ಹೆಮ್ಮೆಯ ಕನ್ನಡಿಗ “ದ ವಾಲ್”; ಯಾರೂ ಮುರಿಯಲಾಗದ ರಾಹುಲ್ ದ್ರಾವಿಡ್ ದಾಖಲೆಗಳು!!

Rahul Dravid: ಒಂದು ವರ್ಷದಲ್ಲಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆಯು ದ್ರಾವಿಡ್‌ ಹೆಸರಿನಲ್ಲಿದೆ. ದ್ರಾವಿಡ್ 1999ರಲ್ಲಿ ದಾಖಲೆಯ 43 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಈ ದಾಖಲೆ ಮುರಿಯುವುದು ಇಂದಿಗೂ ಕಷ್ಟವಾಗಿದೆ. 
 

Rahul Dravid Records: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ ಇದೇ ಶನಿವಾರ (ಜನವರಿ 11) 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ʼದಿ ವಾಲ್‌ʼ ಖ್ಯಾತಿಯ ದ್ರಾವಿಡ್‌ ಟೀಂ ಇಂಡಿಯಾದ ಕೋಚ್‌ ಹುದ್ದೆಯನ್ನ ತೊರೆದ ನಂತರ ತಮ್ಮ ಕುಟುಂಬದೊಂದಿಗೆ ಖುಷಿಯಿಂದ ಸಮಯವನ್ನು ಕಳೆಯುತ್ತಿದ್ದಾರೆ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ದ್ರಾವಿಡ್‌ ಅವರು ಹತ್ತು-ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಪೈಕಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ರಾವಿಡ್‌ ನಿರ್ಮಿಸಿರುವ ಕೆಲವು ದಾಖಲೆಗಳನ್ನ ಮುರಿಯುವುದು ಕಷ್ಟಸಾಧ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ದ್ರಾವಿಡ್ ಹೆಸರಿನಲ್ಲಿದೆ. ದ್ರಾವಿಡ್‌ ತಮ್ಮ ಟೆಸ್ಟ್‌ ವೃತ್ತಿಜೀವನದಲ್ಲಿ ಒಟ್ಟು 31,258 ಎಸೆತಗಳನ್ನು ಎದುರಿಸಿದ್ದಾರೆ. ಅಂದರೆ ಸರಿಸುಮಾರು 5210 ಓವರ್‌ಗಳು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆತಗಳನ್ನು ಎದುರಿಸಿದ ಆಟಗಾರ ಎನಿಸಿಕೊಂಡಿರುವ ದ್ರಾವಿಡ್‌ ಅವರ ಈ ದಾಖಲೆಯನ್ನ ಮುರಿಯುವುದು ತುಂಬಾ ಕಷ್ಟ.

2 /5

ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ನಿಮಿಷಗಳು/ಸಮಯ ಬ್ಯಾಟಿಂಗ್ ಮಾಡಿದ ದಾಖಲೆ ದ್ರಾವಿಡ್‌ ಹೆಸರಿನಲ್ಲಿದೆ. ದ್ರಾವಿಡ್ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಕ್ರೀಸ್‌ನಲ್ಲಿ ಹೆಚ್ಚು ನಿಮಿಷ ಅಂದರೆ ಒಟ್ಟು ದಾಖಲೆಯ 44,152 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಏಕೈಕ ಬ್ಯಾಟರ್‌ ಆಗಿದ್ದಾರೆ. 

3 /5

ಟೆಸ್ಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಎಂಬ ಖ್ಯಾತಿಗೆ ದ್ರಾವಿಡ್‌ ಭಾಜನರಾಗಿದ್ದಾರೆ. ದ್ರಾವಿಡ್ ಟೆಸ್ಟ್‌ನಲ್ಲಿ ದಾಖಲೆಯ 210 ಕ್ಯಾಚ್‌ಗಳನ್ನು ಪಡೆದಿದ್ದಾರೆ. ಈ ಮಾದರಿಯಲ್ಲಿ ಅತಿಹೆಚ್ಚು ಕ್ಯಾಚ್‌ಗಳನ್ನು ಹಿಡಿದಿರುವ ಫೀಲ್ಡರ್‌ ಎನಿಸಿಕೊಂಡಿದ್ದಾರೆ. 

4 /5

ಡಕ್ (0) ಅಥವಾ ಸೊನ್ನೆ ಸುತ್ತದೇ ಸತತ ಅತಿ ಹೆಚ್ಚು ಏಕದಿನ ಇನ್ನಿಂಗ್ಸ್‌ಗಳ ದಾಖಲೆ ನಿರ್ಮಿಸಿದ್ದಾರೆ. ದ್ರಾವಿಡ್ 120 ಏಕದಿನ ಇನ್ನಿಂಗ್ಸ್‌ಗಳೊಂದಿಗೆ ಈ ದಾಖಲೆಯನ್ನು ಹೊಂದಿದ್ದಾರೆ. ಡಕ್ ಇಲ್ಲದೆ ಸತತ ಅತಿ ಹೆಚ್ಚು ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳು : ದ್ರಾವಿಡ್ ದಾಖಲೆಯ 173 ಇನ್ನಿಂಗ್ಸ್‌ಗಳಲ್ಲಿ ಡಕ್ ಇಲ್ಲದೆ ಬ್ಯಾಟಿಂಗ್ ಮಾಡಿದ್ದಾರೆ.

5 /5

ಒಂದು ವರ್ಷದಲ್ಲಿ ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆಯು ದ್ರಾವಿಡ್‌ ಹೆಸರಿನಲ್ಲಿದೆ. ದ್ರಾವಿಡ್ 1999ರಲ್ಲಿ ದಾಖಲೆಯ 43 ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಈ ದಾಖಲೆ ಮುರಿಯುವುದು ಇಂದಿಗೂ ಕಷ್ಟವಾಗಿದೆ.