Airtel, Jio ರಿಚಾರ್ಜ್ ಪ್ಲಾನ್‌ಗಳ ಬೆಲೆಯಲ್ಲಿ ಇಳಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ

Written by - Zee Kannada News Desk | Last Updated : Jan 23, 2025, 08:16 PM IST
Airtel, Jio ರಿಚಾರ್ಜ್ ಪ್ಲಾನ್‌ಗಳ ಬೆಲೆಯಲ್ಲಿ ಇಳಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ title=

ಏರ್‌ಟೆಲ್ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ನೀವು 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ಇಡೀ ತಿಂಗಳು ಫ್ರೀಯಾಗಿ ಮಾತನಾಡಬಹುದು. ಹೌದು, ದೇಶದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ಎರಡು ಹೊಸ ಬಜೆಟ್ ಸ್ನೇಹಿ ಯೋಜನೆಗಳನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಈ ಪ್ಲಾನ್‌ಗಳನ್ನು ಕೇವಲ ವಾಯ್ಸ್‌ ಕಾಲ್ (ಧ್ವನಿ ಕರೆ) ಮತ್ತು ಎಸ್‌ಎಂಎಸ್ ಸೌಲಭ್ಯದ ಅಗತ್ಯವಿರುವ ಬಳಕೆದಾರರಿಗಾಗಿ ಪರಿಚಯಿಸಲಾಗಿದೆ. ನೀವು ಇಂಟರ್ನೆಟ್ ಹೆಚ್ಚು ಬಳಕೆ ಮಾಡದಿದ್ದರೆ ಅಥವಾ ಇಂಟರ್ನೆಟ್ ಸಪೋರ್ಟ್ ಇಲ್ಲದ ಫೋನ್ ಹೊಂದಿದ್ದರೆ, ಈ ಪ್ಲಾನ್‌ಗಳು ನಿಮಗೆ ಉತ್ತಮ ಆಯ್ಕೆಯಾಗಿದೆ.

ಏರ್‌ಟೆಲ್‌ 499 ರೂ. ಪ್ರಿಪೇಯ್ಡ್ ಪ್ಲಾನ್ ಏರ್‌ಟೆಲ್‌ನ 499 ರೂ.ನ ಹೊಸ ಪ್ರಿಪೇಯ್ಡ್ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 900 ಎಸ್‌ಎಂಎಸ್ ಸೌಲಭ್ಯ ಪಡೆಯಬಹುದು. ಹೆಚ್ಚುವರಿಯಾಗಿ, 3 ತಿಂಗಳವರೆಗೆ ಏರ್‌ಟೆಲ್ ರಿವಾರ್ಡ್‌ಗಳು ಅಪೊಲೊ 24/7 ಸರ್ಕಲ್ ಚಂದಾದಾರಿಕೆ ಮತ್ತು ಉಚಿತ ಹಲೋ ಟ್ಯೂನ್ಸ್ ಚಂದಾದಾರಿಕೆಯು ಸಹ ಲಭ್ಯವಿದೆ. ಮೊದಲು ಈ ವಿಭಾಗದಲ್ಲಿ 509 ರೂ. ಪ್ಲಾನ್ ಇತ್ತು. ಇದರಲ್ಲಿ 6GB ಡೇಟಾ, ನಿತ್ಯ 100 ಎಸ್‌ಎಂಎಸ್ ಮತ್ತು ಉಚಿತ ಕಾಲ್‌ ಸೌಲಭ್ಯ ಇತ್ತು. ಇದೀಗ, ಈ ಹೊಸ 10 ರೂ. ಕಡಿಮೆಯ ಯೋಜನೆಯು ಡೇಟಾ ಪ್ರಯೋಜನ ತೆಗೆದುಹಾಕಲಾಗಿದೆ. ಈ ಮೂಲಕ ಹೊಸ ಪ್ಲಾನ್‌ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಿದೆ. ಏರ್‌ಟೆಲ್‌ 1,959 ರೂ. ಪ್ರಿಪೇಯ್ಡ್ ಪ್ಲಾನ್ ನೀವು ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್‌ ಪ್ಲಾನ್‌ ಬಯಸಿದರೆ, ಈ ಹೊಸ ಯೋಜನೆ ಉತ್ತಮ ಆಯ್ಕೆಯಾಗಿದೆ. ಏರ್‌ಟೆಲ್‌ನ ಈ ಪ್ರಿಪೇಯ್ಡ್ ಪ್ಲಾನ್‌ ಬೆಲೆ 1,959 ರೂ. ಆಗಿದೆ. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ಈ ಪ್ಲಾನ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು 3,600 ಎಸ್‌ಎಂಎಸ್‌ಗಳ ಪ್ರಯೋಜನ ಪಡೆಯಬಹುದು. ಇದಲ್ಲದೆ, ಈ ಯೋಜನೆಯುಅಪೊಲೊ 24/7 ಸರ್ಕಲ್ ಚಂದಾದಾರಿಕೆ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಒಳಗೊಂಡಿದೆ.

ಹೊಸ ಯೋಜನೆ 40 ರೂ. ಅಗ್ಗ ವಿಶೇಷವೆಂದರೆ, ಇದಕ್ಕೂ ಮೊದಲು ಈ ಯೋಜನೆಯ ಬೆಲೆ 1,999 ರೂ. ಆಗಿತ್ತು. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 24GB ಡೇಟಾ ಮತ್ತು 100 ಎಸ್‌ಎಂಎಸ್‌ ಸೌಲಭ್ಯ ಲಭ್ಯವಿತ್ತು. ಪ್ರಸ್ತುತ, ಈ ಹೊಸ ಯೋಜನೆಯು 40 ರೂ.ಗಳಷ್ಟು ಅಗ್ಗವಾಗಿದೆ. ಮತ್ತು ವಾಯ್ಸ್‌ ಕಾಲ್ ಮತ್ತು ಎಸ್‌ಎಂಎಸ್‌ ಸೌಲಭ್ಯ ಮಾತ್ರ ಒಳಗೊಂಡಿದೆ. ಕಂಪನಿಯು ತನ್ನ ಸೈಟ್‌ನಿಂದ ಈ ಯೋಜನೆಯನ್ನು ತೆಗೆದುಹಾಕಿದೆ. ಒಟ್ಟಾರೆ, ದೈತ್ಯ ಟೆಲಿಕಾಂ ಕಂಪನಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಎರಡು ಹೊಸ ಬಜೆಟ್ ಸ್ನೇಹಿ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್‌ಗಳನ್ನು ವಾಯ್ಸ್‌ ಕಾಲ್ ಮತ್ತು ಎಂಎಸ್‌ಎಸ್‌ ಸೌಲಭ್ಯಗಳನ್ನು ಬಯಸುವವರಿಗೆ ಬಳಕೆದಾರರಿಗಾಗಿ ಪರಿಚಯಿಸಲಾಗಿದೆ. ಈ ಪ್ಲಾನ್‌ಗಳು ನಿಮಗೆ ಇಷ್ಟವಾದರೆ, ಈಗಲೇ ರೀಚಾರ್ಜ್‌ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News