Serial Actress amulya Gowda: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಮಲಿ ಸಿರೀಯಲ್ ಮೂಲಕ ಮನೆಮಾತಾಗಿದ್ದ ಅಮೂಲ್ಯ ಗೌಡ ಸದ್ಯ ತೆಲುಗು ಧಾರವಾಹಿಗಳಲ್ಲಿಯೂ ಮಿಂಚುತ್ತಿದ್ದಾರೆ.. ಇದೀಗ ಇವರ ಕುರಿತಾದ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
ಅಮೂಲ್ಯ ಓಂಕಾರ್ ಮತ್ತು ನಿರಂಜನ್ ತೆಲುಗು-ಕನ್ನಡ ಧಾರಾವಾಹಿಗಳಿಂದ ಸೂಪರ್ ಹಿಟ್ ಆನ್ಸ್ಕ್ರೀನ್ ಜೋಡಿಗಳು.. ಇದೀಗ ಇವರಿಬ್ಬರು ಪ್ರೀತಿಸುತ್ತಿರುವುದು ಮತ್ತೊಮ್ಮೆ ದೃಢಪಟ್ಟಿದೆ.
ಕಮಲಿ ಧಾರಾವಾಹಿ ಖ್ಯಾತಿಯ ರೀಲ್ ಜೋಡಿ ರಿಯಲ್ ಜೋಡಿಯಾಗ್ತಾರಾ..? ಎಂದು ಅಮೂಲ್ಯ ಓಂಕಾರ್ ಮತ್ತು ನಿರಂಜನ್ ಸದ್ಯ ಕನ್ನಡ ಕಿರುತೆರೆಯಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.
ಇದಕ್ಕೂ ಒಂದು ಕಾರಣವಿದೆ.. ಇತ್ತೀಚೆಗೆ ಅಮೂಲ್ಯ ತೆಲುಗು ರಿಯಾಲಿಟಿ ಶೋವೊಂದಕ್ಕೆ ಎಂಟ್ರಿಕೊಟ್ಟಿದ್ದರು.. ಆ ವೇಳೆ ವೇದಿಕೆ ಮೇಲೆಯೇ ಅವರ ಮೊಬೈಲ್ನಿಂದ ನಿರಂಜನ್ ಅವರಿಗೆ ಕಾಲ್ ಮಾಡಲಾಗಿತ್ತು.. ಆಗ ಅಮೂಲ್ಯ ನಾನು ರಿಯಾಲಿಟಿ ಶೋನಲ್ಲಿದ್ದೇನೆ ಫೋನ್ ಸ್ಫೀಕರ್ನಲ್ಲಿದೆ ಎಂದು ಹೇಳಿದ್ದಾರೆ..
ಇದನ್ನೆಲ್ಲ ಕೇಳಿದವರು ಖಂಡಿವಾಗಿಯೂ ಇವರಿಬ್ಬರ ಮಧ್ಯೆ ಏನೋ ಇದೆ ಎಂದು ಊಹಿಸುತ್ತಿದ್ದಾರೆ.. ಆದರೆ ಇಬ್ಬರಲ್ಲಿ ಒಬ್ಬರೂ ಕೂಡ ಇಂತಹ ಸುದ್ದಿಗಳಿಗೆ ಪ್ರತಿಕ್ರಿಯಿಸಿಲ್ಲ..
ಅಮೂಲ್ಯ ಮತ್ತು ನಿರಂಜನ್ ಕನ್ನಡದಲ್ಲಿ ಕಮಲಿ ಮತ್ತು ರಿಷಿ ಎಂದು ಪ್ರಸಿದ್ಧರಾದರು. ಅದರಂತೆ ನಿರಂಜನ್ ಅವರಿಗೆ ತೆಲುಗು ಧಾರಾವಾಹಿಯಲ್ಲಿಯೂ ಜನಪ್ರಿಯತೆ ದೊರೆಯಿತು..
ನಟಿ ಅಮೂಲ್ಯ ಓಂಕಾರ್ ತೆಲುಗಿನಲ್ಲಿ ಕಾರ್ತಿಕ ದೀಪಂನಂತಹ ಧಾರಾವಾಹಿಗಳನ್ನೂ ಮಾಡಿದ್ದಾರೆ. ಆದರೆ ಇಲ್ಲಿ ಆಕೆಗೆ ಅಷ್ಟೊಂದು ಖ್ಯಾತಿ ಸಿಗಲಿಲ್ಲ.
ಅಮೂಲ್ಯ ಮತ್ತು ನಿರಂಜನ್ ಜೋಡಿಯಾಗಿ ಕನ್ನಡದಲ್ಲಿ ಫೇಮಸ್ ಆಗಿದ್ದಾರೆ.. ಈ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಲ್ಲದೇ ತೆಲುಗಿನಲ್ಲೂ ನಿರಂಜನ್ ಗೆ ಹೆಚ್ಚು ಅಭಿಮಾನಿಗಳು ಸಿಕ್ಕಿದ್ದಾರೆ.
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಅಮೂಲ್ಯ ಅವರಿಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಕೂಡಾ ಇದ್ದಾರೆ.. ಇವರ ಪೋಸ್ಟ್ ಮಾಡಿದ ಪೋಟೋಗಳಿಗೆ ಅಭಿಮಾನಿಗಳ ಲೈಕ್-ಕಾಮೆಂಟ್ ಸುರಿಮಳೆಯೇ ಸುರಿದಿರುತ್ತದೆ..