ರಿಟರ್ನ್ ಫೈಲಿಂಗ್ ಸಮಯದಲ್ಲಿ ಯಾವುದೇ ತಪ್ಪು ಸಂಭವಿಸಿದಲ್ಲಿ ಅಥವಾ ಯಾವುದೇ ಪ್ರಮುಖ ಮಾಹಿತಿ ತಪ್ಪಿದಲ್ಲಿ, ಅದನ್ನು ಪರಿಷ್ಕೃತ ಐಟಿಆರ್ ಮೂಲಕ ಸರಿಪಡಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಈಗ ತೆರೆಗೆದಾರರಿಗೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಮೌಲ್ಯಮಾಪನ ವರ್ಷ (AY) 2024-25 ಗಾಗಿ ಈಗ ತಡವಾದ ಅಥವಾ ಪರಿಷ್ಕೃತ ರಿಟರ್ನ್ಸ್ ಅನ್ನು ಜನವರಿ 15, 2025 ರವರೆಗೆ ಸಲ್ಲಿಸಬಹುದು. ಮೊದಲು ಈ ಗಡುವು 31 ಡಿಸೆಂಬರ್ 2024 ಆಗಿತ್ತು.
ಆದಾಯ ತೆರಿಗೆ ಇಲಾಖೆಯು ಟ್ವೀಟ್ ಮಾಡಿ 'CBDT AY 2024-25 ಗಾಗಿ ನಿವಾಸಿ ವ್ಯಕ್ತಿಗಳ ತಡವಾದ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು 31 ಡಿಸೆಂಬರ್ 2024 ರಿಂದ 15 ಜನವರಿ 2025 ರವರೆಗೆ ವಿಸ್ತರಿಸಿದೆ.
CBDT ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139(4) ಮತ್ತು 139(5) ಅಡಿಯಲ್ಲಿ ಈ ಅವಕಾಶವನ್ನು ನೀಡಿದೆ. ಸೆಕ್ಷನ್ 139(4) ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಸದವರಿಗೆ, ಈಗಾಗಲೇ ಸಲ್ಲಿಸಿದ ರಿಟರ್ನ್ಸ್ ಅನ್ನು ಸೆಕ್ಷನ್ 139(5) ಅಡಿಯಲ್ಲಿ ಸರಿಪಡಿಸಬಹುದು.
ರಿಟರ್ನ್ ಮೊತ್ತ ₹ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ₹ 1,000 ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ₹ 5 ಲಕ್ಷಕ್ಕಿಂತ ಹೆಚ್ಚಿನ ಆದಾಯವು ₹ 5,000 ದಂಡವನ್ನು ಆಕರ್ಷಿಸುತ್ತದೆ
ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಈ ವಿಸ್ತೃತ ದಿನಾಂಕವು ತೆರಿಗೆದಾರರಿಗೆ ತಪ್ಪುಗಳನ್ನು ಸರಿಪಡಿಸಲು ಮತ್ತು ಸರಿಯಾದ ಅಂಕಿಅಂಶಗಳನ್ನು ಪ್ರಸ್ತುತಪಡಿಸಲು ಅವಕಾಶವನ್ನು ನೀಡುತ್ತದೆ.