Brahmi Health Benefits: ಪ್ರಕೃತಿಯು ನಮಗೆ ಆರೋಗ್ಯ ಪ್ರಯೋಜನಗಳಿಂದ ತುಂಬಿರುವ ಅನೇಕ ನೈಸರ್ಗಿಕ ವಸ್ತುಗಳನ್ನು ನೀಡಿದೆ. ಬ್ರಾಹ್ಮಿ ಒಂದು ಔಷಧೀಯ ಸಸ್ಯವಾಗಿದ್ದು, ನೆಲದ ಮೇಲೆ ಹರಡಿ ಬೆಳೆಯುತ್ತದೆ. ಬ್ರಾಹ್ಮಿ ಅಂದರೆ ತಿಮರೆ, ಒಂದಲಗ ಎಂದೂ ಸಹ ಕರೆಯಲ್ಪಡುವ ಮನೆಯಂಗಳದಲ್ಲೇ ಕಾಣಸಿಗುವ ಒಂದು ಸಸ್ಯ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರಕೃತಿಯು ನಮಗೆ ಆರೋಗ್ಯ ಪ್ರಯೋಜನಗಳಿಂದ ತುಂಬಿರುವ ಅನೇಕ ನೈಸರ್ಗಿಕ ವಸ್ತುಗಳನ್ನು ನೀಡಿದೆ. ಬ್ರಾಹ್ಮಿ ಒಂದು ಔಷಧೀಯ ಸಸ್ಯವಾಗಿದ್ದು, ನೆಲದ ಮೇಲೆ ಹರಡಿ ಬೆಳೆಯುತ್ತದೆ. ಬ್ರಾಹ್ಮಿ ಅಂದರೆ ತಿಮರೆ, ಒಂದಲಗ ಎಂದೂ ಸಹ ಕರೆಯಲ್ಪಡುವ ಮನೆಯಂಗಳದಲ್ಲೇ ಕಾಣಸಿಗುವ ಒಂದು ಸಸ್ಯ.
ಇದರ ಕಾಂಡ, ಎಲೆಗಳು ಮತ್ತು ಹೂವುಗಳನ್ನು ಆರೋಗ್ಯ ಪ್ರಯೋಜನಗಳಿಗಾಗಿ ಬಳಸಲಾಗುತ್ತದೆ. 'ಮೆದುಳಿನ ವರ್ಧಕ' ಎಂದೂ ಕರೆಯಲ್ಪಡುವ ಬ್ರಾಹ್ಮಿಯನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಬಳಸಬಹುದು. ಆಯುರ್ವೇದದ ಪ್ರಕಾರ, ಬ್ರಾಹ್ಮಿ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ, ಪಿತ್ತರಸವನ್ನು ತೆಗೆದುಹಾಕುತ್ತದೆ, ಸ್ಮರಣಶಕ್ತಿಯನ್ನು ಬಲಪಡಿಸುತ್ತದೆ, ತಂಪನ್ನು ನೀಡುತ್ತದೆ ಮತ್ತು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ.
ಬ್ರಾಹ್ಮಿಯಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ, ಮಧುಮೇಹ ನಿವಾರಕ ಗುಣಗಳು ಕಂಡುಬರುತ್ತವೆ. ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಹಲವು ವರ್ಷಗಳಿಂದ ಔಷಧಿಯಾಗಿ ಬಳಸಲಾಗುತ್ತಿದೆ. ಮಾನಸಿಕ ಕಾಯಿಲೆಗಳಲ್ಲಿ ಬ್ರಾಹ್ಮಿ ಎಲೆಗಳ ಪುಡಿ ಪ್ರಯೋಜನಕಾರಿ. ಹಾಗಾದರೆ ಬ್ರಾಹ್ಮಿಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಟೈಪ್ 2 ಮಧುಮೇಹ ರೋಗಿಗಳಿಗೆ ಬ್ರಾಹ್ಮಿ ಪ್ರಯೋಜನಕಾರಿ. ಬ್ರಾಹ್ಮಿ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು,ಇದು ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬ್ರಾಹ್ಮಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾದ ಒಂದು ಗಿಡಮೂಲಿಕೆಯಾಗಿದೆ. ಬ್ರಾಹ್ಮಿಯಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಬ್ರಾಹ್ಮಿ ಸೇವನೆಯು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಬ್ರಾಹ್ಮಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಒಂದು ಗಿಡಮೂಲಿಕೆಯಾಗಿದೆ. ಇದನ್ನು ಅಡಾಪ್ಟೋಜೆನ್ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಬಹುದು.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಬ್ರಾಹ್ಮಿ ಸೇವಿಸಬಹುದು. ಬ್ರಾಹ್ಮಿ ಪುಡಿಯನ್ನು ಬಳಸುವುದರಿಂದ ಕೆಮ್ಮಿನ ಸಮಸ್ಯೆಯನ್ನು ಸಹ ಪರಿಹರಿಸಬಹುದು.
ಬ್ರಾಹ್ಮಿ ಎಲೆಯನ್ನು ಕಷಾಯ ಮಾಡಿಯೂ ಕುಡಿಯಬಹುದು. ಇಲ್ಲವೇ ಬೆಳಗೆದ್ದು ಖಾಲಿ ಹೊಟ್ಟೆಗೆ ಒಂದೆರಡು ಎಲೆಯನ್ನು ಜಗಿದು ತಿಂದರೆ ಕೂಡ ಪ್ರಯೋಜನ ಸಿಗುತ್ತದೆ. ಇನ್ನು ಇದನ್ನು ಚಟ್ನಿ ರೂಪದಲ್ಲಿಯೂ ತಯಾರಿಸಿ ಸೇವಿಸಲಾಗುತ್ತದೆ.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.