ಈ ನಾಲ್ಕು ಅಭ್ಯಾಸಗಳು ನಿಮ್ಮಲ್ಲಿದ್ದರೆ ಹಾರ್ಟ್ ಅಟ್ಯಾಕ್ ಭಯವೇ ಬೇಡ! ಹೃದಯ ಕಾಯಿಲೆ ಹತ್ತಿರವೂ ಸುಳಿಯುವುದಿಲ್ಲ

ಕೆಲವು  ಅಭ್ಯಾಸಗಳನ್ನು ಬದಲಾಯಿಸಿಕೊಂಡು, ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

Written by - Ranjitha R K | Last Updated : Jan 13, 2025, 07:39 PM IST
  • ಪ್ರತಿದಿನ 40 ನಿಮಿಷಗಳ ಕಾಲ ವ್ಯಾಯಾಮ ಮಾಡಿ.
  • ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ.
  • ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಿ.
ಈ ನಾಲ್ಕು ಅಭ್ಯಾಸಗಳು ನಿಮ್ಮಲ್ಲಿದ್ದರೆ ಹಾರ್ಟ್ ಅಟ್ಯಾಕ್ ಭಯವೇ ಬೇಡ!  ಹೃದಯ ಕಾಯಿಲೆ ಹತ್ತಿರವೂ ಸುಳಿಯುವುದಿಲ್ಲ  title=

ಬೆಂಗಳೂರು : ದಿನನಿತ್ಯದ ಕೆಲವು ಅಭ್ಯಾಸಗಳು ನಮಗೆ ಗೊತ್ತಿಲ್ಲದಂತೆಯೇ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡು, ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಿದರೆ, ಹೃದಯ ಕಾಯಿಲೆಗಳ ಅಪಾಯ ಕೂಡಾ ಕಡಿಮೆಯಾಗುವುದು.  ಮಾತ್ರವಲ್ಲ ಹೃದಯಾಘಾತ ಎನ್ನುವ ಮಹಾ ಮಾರಿಯ ಭಯ ಜೀವನ ಪೂರ್ತಿ ಇರುವುದಿಲ್ಲ. 

ದಿನಕ್ಕೆ 40 ನಿಮಿಷ ವ್ಯಾಯಾಮ :
ಇತ್ತೀಚಿನ ಜೀವನಶೈಲಿಯ ಪ್ರಕಾರ, ಉತ್ತಮ ಆರೋಗ್ಯಕ್ಕಾಗಿ, ಪ್ರತಿದಿನ 40 ನಿಮಿಷ ವ್ಯಾಯಾಮ ಕಡ್ಡಾಯ. ವಾರದಲ್ಲಿ 5 ದಿನ ಹೀಗೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಬಹುದು. ಇದು ತೂಕ ನಷ್ಟ, ರಕ್ತದ ಸಕ್ಕರೆ ಮಟ್ಟ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ :ಯಾವುದೇ ಡಯೆಟ್‌ ಬೇಡ.. ಈ ತರಕಾರಿ ತಿಂದ್ರೆ ಸಾಕು ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್‌ ಕರಗಿಹೋಗುತ್ತೆ! ಹೃದಯಾಘಾತಕ್ಕೆ ಇದೇ ಮದ್ದು..

ಸದಾ ಸಂತೋಷದಿಂದ ಇರುವುದು :
ಸಂತೋಷದಿಂದ ಇದ್ದಾಗ, ದೇಹದಲ್ಲಿ ಎಂಡಾರ್ಫಿನ್ ಹಾರ್ಮೋನ್ ಗಳ ಬಿಡುಗಡೆಯಾಗುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಮಾಡಿದರೆ ಸಹಾಯವಾಗುತ್ತದೆ. 

ಸರಿಯಾದ ಪ್ರಮಾಣದಲ್ಲಿ ನಿದ್ದೆ :  
ಉತ್ತಮ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಏನೇ ಆದರೂ ರಾತ್ರಿ ವೇಳೆ  7 ರಿಂದ 8 ಗಂಟೆಗಳ ಕಾಲ ನಿದ್ದೆಯನ್ನು ತಪ್ಪಿಸಬಾರದು. ರಾತ್ರಿ ಸರಿಯಾಗಿ ನಿದ್ದೆ ಮಾಡುವುದರಿಂದ ಅನೇಕ ಕಾಯಿಲೆಗಳನ್ನು ದೂರ ಇಡಬಹುದು.  

ಇದನ್ನೂ ಓದಿ :ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್‌ ಬಿಸಿ ಹಾಲಿಗೆ ಇದನ್ನು ಬೆರೆಸಿ ಕುಡಿದರೆ ಸೊಂಟ ಮತ್ತು ಹೊಟ್ಟೆಯ ಬೊಜ್ಜು 7 ದಿನದಲ್ಲಿ ಮೇಣದಂತೆ ಕರಗುವುದು

ಧೂಮಪಾನ ಮತ್ತು ಮದ್ಯಪಾನದಿಂದ ದೂರ : 
WHO ಅಂಕಿಅಂಶಗಳ ಪ್ರಕಾರ, ಧೂಮಪಾನ ಮತ್ತು ಮದ್ಯಪಾನದಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದು ಹೃದ್ರೋಗದಿಂದ ಸಾವಿನ ಅಪಾಯವನ್ನು ಶೇಕಡಾ 50 ರಷ್ಟು ಹೆಚ್ಚಿಸುತ್ತದೆ. ಮದ್ಯಪಾನ ಮತ್ತು ಧೂಮಪಾನದಿಂದ ಅಧಿಕ ರಕ್ತದೊತ್ತಡಡ ಸಮಸ್ಯೆ ಉಂಟಾಗಬಹುದು. ಇದು ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ಕಡಿಮೆ ಪ್ರಮಾಣದ ಎಣ್ಣೆಬಳಕೆ :
ಅಡುಗೆಯಲ್ಲಿ ಎಣ್ಣೆಯ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.  ಆಲಿವ್  ಕ್ಯಾನೋಲಾ ಮತ್ತು ಅಗಸೆಬೀಜದಂತಹ ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿರುವ ಎಣ್ಣೆಯನ್ನು ಪ್ರತಿ ತಿಂಗಳು ಅರ್ಧ ಲೀಟರ್ ನಷ್ಟು ಸೇವಿಸುವುದು ಪ್ರಯೋಜನವನ್ನು ನೀಡುತ್ತದೆ. ಇದಲ್ಲದೆ, ಬೀಜಗಳು ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳನ್ನು ನಿಯಮಿತವಾಗಿ ಸೇವಿಸಿ.

ಫುಲ್ ಬ್ಲಡ್ ಕೌಂಟ್ , ಕೊಲೆಸ್ಟ್ರಾಲ್ ಮಟ್ಟ, ಮೂತ್ರಪಿಂಡ, ಯಕೃತ್ತು ಮತ್ತು ಥೈರಾಯ್ಡ್ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇಸಿಜಿ ಈ ಎಲ್ಲಾ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಿಸಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News