Free Electricity Bill: ಕೇಂದ್ರ ಸರಕಾರದಿಂದ ಬಂಪರ್ ಆಫರ್: 300 ಯೂನಿಟ್ ಉಚಿತ ವಿದ್ಯುತ್, 78,000 ರೂ.ವರೆಗೆ ಸಬ್ಸಿಡಿ!

PM Surya Ghar: Muft Bijli Yojana: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಎರಡು ಪಾವತಿ ಆಯ್ಕೆಗಳನ್ನು ನೀಡುತ್ತಿದೆ.

PM Surya Ghar: Muft Bijli Yojana: ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಲಾಭ ಪಡೆಯುವುದು ಈಗ ಮತ್ತಷ್ಟು ಸುಲಭವಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಎಲ್ಲರಿಗೂ ಉಚಿತವಾಗಿ ವಿದ್ಯುತ್ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾಗಿರುವ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಕುರಿತು ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಯೋಜನೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು ಇದೀಗ ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಮತ್ತಷ್ಟು ಸುಲಭವಾಗಿದೆ.

2 /8

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹುದು. ಅಲ್ಲದೆ, 78,000 ರೂಪಾಯಿವರೆಗೆ ಸಬ್ಸಿಡಿಯನ್ನೂ ಕೂಡ ಇರುತ್ತದೆ. 

3 /8

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ಈ ಎರಡು ಪಾವತಿ ಆಯ್ಕೆಗಳನ್ನು ನೀಡುತ್ತಿದೆ. 

4 /8

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳಲ್ಲಿ, ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಇಚ್ಛಿಸುವವರು ಹೊಸ ಪಾವತಿ ಯೋಜನೆ ಅಡಿಯಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡದೆ ಇದರ ಲಾಭ ಪಡೆಯಬಹುದಾಗಿದೆ. 

5 /8

ಮೊದಲ ರೆಸ್ಕೋ ಮಾದರಿಯಲ್ಲಿ ಮೂರನೇ ವ್ಯಕ್ತಿ ಅಥವಾ ಸಂಸ್ಥೆ ನಿಮ್ಮ ಮನೆ ಛಾವಣಿ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಲು ನೀವು ಹಣ ಪಾವತಿಸಬೇಕಾಗಿಲ್ಲ. ಫಲಕ ಅಳವಡಿಸಿದ ನಂತರ ನೀವು ಸೋಲಾರ್ ಪ್ಯಾನೆಲ್ ಮೂಲಕ ಬಳಸುವ ವಿದ್ಯುತ್ಗೆ ನೀವು ಬಿಲ್ ಅನ್ನು ಪಾವತಿಸಬೇಕಾಗುತ್ತದೆ. 

6 /8

ಎರಡನೇ ಯುಎಲ್ಎ (ಯುಟಿಲಿಟಿ ನೇತೃತ್ವದ ಒಟ್ಟುಗೂಡಿಸುವಿಕೆ) ಮಾದರಿಯಲ್ಲಿ, ಡಿಸ್ಕಮ್ ಅಥವಾ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಸಂಸ್ಥೆಗಳು ನಿಮ್ಮ ಮನೆಯಲ್ಲಿ ಸೌರ ಫಲಕಗಳನ್ನು ಸ್ಥಾಪಿಸುತ್ತವೆ. ಇದಕ್ಕಾಗಿ ಕೂಡ ನೀವು ಯಾವುದೇ ಹಣ ಕಟ್ಟಬೇಕಾಗಿಲ್ಲ. 

7 /8

ಹೊಸ ಮಾರ್ಗಸೂಚಿ ಅನ್ವಯ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ರಾಷ್ಟ್ರೀಯ ಪೋರ್ಟಲ್ ಮೂಲಕ ಈ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲಾಗಿದೆ. ಫಲಾನುಭವಿಯು ತನ್ನ ಸಹಾಯಧನದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. 

8 /8

ಈ ಯೋಜನೆಯಡಿಯಲ್ಲಿ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಲಭ್ಯವಿದೆ ಮತ್ತು ಛಾವಣಿ ಮೇಲೆ ಸೌರ ಮೇಲ್ಛಾವಣಿ ಸ್ಥಾಪಿಸಲು ಸರ್ಕಾರದಿಂದ ಸಬ್ಸಿಡಿ ಸಹ ನೀಡಲಾಗುತ್ತದೆ. ಮನೆ ಮೇಲೆ ಸೋಲಾರ್ ಮೇಲ್ಛಾವಣಿ ಸ್ಥಾಪಿಸಿದರೆ ಸರ್ಕಾರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತದೆ. 2 ಕಿಲೋ ವ್ಯಾಟ್ ವರೆಗಿನ ಪ್ಯಾನೆಲ್ ಮೇಲೆ 30,000 ರೂಪಾಯಿ, 3 ಕಿಲೋವ್ಯಾಟ್ ಪ್ಯಾನಲ್ ಮೇಲೆ 48,000 ರೂಪಾಯಿ ಹಾಗು 3 ಕಿಲೋವ್ಯಾಟ್ ಗಿಂತ ಹೆಚ್ಚಿನ ಪ್ಯಾನಲ್ ಮೇಲೆ 78,000 ರೂಪಾಯಿ ಸಹಾಯಧನ ನೀಡುತ್ತದೆ.