Rs 500 Fake Notes: ದೇಶದಲ್ಲಿ ಈಗ ಯಾವುದೇ ವ್ಯವಹಾರಕ್ಕೆ ಅತಿ ಹೆಚ್ಚು ಮೌಲ್ಯದ ನೋಟು ಇರುವುದು ಎಂದರೆ ಅದು 500 ರೂಪಾಯಿ ನೋಟು. ಆದರೆ ದುಷ್ಕರ್ಮಿಗಳು 500 ರೂ. ಮೌಲ್ಯದ ನೋಟುಗಳನ್ನು ನಕಲಿ ಮಾಡಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ನೀವು ಹಣ ಕಳೆದುಕೊಳ್ಳಬೇಕಾಗುತ್ತದೆ. ವ್ಯಾಪಾರ ವಹಿವಾಟಿನ ಮೇಲೆ ತೀವ್ರತೆರನಾದ ದುಷ್ಪರಿಣಾಮ ಬೀರುತ್ತಿರುವ ಈ ನಕಲಿ ನೋಟುಗಳ ಹಾವಳಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸದ್ಯದ ಮಾಹಿತಿಗಳ ಪ್ರಕಾರ ಮಾರುಕಟ್ಟೆ ಪ್ರವೇಶಿಸುತ್ತಿರುವ 500 ರೂಪಾಯಿ ಮೌಲ್ಯದ ನೋಟುಗಳನ್ನು ಪತ್ತೆ ಮಾಡದಿರುವುದರಿಂದ ಅವು ಬ್ಯಾಂಕ್ ಮತ್ತು ಎಟಿಎಂ ಯಂತ್ರಗಳನ್ನು ತಲುಪುತ್ತಿವೆ. ಬಹಳ ಅಚ್ಚರಿಯ ಅಂಶ ಏನೆಂದರೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬ್ಯಾಂಕ್ ಮತ್ತು ಎಟಿಎಂಗಳಿಂದಲೂ ಈ ನಕಲಿ ನೋಟುಗಳನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಜನ ಸಾಮಾನ್ಯರು ಹೇಗೆ ತಾನೇ ಗುರುತಿಸಿಯಾರು? ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿರುವ ಹೊಸ ಮಾರ್ಗಸೂಚಿಗಳನ್ನು ತಪ್ಪದೆ ತಿಳಿಯಬೇಕು ಮತ್ತು ಪಾಲಿಸಬೇಕು.
ಇದನ್ನೂ ಓದಿ- 8ನೇ ವೇತನ ಆಯೋಗ: ಯಾವ ರಾಜ್ಯದ ಉದ್ಯೋಗಿಗಳಿಗೆ ಮೊದಲು ಸಂಬಳ ಹೆಚ್ಚಾಗುತ್ತದೆ ಗೊತ್ತಾ?
ನಕಲಿ ನೋಟುಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಿ ಅವರನ್ನು ನಕಲಿ ನೋಟುಗಳಿಂದ ಪಾರು ಮಾಡಲು ಕೆಲವು ಕ್ರಮಗಳನ್ನು ಕೈಗೊಂಡಿದೆ. ಅಸಲಿ ಮತ್ತು ನಕಲಿ 500 ರೂಪಾಯಿ ಮೌಲ್ಯದ ನೋಟುಗಳನ್ನು ಹೇಗೆ ಗುರುತಿಸಬೇಕು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಿಕೊಟ್ಟಿದೆ.
ಇದನ್ನೂ ಓದಿ- Income Tax: ತಿಂಗಳಿಗೆ ಲಕ್ಷ ಸಂಪಾದಿಸಿದರೂ 1 ರೂ. ಕೂಡ ತೆರಿಗೆ ಪಾವತಿಸಬೇಕಿಲ್ಲ...! ಹೇಗೆ ಗೊತ್ತಾ
ನಕಲಿ ನೋಟುಗಳನ್ನು ಗುರುತಿಸುವುದು ಹೇಗೆ?
ನಕಲಿ ನೋಟನ್ನು ಗುರುತಿಸಲು ಅಸಲಿ ನೋಟಿನ ವೈಶಿಷ್ಟ್ಯಗಳ ಬಗ್ಗೆ ಸರಿಯಾದ ಮಾಹಿತಿ ಇರುವುದು ಮುಖ್ಯ. 500 ರೂ. ಅಸಲಿ ನೋಟಿನ ವೈಶಿಷ್ಟ್ಯಗಳು ಕೆಳಕಂದಂತಿವೆ...
>> ನೋಟಿನಲ್ಲಿ 500 ಎಂಬ ಸಂಖ್ಯೆ ಪಾರದರ್ಶಕವಾಗಿರುತ್ತದೆ.
>> ಆರ್ಬಿಐ ಮುದ್ರಿಸಿರುವ 500 ರೂ. ಮುಖಬೆಲೆಯ ಮೂಲ ನೋಟಿನಲ್ಲಿ "500" ಸಂಖ್ಯೆಯನ್ನು ದೇವನಾಗರಿ ಲಿಪಿಯಲ್ಲಿಬರೆಯಲಾಗಿರುತ್ತದೆ.
>> ನೋಟಿನ ಹಿಂಭಾಗದಲ್ಲಿ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯನ್ನು ಮುದ್ರಿಸಲಾಗಿರುತ್ತದೆ. ಈ ಚಿತ್ರದ ಕೆಳಗೆ ಸ್ವಚ್ಛ ಭಾರತ ಅಭಿಯಾನದ ಲೋಗೋ ಮತ್ತು ಘೋಷಣೆ ಇರುತ್ತದೆ.
>> ಮೂಲ ನೋಟಿನ ಮೇಲೆ ಆರ್ಬಿಐ ಗವರ್ನರ್ ಸಹಿ ಇರುತ್ತದೆ.
>> ಹಿಂದಿಯಲ್ಲಿ ಭಾರತ್, ಇಂಗ್ಲಿಷ್ ನಲ್ಲಿ ಭಾರತ ಅಂತಾ ಬರೆಯಲಾಗಿರುತ್ತದೆ.
>> ನೋಟಿನ ಮೇಲೆ ಬರೆದಿರುವ 500 ಸಂಖ್ಯೆಯ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.
ಈ ಮೇಲೆ ಉಲ್ಲೇಖಿಸಲಾದ ಯಾವುದೇ ವೈಶಿಷ್ಟ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ಸಹ ಆ ನೋಟು ಅಸಲಿಯಲ್ಲ ಎಂಬುದನ್ನು ಗುರುತಿಸಿ ಎಂದು ಆರ್ಬಿಐ ಸಾರ್ವಜನಿಕರಿಗೆ ಸಲಹೆ ನೀಡಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.