ಫೈನಾನ್ಸ್‌ ಕಿರುಕುಳಕ್ಕೆ ಊರೇ ಬಿಟ್ಟ ನೂರಾರು ಕುಟುಂಬ; ತುಮಕೂರಿನಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ!!

Financial harassment: ಮೈಕ್ರೋ ಫೈನಾನ್ಸ್‌ ಕಿರುಕುಳ ತಾಳಲಾರದೆ ತುಮಕೂರು ಜಿಲ್ಲೆಯ ತಿಪಟೂರಿನ ಭೋವಿ ಕಾಲೋನಿ ನಿವಾಸಿ ಸಾದೀಕ್‌ ಬೇಗಂ (೪೨) ಶುಕ್ರವಾರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. 

Written by - Puttaraj K Alur | Last Updated : Jan 12, 2025, 09:52 AM IST
  • ಮನೆ ಖರ್ಚು ವೆಚ್ಚ ಸರಿದೂಗಿಸಲು ಫೈನಾನ್ಸ್‌ಗಳಿಂದ ಸಾಲ ಪಡೆದಿದ್ದ ಜನರು
  • ಹಣ ಪಾವತಿ ವಿಳಂಬವಾದರೆ ಮನೆಗೆ ನುಗ್ಗಿ ಕೀಳು ಭಾಷೆಯಲ್ಲಿ ಬೈಗುಳ
  • ಕುರುಕುಳಕ್ಕೆ ಬೇಸತ್ತ ಹೆಗ್ಗವಾಡಿಪುರ, ದೇಶವಳ್ಳಿ ಸುತ್ತಮುತ್ತಲ ಗ್ರಾಮಸ್ಥರು
ಫೈನಾನ್ಸ್‌ ಕಿರುಕುಳಕ್ಕೆ ಊರೇ ಬಿಟ್ಟ ನೂರಾರು ಕುಟುಂಬ; ತುಮಕೂರಿನಲ್ಲಿ ಫೈನಾನ್ಸ್‌ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ!! title=
ಫೈನಾನ್ಸ್‌ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ!

Financial harassment: ಅನಧಿಕೃತ ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳ ತಡೆಯಲಾಗದೇ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ, ದೇಶವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಕುಟುಂಬಗಳ ಜನರು ಗ್ರಾಮ ತೊರೆದಿರುವ ಆಘಾತಕಾರಿ ಘಟನೆ ನಡೆದಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಬಗ್ಗೆ ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಜಿಲ್ಲಾಡಳಿತ ಶುಕ್ರವಾರ ನಾಲ್ಕು ಅಧಿಕಾರಿಗಳ ತಂಡವನ್ನು ರಚಿಸಿದೆ ಎಂದು ತಿಳಿದುಬಂದಿದೆ.

ಹೆಗ್ಗವಾಡಿಪುರ, ದೇಶವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಲ ವಸೂಲಿಗಾರರ ಕಿರುಕುಳ ತಾಳಲಾರದೆ ಕಳೆದ ೧೫ ದಿನಗಳಿಂದ ಜನರು ಗ್ರಾಮ ಬಿಟ್ಟು ದೂರದ ಸಂಬಂಧಿಕರ ಊರುಗಳಿಗೆ ಹೋಗುತ್ತಿದ್ದಾರೆ. ಜೊತೆಗೆ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ಪೋಷಕರು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಇದರಿಂದ ಮಕ್ಕಳು ಶೈಕ್ಷಣಿಕ ಹಿನ್ನಡೆ ಅನುಭವಿಸುತ್ತಿದ್ದಾರೆ. ಮನೆಯ ಸಣ್ಣಪುಟ್ಟ ಖರ್ಚು-ವೆಚ್ಚಗಳನ್ನ ಸರಿದೂಗಿಸಲು ಇಲ್ಲಿನ ಜನರು ಮೈಕ್ರೋ ಫೈನಾನ್ಸ್‌ ಕಂಪನಿಗಳಿಂದ ಸಾಲವನ್ನು ಪಡೆದುಕೊಂಡಿದ್ದರಂತೆ. ಆದರೆ ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. 

ಇದನ್ನೂ ಓದಿ: ಹೀಗೂ ಉಂಟೇ.. ಗರ್ಭಧರಿಸಿ ಮಕ್ಕಳಿಗೆ ಜನ್ಮ ನೀಡುವ ವಿಶ್ವದ ಏಕೈಕ ಗಂಡು ಪ್ರಾಣಿ ಇದು!

ಈ ಬಗ್ಗೆ ಹೆಗ್ಗವಾಡಿಪುರ ಗ್ರಾಮದ ಮೋಹನ್‌ ಎಂಬ ಬಾಲಕ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾನೆ. ʼಫೈನಾನ್ಸ್‌ನವರು ಬಾಯಿಗೆ ಬಂದಂತೆ ಬಯ್ಯುತ್ತಾರೆ, ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಮಾತನಾಡುತ್ತಾರೆ. ನಮಗೆ ಕಿರುಕುಳ ಕೊಡುತ್ತಾರೆʼ ಅಂತಾ ನೋವು ತೋಡಿಕೊಂಡಿದ್ದಾನೆ. ʼಕೈ ಮುಗಿದು ಕೇಳಿಕೊಳ್ತೀನಿ, ನನ್ನ ಒಂದು ಕಿಡ್ನಿ ಮಾರಲು ಅನುಮತಿ ಕೊಡ್ಸಿ ಸರ್‌, ಕಿಡ್ನಿ ಮಾರಿ ಅಪ್ಪ-ಅಮ್ಮ ಮಾಡಿರುವ ಸಾಲವನ್ನು ತೀರಿಸಿ ಹೆಂಗೋ ಬದುಕುತ್ತೀವಿʼ ಎಂದು ಹೇಳಿ ಬಾಲಕ ಕಣ್ಣೀರಿಟ್ಟಿದ್ದಾನೆ. ಫೈನಾನ್ಸ್‌ ಕಿರುಕುಳದಿಂದ ಜನರು ಊರು ತೊರೆಯುತ್ತಿರುವ ಬಗ್ಗೆ ರೈತ ಮುಖಂಡರು ಸಚಿವ ಕೆ.ವೆಂಕಟೇಶ್‌ ಅವರ ಮುಂದೆ ಕಳೆದ ಮಂಗಳವಾರ ಅಳಲು ತೊಡಿಕೊಂಡಿದ್ದರು. ʼಪೋಷಕರು ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ಊರು ತೊರೆಯುತ್ತಿದ್ದಾರೆ. ಫೈನಾನ್ಸ್‌ ಕಿರುಕುಳಕ್ಕೆ ಕಡಿವಾಣ ಹಾಕಿʼ ಎಂದು ಒತ್ತಾಯಿಸಿದ್ದಾರೆ. ಡಿಸಿ ಮತ್ತು ಎಸಿಗೆ ಸೂಕ್ತ ಕ್ರಮಕ್ಕೆ ಸೂಚಿಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ್ದರು. 

ʼಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳದಿಂದ ಯಾರೂ ಊರು ಖಾಲಿ ಮಾಡಬೇಡಿ. ಡಿಸಿ, ಎಸಿ, ತಹಶೀಲ್ದಾರ್‌ ಕಚೇರಿ ಅಥವಾ ಗ್ರಾಪಂಗೆ ತೆರಳಿ ದೂರು ನೀಡಬೇಕುʼ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಸೂಚಿಸಿದ್ದಾರೆ. ʼನಿಮಗೆ ಯಾವುದೇ ತೊಂದರೆ ಆಗದಂತೆ ಸಮಸ್ಯೆ ಬಗೆಹರಿಸುತ್ತೇವೆ. ಸಮಗ್ರ ವರದಿ ನೀಡಲು ನಾಲ್ಕು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಯಾವ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ? ಅಧಿಕೃತ ಎಷ್ಟು? ಅನಧಿಕೃತ ಎಷ್ಟು? ಗ್ರಾಮ ತೊರೆದಿರುವ ಕುಟುಂಬಗಳೆಷ್ಟು ಎಂಬುದನ್ನು ವರದಿ ನೀಡಲು ಸೂಚಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಲಾಗುವುದುʼ ಎಂದು ಅವರು ತಿಳಿಸಿದ್ದಾರೆ. ಜನರು ಸಹ ಅಧಿಕೃತ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳ ಮೂಲಕ ವ್ಯವಹರಿಸಬೇಕು, ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿದಾರರ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮಾಜಿ ಕಾರ್ಪೊರೇಟ‌ರ್ ಮನೆ ಮೇಲೆ ಐಟಿ ದಾಳಿ; 4 ಮೊಸಳೆಗಳು ಪತ್ತೆ!!

ಫೈನಾನ್ಸ್‌ ಕಿರುಕುಳ ತಡೆಯಲಾಗೆ ಮಹಿಳೆ ಆತ್ಮಹತ್ಯೆ!!

ಮೈಕ್ರೋ ಫೈನಾನ್ಸ್‌ ಕಿರುಕುಳ ತಾಳಲಾರದೆ ತುಮಕೂರು ಜಿಲ್ಲೆಯ ತಿಪಟೂರಿನ ಭೋವಿ ಕಾಲೋನಿ ನಿವಾಸಿ ಸಾದೀಕ್‌ ಬೇಗಂ (೪೨) ಶುಕ್ರವಾರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್‌ನಲ್ಲಿ ೨ ಲಕ್ಷಕ್ಕೂ ಹೆಚ್ಚು ಹಣ ಸಾಲ ಮಾಡಿದ್ದು, ಅದನ್ನು ತೀರಿಸುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News