ತುಳಸಿ ಗಿಡದ ವಿಚಾರದಲ್ಲಿ ನೀವು ಮಾಡುತ್ತಿರುವ ಈ ಸಣ್ಣ ತಪ್ಪೇ, ನಿಮ್ಮ ಮನೆಯ ಎಲ್ಲಾ ಸಮಸ್ಯೆಗಳಿಗೂ ಮುಖ್ಯ ಕಾರಣ!

Tulasi Vastu: ತುಳಸಿ ಗಿಡದ ಮಹತ್ವವನ್ನು ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯಂತ ಮಹತ್ವ ನೀಡಲಾಗಿದೆ. ತುಳಸಿ ಗಿಡವನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. 
 

  • Feb 04, 2025, 19:08 PM IST
1 /11

Tulasi Vastu: ತುಳಸಿ ಗಿಡದ ಮಹತ್ವವನ್ನು ನಿರ್ದಿಷ್ಟವಾಗಿ ಹೇಳಬೇಕಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಹಿಂದೂ ಧರ್ಮದಲ್ಲಿ ತುಳಸಿಗೆ ಅತ್ಯಂತ ಮಹತ್ವ ನೀಡಲಾಗಿದೆ. ತುಳಸಿ ಗಿಡವನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ.   

2 /11

ತುಳಸಿ ಗಿಡವನ್ನು  ಲಕ್ಷ್ಮಿ ದೇವಿಯ ಪ್ರತಿರೂಪವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವು ಹಲವು ಔಷಧೀಯ ಗುಣಗಳನ್ನು ಹೊಂದಿದ್ದು, ಇದರಲ್ಲಿರುವ  ಔಷಧೀಯ ಗುಣಗಳು ಆರೋಗ್ಯವನ್ನು ರಕ್ಷಿಸುತ್ತವೆ ಎಂದು ತಜ್ಞರು ಕೂಡ ಹೇಳುತ್ತಾರೆ.  

3 /11

ತುಳಸಿ ಗಿಡ ಒಣಗಿ ಹೋದರೂ ಅಥವಾ ಸರಿಯಾಗಿ ಬೆಳೆಯದಿದ್ದರೂ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಆವರಿಸಿಕೊಂಡಿದೆ ಎಂದು ಅರ್ಥ. ಅದಕ್ಕಾಗಿಯೇ ಈ ಸಸ್ಯವನ್ನು ಬಹಳ ಎಚ್ಚರಿಕೆಯಿಂದ ಬೆಳೆಸಲಾಗುತ್ತದೆ.   

4 /11

ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುವ ಶಕ್ತಿ ತುಳಸಿ ಗಿಡಕ್ಕಿದ್ದು, ತುಳಸಿಯ ವಿಷಯದಲ್ಲೂ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ವಿದ್ವಾಂಸರು ಹೇಳುತ್ತಾರೆ.   

5 /11

ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿ ನೆಡಬೇಕೆಂದು ಹೇಳಲಾಗುತ್ತದೆ. ಬೆಳಗಿನ ಸೂರ್ಯನ ಕಿರಣಗಳು ಸಸ್ಯದ ಮೇಲೆ ಬೀಳುವಂತೆ ಸೂಚಿಸಲಾಗುತ್ತದೆ. ಇದು ಉತ್ತಮ ಫಲಿತಾಂಶಗಳನ್ನು ತರುತ್ತದೆ.   

6 /11

ಉತ್ತರ ದಿಕ್ಕಿನಲ್ಲಿ ಸಸ್ಯವನ್ನು ನೆಡಲಾಗದೆ ಇದ್ದರೆ. ಈಶಾನ್ಯ ದಿಕ್ಕಿನಲ್ಲಿ ನೀವು ಸಸ್ಯವನ್ನು ನೆಡಬಹುದು.   

7 /11

ಈಶಾನ್ಯ ದಿಕ್ಕು ಬಹಳ ಮಹತ್ವದ್ದಾಗಿದೆ. ಈ ದಿಕ್ಕಿನಲ್ಲಿ ಗಿಡ ನೆಟ್ಟು ಪ್ರತಿದಿನ ಪೂಜೆ ಮಾಡುವುದರಿಂದ ಅದೃಷ್ಟ ಬರುತ್ತದೆ ಎಂದು ಹಲವರು ನಂಬುತ್ತಾರೆ. ವಾಸ್ತು ವಿದ್ವಾಂಸರು ಕೂಡ ಇದನ್ನೇ ಹೇಳುತ್ತಾರೆ.  

8 /11

ತುಳಸಿ ಗಿಡಗಳನ್ನು ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು, ಏಕೆಂದರೆ ಈ ದಿಕ್ಕನ್ನು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ತುಳಸಿ ಗಿಡಗಳನ್ನು ಈ ದಿಕ್ಕಿನಲ್ಲಿ ನೆಡಬಾರದು.   

9 /11

ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಕುಟುಂಬದಲ್ಲಿ ಸಂಘರ್ಷ ಹೆಚ್ಚಾಗುತ್ತದೆ ಮತ್ತು ನಿರಂತರ ಜಗಳಗಳಿಗೆ ಕಾರಣವಾಗುತ್ತದೆ.  

10 /11

ಶುಕ್ರವಾರದಂದು ತುಳಸಿ ಗಿಡ ನೆಡುವುದರಿಂದ ಅದೃಷ್ಟ ಬರುತ್ತದೆ ಎಂದು ವಾಸ್ತು ತಜ್ಞರು ಸೂಚಿಸುತ್ತಾರೆ. ಯಾವುದೇ ಸಂದರ್ಭದಲ್ಲೂ ನೀವು ತುಳಸಿ ಗಿಡದ ಪಕ್ಕದಲ್ಲಿ ಮುಳ್ಳಿನ ಗಿಡವನ್ನು ನೆಡಬಾರದು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ತೊಂದರೆಗಳು ಉಂಟಾಗಬಹುದು.  

11 /11

ಸೂರ್ಯ ಮತ್ತು ಚಂದ್ರ ಗ್ರಹಣಗಳ ದಿನದಂದು ತುಳಸಿ ಗಿಡವನ್ನು ಕೈಗಳಿಂದ ಮುಟ್ಟಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಕೂಡ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ ವಾಸ್ತು ತಜ್ಞರು.