ಹೊಸ ತೆರಿಗೆ ಮಸೂದೆಗೆ ಇಂದೇ ಕೇಂದ್ರ ಸಚಿವ ಸಂಪುಟ ಅನುಮೋದನೆ, ತೆರಿಗೆದಾರರಿಗೆ ಜಾಕ್ ಪಾಟ್..!

New Income Tax Bill: ತೆರಿಗೆ ವ್ಯವಸ್ಥೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಹೊಸ ಆದಾಯ ತೆರಿಗೆ ಮಸೂದೆಗೆ ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ  ಅನುಮೋದನೆ ನೀಡುವ ಸಾಧ್ಯತೆ ಇದೆ. ಮುಂದಿನ ವಾರ ಮಸೂದೆ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.

Written by - Yashaswini V | Last Updated : Feb 7, 2025, 07:50 AM IST
  • ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2025ರ ಬಜೆಟಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ತಂದು ತೆರಿಗೆ ಪಾವತಿ ವ್ಯವಸ್ಥೆ ಸರಳೀಕರಿಸುವುದಾಗಿ ಹೇಳಿದ್ದರು.
  • ಬಜೆಟಿನಲ್ಲಿ ಘೋಷಿಸಿರುವಂತೆ ಹೊಸ ತೆರಿಗೆ ಪದ್ದತಿಯನ್ನು ಜಾರಿಗೊಳಿಸಲು ಹಳೆಯ ಆದಾಯ ತೆರಿಗೆ ಕಾಯಿದೆ 1961 ಅನ್ನು ಬದಲಿಸಬೇಕಾಗಿದೆ.
  • ಜನ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳುವುದಕ್ಕೆ ತೆರಿಗೆ ಪಾವತಿ ವ್ಯವಸ್ಥೆಯು ಸಂಕೀರ್ಣವಾಗಿರುವುದು ಕೂಡ ಒಂದು ಕಾರಣ.
ಹೊಸ ತೆರಿಗೆ ಮಸೂದೆಗೆ ಇಂದೇ ಕೇಂದ್ರ ಸಚಿವ ಸಂಪುಟ ಅನುಮೋದನೆ, ತೆರಿಗೆದಾರರಿಗೆ ಜಾಕ್ ಪಾಟ್..!  title=

New Income Tax Bill: ಜನ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳುವುದಕ್ಕೆ ತೆರಿಗೆ ಪಾವತಿ ವ್ಯವಸ್ಥೆಯು ಸಂಕೀರ್ಣವಾಗಿರುವುದು ಕೂಡ ಒಂದು ಕಾರಣ. ಇದೇ ಹಿನ್ನೆಲೆಯಲ್ಲಿ ತೆರಿಗೆ ವ್ಯವಸ್ಥೆಯನ್ನು ಸುಲಭ ಮತ್ತು ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸುತ್ತಿದೆ. ಇಂದು ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೊಸ ಅನುಮೋದನೆ ದೊರೆಯುವ ಸಾಧ್ಯತೆಯೂ ಇದೆ. ಮುಂದಿನ ವಾರ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ರ ಬಜೆಟಿನಲ್ಲಿ ಹೊಸ ಆದಾಯ ತೆರಿಗೆ ಮಸೂದೆ ತಂದು ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳೀಕರಿಸುವುದಾಗಿ ಹೇಳಿದ್ದರು. ಬಜೆಟಿನಲ್ಲಿ ಘೋಷಿಸಿರುವಂತೆ ಹೊಸ ತೆರಿಗೆ ಪದ್ದತಿಯನ್ನು ಜಾರಿಗೊಳಿಸಲು ಹಳೆಯ ಆದಾಯ ತೆರಿಗೆ ಕಾಯಿದೆ 1961 ಅನ್ನು ಬದಲಿಸಬೇಕಾಗಿದೆ. ಇದರ ಸಂಬಂಧ ಇಂದು ಕೇಂದ್ರ ಸಚಿವ ಸಂಪುಟ ನಿರ್ಣಯ ಕೈಗೊಳ್ಳಲಿದೆ. 

ಇದನ್ನೂ ಓದಿ- 8th Pay Commission: ಸರ್ಕಾರಿ ನೌಕರರಿಗೆ ಜಾಕ್ ಪಾಟ್..! ಮೂಲ ವೇತನದಲ್ಲಿ ಭಾರೀ ಏರಿಕೆ!

ಹೊಸ ಆದಾಯ ತೆರಿಗೆ ಮಸೂದೆಯ ಉದ್ದೇಶ ಏನು?
ಯಾವುದೇ ನೂತನ ತೆರಿಗೆ ಇರುವುದಿಲ್ಲ. ತೆರಿಗೆ ನಿಯಮವನ್ನು ಸರಳೀಕರಿಸಲಾಗುತ್ತದೆ. ಹಳೆಯ ತೆರಿಗೆ ಕಾನೂನಿನಲ್ಲಿ ಇರುವ ಕೆಲವು ಗೊಂದಲಗಳನ್ನು ಪರಿಹಾರಿಸಲಾಗುತ್ತದೆ. ತೆರಿಗೆ ಪಾವತಿಯಲ್ಲಿ ಆಗುವ ಕೆಲವು ಲೋಪಗಳಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು ಕಮ್ಮಿ ಮಾಡುವುದು, ಒಟ್ಟಾರೆ ತೆರಿಗೆ ಪಾವತಿಯನ್ನು ತೆರಿಗೆದಾರರ ಸ್ನೇಹಿಯಾಗಿ ಪರಿವರ್ತಿಸುವುದು ಹೊಸ ಮಸೂದೆಯ ಉದ್ದೇಶಗಳು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ಹಳೆಯ ತೆರಿಗೆ ಪಾವತಿದಾರರಿಗೂ ಗುಡ್ ನ್ಯೂಸ್: ಈ ಯೋಜನೆಯಲ್ಲಿ ಸಿಗುತ್ತೆ ₹50,000 ಹೆಚ್ಚುವರಿ ತೆರಿಗೆ ರಿಯಾಯಿತಿ

ಜನವರಿ 31ರಂದು ಪ್ರಾರಂಭವಾಗಿರುವ ಸಂಸತ್ತಿನ ಬಜೆಟ್ ಅಧಿವೇಶನ ಮೊದಲ ಹಂತದಲ್ಲಿ ಫೆಬ್ರವರಿ 13ರವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ಮಾರ್ಚ್ 10ರಂದು ಶುರುವಾಗಿ ಏಪ್ರಿಲ್ 4ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದು ಕಾನೂನಾಗಿ ಪರಿವರ್ತಿಸಿ ಮುಂದಿನ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News