FREE YouTube Premium: ರಿಲಯನ್ಸ್ ಜಿಯೋ ತನ್ನ ಬ್ರಾಡ್ಬ್ಯಾಂಡ್ ಬಳಕೆದಾರರಿಗೆ ಹೊಸ ವರ್ಷದ ಕೊಡುಗೆಯಾಗಿ ಬಿಡುಗಡೆ ಮಾಡಿದೆ. ಆಯ್ದ JioFiber ಮತ್ತು Jio AirFiber ಪೋಸ್ಟ್ಪೇಯ್ಡ್ ಯೋಜನೆಗಳೊಂದಿಗೆ ಎರಡು ವರ್ಷಗಳವರೆಗೆ ಉಚಿತ ಯೂಟ್ಯೂಬ್ ಪ್ರೀಮಿಯಂ ಅನ್ನು ಉಚಿತವಾಗಿ ಮಾಡುತ್ತದೆ.
YouTube ನಿರಂತರ ಜಾಹೀರಾತುಗಳಿಂದ ಬೇಸರಗೊಂಡಿರುವ ಜಿಯೋ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ಬಳಸುವವರು ನೀವಾಗಿದ್ದರೆ ನಿಮಗೆ ಅತ್ಯುತ್ತಮ ಆಫರ್ ಜಿಯೋ ನೀಡುತ್ತಿದೆ. ಪ್ರಪಂಚದ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿರುವ ಯೂಟ್ಯೂಬ್ ಯಾವುದೇ ಜಾಹೀರಾತುಗಳಿಲ್ಲದೆ ಹೆಚ್ಚಿನ ಫೀಚರ್ಗಳೊಂದಿಗೆ ಉಚಿತವಾಗಿ ಬರೋಬ್ಬರಿ 2 ವರ್ಷಕ್ಕೆ ಪಡೆಯಬಹುದು.
Free YouTube Premium ಆಫರ್:
ಸಾಮಾನ್ಯವಾಗಿ ನೀವು YouTube Premium ಚಂದಾದಾರಿಕೆ ಪಡೆಯಲು ತಿಂಗಳಿಗೆ 159 ರೂಗಳು ಮತ್ತು ವರ್ಷಕ್ಕೆ 1490 ರೂಗಳಾಗಿವೆ. ಆದರೆ ಜಿಯೋ ಇದನ್ನು 2 ವರ್ಷಕ್ಕೆ ಉಚಿತವಾಗಿ ನೀಡಲು ಮುಂದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋದ ಈ ಕೆಳಗಿನ ಯೋಜನೆಗಳಿಗೆ ಚಂದಾದಾರರಾಗಿರುವ JioFiber /AirFiber ಪೋಸ್ಟ್ಪೇಯ್ಡ್ ಗ್ರಾಹಕರು ಈ ಆಫರ್ಗೆ ಅರ್ಹರಾಗುತ್ತಾರೆ. ಇದರಲ್ಲಿ ನಿಮಗೆ ರೂ 888, ರೂ 1199, ರೂ 1499, ರೂ 2499, ಮತ್ತು ರೂ 3499 ಯೋಜನೆಗಳಿಗೆ ಜಿಯೋ ಈ ಹೊಸ ಆಫರ್ ಅನ್ವಯಿಸುತ್ತದೆ.
ಮೊದಲನೆಯದಾಗಿ ನೀವು JioFiber ಅಥವಾ AirFiber ನಿಂದ ಅರ್ಹವಾದ ಪೋಸ್ಟ್ಪೇಯ್ಡ್ ಬ್ರಾಡ್ಬ್ಯಾಂಡ್ ಯೋಜನೆಯನ್ನು ಖರೀದಿಸಬೇಕು ಅಥವಾ ಚಂದಾದಾರರಾಗಬೇಕು. ಅದರ ನಂತರ ನಿಮ್ಮ MyJio ಖಾತೆಗೆ ಲಾಗಿನ್ ಮಾಡಿ ಮತ್ತು ಅಪ್ಲಿಕೇಶನ್/ವೆಬ್ಸೈಟ್ನಲ್ಲಿ ಪ್ರದರ್ಶಿಸಲಾದ YouTube ಪ್ರೀಮಿಯಂ ಬ್ಯಾನರ್ ಅನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಯೌಟ್ಯೂಬ್ ಖಾತೆಗೆ ಸೈನ್-ಇನ್ ಮಾಡಿ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಹೊಸದನ್ನು ರಚಿಸಬೇಕಾಗುತ್ತದೆ.
ಇದರ ನಂತರ ನೀವು 2 ವರ್ಷಗಳ ಕಾಲ JioFiber/AirFiber ಸೇವೆಯೊಂದಿಗೆ YouTube Premium ಅನ್ನು ಆರಾಮವಾಗಿ ಆನಂದಿಸಲು ಸಾಧ್ಯವಾಗುತ್ತದೆ. ನೀವು ಜಿಯೋದ ಪೋಸ್ಟ್ಪೇಯ್ಡ್ ಬ್ರಾಡ್ಬ್ಯಾಂಡ್ ಚಂದಾದಾರರಾಗಿದ್ದರೆ ನಿಮಗೆ ಉಚಿತ ಜಿಯೋ ಸೆಟ್-ಟಾಪ್ ಬಾಕ್ಸ್ ಒದಗಿಸಲು ಕಂಪನಿಗೆ ನೀವು ವಿನಂತಿಸಬಹುದು ಮತ್ತು ಅದನ್ನು ಬಳಸಿಕೊಂಡು ನಿಮ್ಮ ಹಳೆಯ ಟಿವಿಯನ್ನು ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಿ ಒಟಿಟಿಯನ್ನು ವೀಕ್ಷಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ