Viral News: ಭಾವಿ ಸೊಸೆಯನ್ನ ಮದುವೆ ಆದ ಮಾವ, ಜಿಗುಪ್ಸೆಗೊಂಡು ಸನ್ಯಾಸಿಯಾದ ಮಗ!!

Love Case: ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆಯೊಂದಿಗೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಭಾವಿ ಸೊಸೆಯನ್ನೇ ಮದುವೆ ಆಗಿದ್ದಾನೆ. ಈ ವಿಷಿಯ ತಿಳಿದ ಆತನ ಮಗ ಜೀವನದಲ್ಲಿ ಜಿಗುಪ್ಸೆಗೊಂಡು ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ. 

Written by - Puttaraj K Alur | Last Updated : Jan 13, 2025, 07:20 PM IST
  • ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆಯೊಂದಿಗೆ ಬೆಳಕಿಗೆ ಬಂದಿದೆ
  • ವ್ಯಕ್ತಿಯೊಬ್ಬ ತನ್ನ ಭಾವಿ ಸೊಸೆಯನ್ನೇ ಮದುವೆ ಆಗಿದ್ದಾನೆ
  • ವಿಷಯ ತಿಳಿದು ಸನ್ಯಾಸಿಯಾಗುವ ನಿರ್ಧಾರಕ್ಕೆ ಬಂದ ಮಗ
Viral News: ಭಾವಿ ಸೊಸೆಯನ್ನ ಮದುವೆ ಆದ ಮಾವ, ಜಿಗುಪ್ಸೆಗೊಂಡು ಸನ್ಯಾಸಿಯಾದ ಮಗ!! title=
ಭಾವಿ ಸೊಸೆಯನ್ನೇ ಮದುವೆಯಾದ ವ್ಯಕ್ತಿ!

Maharashtra Love Case: ಮಾವ-ಸೊಸೆ, ಅತ್ತೆ-ಅಳಿಯನ ಸಂಬಂಧವನ್ನ ಪವಿತ್ರವೆಂದು ನಂಬಲಾಗಿದೆ. ಮಾವ ಅಪ್ಪನಿಗೆ ಸಮಾನ, ಅದೇ ರೀತಿ ಮಗಳ ಕೊಟ್ಟ ಅತ್ತೆ ತಾಯಿಗೆ ಸಮಾನ ಅಂತಾ ಹೇಳುತ್ತಾರೆ. ಆದರೆ ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ. ಇಂದಿನ ಕಾಲದಲ್ಲಿ ಸಂಬಂಧಕ್ಕೆ ಯಾವುದೇ ರೀತಿ ಬೆಲೆ ಇಲ್ಲ. ವಯಸ್ಸಿನ ಅಂತರವಿಲ್ಲದೆ ಜನರು ಪ್ರೀತಿ ಮಾಡುತ್ತಾರೆ, ಮದುವೆನೂ ಆಗುತ್ತಾರೆ. ಯಾರನ್ನೋ ಮದುವೆಯಾಗಲು ಬಂದ ಹುಡುಗಿ ಮತ್ತಿನ್ನಾರನ್ನೂ ಮದುವೆಯಾಗಿರೋ ಹಲವಾರು ಘಟನೆಗಳು ನಡೆದಿವೆ. 

ಮಹಾರಾಷ್ಟ್ರದಲ್ಲಿ ಆಘಾತಕಾರಿ ಘಟನೆಯೊಂದಿಗೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಭಾವಿ ಸೊಸೆಯನ್ನೇ ಮದುವೆ ಆಗಿದ್ದಾನೆ. ಈ ವಿಷಿಯ ತಿಳಿದ ಆತನ ಮಗ ಜೀವನದಲ್ಲಿ ಜಿಗುಪ್ಸೆಗೊಂಡು ಸನ್ಯಾಸಿಯಾಗುವ ನಿರ್ಧಾರ ತೆಗೆದುಕೊಂಡಿದ್ದಾನೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜನರಿಗೆ ಶಾಕ್‌ ಆಗಿದೆ. ಅಷ್ಟಕ್ಕೂ ತಂದೆ ಸ್ಥಾನದಲ್ಲಿರುವ ಮಾವ ಅದು ಹೇಗೆ ತನ್ನ ಭಾವಿ ಸೊಸೆಯನ್ನ ಮದುವೆಯಾದ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಇದನ್ನೂ ಓದಿ: 2024ರಲ್ಲಿ ಅಮೆರಿಕ ಅಧ್ಯಕ್ಷರ ವಾರ್ಷಿಕ ವೇತನಕ್ಕಿಂತ 2 ಪಟ್ಟು ಹೆಚ್ಚಾಗಿದೆ ಗುಕೇಶ್ ಸಂಪತ್ತು!

ಅಂದಹಾಗೆ ಈ ಘಟನೆ ಮಹಾರಾಷ್ಟ್ರದ ನಾಸಿಕದಲ್ಲಿ ನಡೆದಿದೆ. ಮಗನ ಮದುವೆಗೆ ಆತನ ತಂದೆ ಎಲ್ಲ ರೀತಿ ಸಿದ್ಧತೆ ಮಾಡಿದ್ದ. ಮಗನಿಗಾಗಿ ಹುಡುಗಿಯನ್ನೂ ಹುಡುಕಿದ್ದ. ಎರಡೂ ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ್ದವು. ಮದುವೆ ದಿನಾಂಕ ಕೂಡ ಫಿಕ್ಸ್ ಆಗಿತ್ತು. ಕುಟುಂಬದಲ್ಲಿ ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ವರ ತನ್ನ ಹೊಸ ಜೀವನದ ಬಗ್ಗೆ ಕನಸು ಕಾಣುತ್ತಿದ್ದ. ಆದರೆ ಅಲ್ಲಿ ಆಗಿದ್ದೇ ಬೇರೆ. ನಂಬಿದ್ದ ಅಪ್ಪನೇ ಆತನಿಗೆ ಕೈಕೊಟ್ಟಿದ್ದಾನೆ. ಆತನಿಗೆ ಭಾವಿ ಸೊಸೆಯ ಮೇಲೆ ಪ್ರೀತಿ ಮೂಡಿದೆ. ಬಳಿಕ ಇಬ್ಬರು ಮುಹೂರ್ತ ನೋಡದೆ, ಮನೆಯವರಿಗೆ ವಿಷಯ ತಿಳಿಸದೇ ಮದುವೆ ಆಗಿದ್ದಾರೆ. ಈ ಘಟನೆಯಿಂದ ಮದುವೆಗೆ ಸಜ್ಜಾಗಿದ್ದ ಮಗ ದಿಗ್ಭ್ರಮೆಗೊಂಡಿದ್ದಾನೆ. 

ತಂದೆ ತನ್ನ ಮಗನಿಗೆ ಇನ್ನೊಂದು ಹುಡುಗಿ ಹುಡುಕುವುದಾಗಿ ಭರವಸೆ ನೀಡಿದ್ದ. ಮನೆಯವರೆಲ್ಲ ಆತನ ಮನವೊಲಿಸುವ ಪ್ರಯತ್ನ ನಡೆಸಿದ್ದರು. ತಂದೆಯಿಂದ ಬೇರೆಯಾಗಿ ವಾಸವಾಗು, ನಾವು ಬೇರೆ ಹುಡುಗಿ ನೋಡಿ ಮದುವೆ ಮಾಡುತ್ತೇವೆ ಎಂದು ಹೇಳಿದ್ದರು. ಆದ್ರೆ ಆತ ಮಾತ್ರ ಮನಸ್ಸು ಬದಲಿಸಲಿಲ್ಲ. ನಿಶ್ಚಿತಾರ್ಥವಾಗಿದ್ದ ಹುಡುಗಿಯೇ ಕೈಕೊಟ್ಟ ಮೇಲೆ ಆತ ಸಂಸಾರದ ಬಗ್ಗೆ ಜಿಗುಪ್ಸೆ ಹೊಂದಿದ್ದಾನೆ. ಅಪ್ಪನ ಮೋಸದಿಂದ ಬೇಸತ್ತ ಆತ ಮದುವೆಯಾಗದೆ, ಒಂಟಿಯಾಗಿರುವ ನಿರ್ಧಾರಕ್ಕೆ ಬಂದಿದ್ದಾನೆ. ಈ ಸುದ್ದಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಆನೆಗೆ ಕಣ್ಣಿಟ್ಟು ಬೇಟೆಗೆ ಮುಂದಾದ ಹುಲಿರಾಯ, ಮುಂದೆ ಆಗಿದ್ದೇ ಬೇರೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News