Kumbh Mela Viral Video: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಈ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ಪವಿತ್ರ ಕುಂಭಮೇಳಕ್ಕೆ ಬಂದು ಚಿಕನ್ ತಯಾರಿಸಿದ ದಂಪತಿಯ ವಿರುದ್ಧ ಸಾಧುಗಳು ಆಕ್ರೋಶ ವ್ಯಕ್ತಪಡಿಸಿದ್ದು, ಟೆಂಟ್ ಕಿತ್ತು ಬಿಸಾಕಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಹಾಕುಂಭಮೇಳ ಎನ್ನುವುದು ಹಿಂದೂಗಳ ಪವಿತ್ರ ಉತ್ಸವವಾಗಿದೆ. ಇಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಇದಲ್ಲದೆ ಮದ್ಯ, ಸಿಗರೇಟು ಮುಂತಾದ ಉತ್ಪನ್ನಗಳಿಗೆ ಇಲ್ಲಿ ಅವಕಾಶವಿಲ್ಲ. ಆದರೆ ಇಂತಹ ಪ್ರದೇಶದಲ್ಲಿ ಚಿಕನ್ ಬೇಯಿಸಿ ದಂಪತಿಯೊಂದು ಅಪಚಾರವೆಸಗಿದೆ.
ಚಿಕನ್ ಬೇಯಿಸಿದ ದಂಪತಿ ವಿರುದ್ಧ ಸಾಧುಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೆಂಟ್ ಹಾಕಿಕೊಂಡು ಚಿಕನ್ ಬೇಯಿಸಿದ ದಂಪತಿಗೆ ಸಾಧುಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಷ್ಟೇ ಅಲ್ಲದೆ, ಅವರ ಟೆಂಟ್ ಕಿತ್ತು ಹಾಕಿ ಆಹಾರ ಪದಾರ್ಥವನ್ನೂ ಚಲಿದ್ದಾರೆ.
A family was attacked for cooking chicken at their camp at the #MahaKumbhMela in #Prayagraj , family was attacked for cooking chicken at their camp.
The attackers beat the family members, removed their tent, and threw the chicken out, causing a disruption in the peaceful… pic.twitter.com/kaUnB98G5N— FOEJ Media (@FoejMedia) February 1, 2025
ಪವಿತ್ರ ಕುಂಭಮೇಳದಲ್ಲಿ ಮಾಡಬಾರದ ಕೆಲಸ ಮಾಡಿದ ದಂಪತಿಯನ್ನು ಸಾಧುಗಳು ಅಲ್ಲಿಂದ ಓಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಜನ್ಸ್ ಕೂಡ ದಂಪತಿಯ ಕೆಲಸಕ್ಕೆ ಫುಲ್ ಗರಂ ಆಗಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಬಹುದಿನಗಳ ಗೆಳತಿಯೊಂದಿಗೆ ಮದುವೆ! ಗ್ರೀಕ್ ಯುವತಿಯ ಕೈ ಹಿಡಿದ ಭಾರತೀಯ ಯುವಕ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.