Rekha: ಹಿಂದಿ ಚಿತ್ರರಂಗದ ನಿತ್ಯಹರಿದ್ವರ್ಣ ನಟಿ ರೇಖಾ ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಶನದಲ್ಲಿ ನಟಿ ರೇಖಾ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.
Rekha: ಹಿಂದಿ ಚಿತ್ರರಂಗದ ನಿತ್ಯಹರಿದ್ವರ್ಣ ನಟಿ ರೇಖಾ ಇತ್ತೀಚೆಗೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಶನದಲ್ಲಿ ನಟಿ ರೇಖಾ ಅವರು ತಮ್ಮ ವೈಯಕ್ತಿಕ ಜೀವನದ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು.
ಈ ವೇಳೆ ಅವರು ತಮ್ಮ ಡ್ಯಾನ್ಸ್ ಮಾಸ್ಟರ್ನ ಕುರಿತು ಹಲವಾರು ರೋಚಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡ್ಯಾನ್ಸ್ ಮಾಸ್ಟರ್ ಹೇಗೆ ರೇಖಾ ಅವರಿಗೆ ರಕ್ತ ಸ್ರಾವ ಆಗುವ ಹಾಗೆ ವರ್ತಿಸಿದ್ದರು ಎಂಬುದನ್ನು ನಟಿ ಹಂಚಿಕೊಂಡಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಭಾರಿ ರೀಟೇಕ್ ತೆಗೆದುಕೊಂಡಿದ್ದ ಕಾರಣ ಡ್ಯಾನ್ಸ್ ಮಾಸ್ಟರ್ ಅವರು ರೇಖಾ ಅವರ ಮೇಲೆ ಪಾನ್ ಡಬ್ಬಿಯನ್ನು ಎಸೆದಿದ್ದರಂತೆ, ಡಬ್ಬಿಯನ್ನು ಎಸೆದ ವೇಗದಲ್ಲಿ ನಟಿಗೆ ಬಿದ್ದು ಅವರಿಗೆ ರಕ್ತಸ್ರಾವವಾಗಿತ್ತಂತೆ.
ಇದಾದ ನಂತರ ನಟಿ, ರೇಖಾ ಅವರು ತನ್ನ ಅಮ್ಮನಿಂದ ಒದೆ ತಿಂದ ವಿಚಾರವನ್ನು ಬಿಚಿಟ್ಟಿದ್ದರು. ಎಕ್ಸಾಂನಲ್ಲಿ ಫೇಲ್ ಆಗಿದ್ದ ಕಾರಣ ಬೆತ್ತವನ್ನು ಎಣ್ಣೆಯಲ್ಲಿ ಅದ್ದಿ ಮೈ ಮೇಲೆ ಬರೆ ಬರುವಂತೆ ಭಾರಿಸಿದ್ದರಂತೆ.
ನನ್ನ ರಿಪೋರ್ಟ್ ಕಾರ್ಡ್ ಬಂದಾಗ ಪ್ರಮೋಷನ್ ಡಿಟೆನ್ ಆಗಿದೆ ಎಂದು ಬರೆದಿದ್ದು ಇನ್ನೂ ನೆನಪಿದೆ. ಆಧರೆ, ನಾನು ಫೇಲ್ ಆಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ನನ್ನ ರಿಪೋರ್ಟ್ ಕಾರ್ಡ್ ನೋಡುತ್ತಿದತೆ ನನ್ನ ತಾಯಿ ಬೆತ್ತ ತೆಗೆದುಕೊಂಡು ಸಿಕ್ಕಾಪಟ್ಟೆ ಬಾರಿಸಿಬಿಟ್ಟಿದ್ದರು ಎಂದಿದ್ದಾರೆ.