TRAI: ನೀವು ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ, ಬಿಎಸ್‌ಎನ್‌ಎಲ್ ಯಾವುದೇ ಸಿಮ್ ಬಳಸುತ್ತಿದ್ದರೂ ಇನ್ನುಮುಂದೆ ರಿಚಾರ್ಜ್ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ.
TRAI Rules: ತಿಂಗಳ ರಿಚಾರ್ಜ್ ಮಾಡಿಸಿ 20 ದಿನ ಕಳೆಯುತ್ತಿದ್ದಂತೆ ಮತ್ತೆ ರಿಚಾರ್ಜ್ ಮಾಡಿಸಬೇಕು ಎಂಬ ಚಿಂತೆ ಇನ್ಮುಂದೆ ಇರಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜಿಯೋ, ಏರ್ಟೆಲ್, ವೋಡಾಫೋನ್-ಐಡಿಯಾ, ಬಿಎಸ್‌ಎನ್‌ಎಲ್ ಯಾವುದೇ ಸಿಮ್ ಬಳಸುತ್ತಿದ್ದರೂ ಸಹ ಇನ್ಮುಂದೆ ರಿಚಾರ್ಜ್ ಬಗ್ಗೆ ಯೋಚಿಸುವ ಗೊಡವೆ ಇರುವುದಿಲ್ಲ.
ನಿಮ್ಮ ಈ ಚಿಂತೆಯನ್ನು ದೂರ ಮಾಡಲೆಂದೇ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ- TRAI ತನ್ನ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.
ಹೌದು, ಈ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಗ್ರಾಹಕರಿಗೆ ಅನುಕೂಲವಾಗಲೆಂದು TRAI ತನ್ನ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಇದರನ್ವಯ ವರ್ಷವಿಡೀ ಅರ್ಥಾತ್ 365ದಿನಗಳ ವ್ಯಾಲಿಡಿಟಿ ಹೊಂದಿರುವ ವಿಶೇಷ ಟ್ಯಾರಿಫ್ ವೋಚಾರ್ ಗಳನ್ನು ಒದಗಿಸುವಂತೆ ಟೆಲಿಕಾಂ ಕಂಪನಿಗಳಿಗೆ ಹೊಸ ಮಾರ್ಗಸೂಚಿಯನ್ನು ಪರಿಚಯಿಸಿದೆ.
TRAI 2000ರ ದಶಕದ ಆರಂಭದಲ್ಲೇ ಎಲ್ಲ ಮೊಬೈಲ್ ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಪೆಷಲ್ ಟ್ಯಾರಿಫ್ ವೋಚರ್ ಪರಿಕಲ್ಪನೆಯನ್ನು ಪರಿಚಯಿಸಿತ್ತು. ಇವು ಅಗ್ಗದ ಬೆಲೆಯಲ್ಲಿ ಗ್ರಾಹಕರಿಗೆ ಧ್ವನಿ ಕರೆ, ಎಸ್‌ಎಮ್‌ಎಸ್, ಡೇಟಾ ಸೇವೆ ಒದಗಿಸಲು ಅನುವು ಮಾಡಿಕೊಟ್ಟಿತು.
ಆದಾಗ್ಯೂ ಕಳೆದ ಕೆಯಲ್ವು ವರ್ಷಗಳಲ್ಲಿ ಈ ವೋಚರ್ಗಳ ಮಾನ್ಯತೆ 90 ದಿನಗಳು ಎಂದರೆ ಮೂರು ತಿಂಗಳಿಗೆ ಮಾತ್ರ ಸೀಮಿತವಾಗಿತ್ತು.
ಇದೀಗ ಮತ್ತೊಮ್ಮೆ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿರುವ TRAI ವಿಶೇಷ ಸುಂಕದ ವೋಚರ್ಗಳ ಮಾನ್ಯತೆಯನ್ನು 365ದಿನಗಳವರೆಗೆ ವಿಸ್ತರಿಸುವಂತೆ ಮಾರ್ಗಸೂಚಿ ಹೊರಡಿಸಿದೆ.
TRAI ಮಾರ್ಗಸೂಚಿ ಅನುಸಾರ ಇದೀಗ ಜಿಯೋ, ಏರ್ಟೆಲ್, ವಿಐ, ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಕೇವಲ 10 ರೂ. ಗೆ ವರ್ಷವಿಡೀ ಮಾನ್ಯತೆಯ ವಿಶೇಷ ಸುಂಕದ ವೋಚರ್ ದೊರೆಯುತ್ತದೆ.
ಇನ್ನೂ TRAI ಕೈಗೊಂಡಿರುವ ಈ ನಿರ್ಧಾರದಿನ ಸುಮಾರು 15 ಕೋಟಿಯಷ್ಟು ಮೊಬೈಲ್ ಬಳಕೆದಾರರಿಗೆ ಪ್ರಯೋಜನವಾಗಲಿದೆ.