಸಿದರು.
ಬರುಬರುತ್ತಾ.. ಅವಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದನು, ಇದು ಅವಳ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.
ವಿಮಿ ಆರ್ಥಿಕ ತೊಂದರೆಯಲ್ಲಿ ಸಿಲುಕಿದ್ದಲ್ಲದೆ, ಅದೇ ಸಮಯದಲ್ಲಿ, ಅವಳ ಪತಿಯೂ ಅವಳನ್ನು ಹೊಡೆಯಲು ಪ್ರಾರಂಭಿಸಿದನು. ಗಂಡನ ಕಿರುಕುಳ ದಿನೇ ದಿನೇ ಹೆಚ್ಚುತ್ತಿತ್ತು.
ಹೀಗೆಯೇ ಆಕೆ ನಿರ್ಮಾಪಕ ಜಾಲಿ ಎಂಬುವರ ಸಂಪರ್ಕಕ್ಕೆ ಬಂದು ಅವನನ್ನು ಪ್ರೀತಿಸತೊಡಗಿದಳು. ಆದರೆ ಮಿಮಿಗೆ ಇಲ್ಲಿಯೂ ನಿಜ ಪ್ರೀತಿ ಸಿಗಲಿಲ್ಲ. ಜಾಲಿ ವಿಮಿಯನ್ನು ವೇಶ್ಯಾವಾಟಿಕೆಗೆ ತಳ್ಳಿದಳು.