Indian Sorrel Health Benefits: ಅನೇಕ ಸೊಪ್ಪು ಹಾಗೂ ತರಕಾರಿಗಳಲ್ಲಿ ಆರೋಗ್ಯ ಸಂಪತ್ತು ಅಡಗಿದೆ. ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿ ಒಂದು ಮಜ್ಜಿಗೆ ಸೊಪ್ಪು. ಇದನ್ನು ಇಂಗ್ಲಿಷ್ನಲ್ಲಿ ಇಂಡಿಯನ್ ಸರೆಲ್ ಎಂದೂ ಕರೆಯುತ್ತಾರೆ.
Indian Sorrel Health Benefits: ಅನೇಕ ಸೊಪ್ಪು ಹಾಗೂ ತರಕಾರಿಗಳಲ್ಲಿ ಆರೋಗ್ಯ ಸಂಪತ್ತು ಅಡಗಿದೆ. ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಅದರಲ್ಲಿ ಒಂದು ಮಜ್ಜಿಗೆ ಸೊಪ್ಪು. ಇದನ್ನು ಇಂಗ್ಲಿಷ್ನಲ್ಲಿ ಇಂಡಿಯನ್ ಸರೆಲ್ ಎಂದೂ ಕರೆಯುತ್ತಾರೆ.
ಈ ಹಸಿರು ಎಲೆ ನೋಡುಲು ಹೃದಯಾಕಾರದ ಎಲೆಗಳನ್ನು ಹೊಂದಿದ್ದು, ಪಾಲಾಕ್ ಸೊಪ್ಪಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಈ ಎಲೆ ಒಳಗೊಂಡಿದೆ. ಇದನ್ನು ಕನ್ನಡದಲ್ಲಿ ಮಜ್ಜಿಗೆ ಸೊಪ್ಪು ಎಂದು ಸಹ ಕರೆಯಲಾಗುತ್ತದೆ.
ಈ ಮಜ್ಜಿಗೆ ಸೊಪ್ಪನ್ನು ಸಲಾಡ್ ಅಥವಾ ಸೂಪ್ ಮಾಡಿ ಸೇವಿಸಬಹುದು. ಹಾಗಾದರೆ ಈ ಎಲೆಯ ಆರೋಗ್ಯ ಪ್ರಯೋಜನೆಗಳೇನು? ತಿಳಿಯಲು ಮುಂದೆ ಓದಿ...
ಹೆಲ್ತ್ಲೈನ್ ವರದಿಯಂತೆ, ಮಜ್ಜಿಗೆ ಸೊಪ್ಪು ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್ಗಳು, ಫೈಬರ್, ವಿಟಮಿನ್ ಸಿ, ಮೆಗ್ನೀಸಿಯಮ್, ವಿಟಮಿನ್ ಎ, ಮೆಗ್ನೀಸಿಯಮ್, ಐರನ್, ಕಬ್ಬಿಣ, ಪೊಟ್ಯಾಸಿಯಮ್, ರೈಬೋಫ್ಲಾವಿನ್, ವಿಟಮಿನ್ ಬಿ 6, ರಂಜಕ ಮತ್ತು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಮಜ್ಜಿಗೆ ಎಲೆಯಲ್ಲಿರುವ ಈ ಪೋಷಕಾಂಶಗಳು ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸಿ, ನಿಮ್ಮನ್ನು ಆರೋಗ್ಯಕರವಾಗಿ ಇರುವಂತೆ ರಕ್ಷಿಸುತ್ತದೆ.
ಮಜ್ಜಿಗೆ ಎಲೆ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಎಲೆ ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ. ಈ ಸಸ್ಯವು ದೇಹದಲ್ಲಿ ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ.
ಅನೇಕ ಅಧ್ಯಯನಗಳು ಈ ಎಲೆ ಹೃದಯದ ಆರೋಗ್ಯಕ್ಕೆ ಅತ್ಯುತ್ತಮವೆಂದು ತೋರಿಸಿ ಕೊಟ್ಟಿವೆ. ವಾರಕ್ಕೊಮ್ಮೆ ಸೊಪ್ಪನ್ನು ತಿಂದರೆ ಎಲ್ಲಾ ರೀತಿಯ ಹೃದ್ರೋಗಗಳಿಂದ ದೂರವಿರಬಹುದು ಎನ್ನುತ್ತಾರೆ ತಜ್ಞರು.
ಸಂಶೋಧನೆಯ ಪ್ರಕಾರ,ಮಜ್ಜಿಗೆ ಎಲೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುವುದಷ್ಟೆ ಅಲ್ಲದೆ, ರಕ್ತದೊತ್ತಡ ಹೆಚ್ಚಾಗದಂತೆ ತಡೆಯುತ್ತದೆ.
ಈ ಎಲೆಯಲ್ಲಿ ಫೈಬರ್, ಉತ್ಕರ್ಷಣ ನಿರೋಧಕಗಳು ಇದು, ಹೃದಯ ಸ್ನಾಯುಗಳನ್ನು ಬಲವಾಗಿಸಿ, ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಮಜ್ಜಿಗೆ ಎಲೆ ಹೊರಗಿನಿಂದ ಬರುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳ್ಳಂಬೆಳಗ್ಗೆ ಬೆಲ್ಲವನ್ನು ಆಹಾರದ ಭಾಗವಾಗಿ ಸೇವಿಸಿದರೆ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.
ಈ ಮಜ್ಜಿಗೆ ಎಲೆ ಮಧುಮೇಹಿಗಳಿಗೆ ರಾಮಬಾಣವೂ ಹೌದು. ಪಬ್ಮೆಡ್ ಸೆಂಟ್ರಲ್ ಜರ್ನಲ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಎಲೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ.
ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಚರ್ಮದ ಕ್ಯಾನ್ಸರ್ ವಿರುದ್ಧ ರಕ್ಷಿಸಲು ಈ ತರಕಾರಿಗಳು ತುಂಬಾ ಉಪಯುಕ್ತವಾಗಿವೆ. ಟೆಸ್ಟ್ ಟ್ಯೂಬ್ ಅಧ್ಯಯನಗಳು ಈ ತರಕಾರಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಕಂಡುಹಿಡಿದಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ನಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.