Snake Fruit Health Benefits: ಸ್ನೇಕ್ ಫ್ರೂಟ್ ಅಥವಾ ಸಲಕ್ ಹಣ್ಣು ಎಂದು ಕರೆಯಲ್ಪಡುವ ಇದು ಪೋಷಕಾಂಶಗಳ ಆಗರ. ಇದರ ಸಿಪ್ಪೆ ಹಾವಿನ ಚರ್ಮವನ್ನು ಹೋಲುವ ಕಾರಣದಿಂದ ಈ ಹಣ್ಣಿಗೆ ಸ್ನೇಕ್ ಫ್ರೂಟ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಇದರ ಮೂಲ ಇಂಡೋನೇಷ್ಯಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸ್ನೇಕ್ ಫ್ರೂಟ್ ಅಥವಾ ಸಲಕ್ ಹಣ್ಣು ಎಂದು ಕರೆಯಲ್ಪಡುವ ಇದು ಪೋಷಕಾಂಶಗಳ ಆಗರ. ಇದರ ಸಿಪ್ಪೆ ಹಾವಿನ ಚರ್ಮವನ್ನು ಹೋಲುವ ಕಾರಣದಿಂದ ಈ ಹಣ್ಣಿಗೆ ಸ್ನೇಕ್ ಫ್ರೂಟ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಇದರ ಮೂಲ ಇಂಡೋನೇಷ್ಯಾ.
ಸ್ನೇಕ್ ಫ್ರೂಟ್ ಸೇವಿಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತ್ರಾಣ ಹೆಚ್ಚಿಸಲು, ಮಕ್ಕಳು ಮತ್ತು ವೃದ್ಧರಲ್ಲಿ ಸ್ಮರಣ ಶಕ್ತಿಯನ್ನು ಬಲಪಡಿಸಲು, ಜೀರ್ಣಕ್ರಿಯೆ ಸುಧಾರಿಸಲು ಈ ಹಣ್ಣು ಬಹಳಷ್ಟು ಪ್ರಯೋಜಕಾರಿ.
ಸ್ನೇಕ್ ಫ್ರೂಟ್ ಅಥವಾ ಸಲಕ್ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಅನೇಕ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುವಲ್ಲಿ ಸಹಾಯ ಮಾಡುತ್ತದೆ.
ಸ್ನೇಕ್ ಫ್ರೂಟ್ನಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಬೀಟಾ ಕ್ಯಾರೋಟಿನ್ ಇದ್ದು, ಇದು ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ಕಣ್ಣುಗಳನ್ನು ಆರೋಗ್ಯವಾಗಿಡಬಹುದು. ಕಲ್ಲಂಗಡಿ ಮತ್ತು ಮಾವಿಗಿಂತ ಐದು ಪಟ್ಟು ಹೆಚ್ಚು ಬೀಟಾ ಕ್ಯಾರೋಟಿನ್ ಇದರಲ್ಲಿದೆ.
ಸಲಕ್ ಹಣ್ಣಿನಲ್ಲಿ ಫೈಬರ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಹೊಟ್ಟೆನೋವು, ಅನಿಯಮಿತ ಕರುಳಿನ ಚಲನೆ, ವಾಯು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ ಸಲಾಡ್ ರೂಪದಲ್ಲಿ ಸೇರಿಸುವ ಮೂಲಕ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಬಹುದು.
ಆಹಾರದಲ್ಲಿ ನಿಯಮಿತವಾಗಿ ಸಲಕ್ ಹಣ್ಣನ್ನು ಸೇರಿಸಿಕೊಳ್ಳುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಪೆಕ್ಟಿನ್ ಮೆದುಳಿನ ಕಾರ್ಯವನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಸಲಾಕ್ ಹಣ್ಣಿನಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳು ಅಧಿಕವಾಗಿದ್ದು, ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೊಂದಿದ್ದು ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ಇದರ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸ್ನೇಕ್ ಫ್ರೂಟ್ ಸೇವಿಸಿ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪ್ಟೆರೋಸ್ಟಿಲ್ಬೀನ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಏಜೆಂಟ್ ಆಗಿದ್ದು, ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಸ್ನೇಕ್ ಫ್ರೂಟ್ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀವಕೋಶಗಳು ಮತ್ತು ಅಂಗಾಂಶಗಳಿಗೆ ಹಾನಿಯಾಗುವುದನ್ನು ತಡೆಯಲು ಸಹಾಯಕವಾಗಿವೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.