Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ 'ಐಟಿ ನೋಟೀಸ್'...!

Income Tax Rules: ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ ಉಳಿತಾಯ ಖಾತೆಗಳಲ್ಲಿ ಹಣ ಡಿಪಾಸಿಟ್ ಮಾಡುವುದಕ್ಕೆ ಮಿತಿ ಇರುತ್ತದೆ. ಮತ್ತು ಆ ಲಿಮಿಟ್ ದಾಟಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬರಬಹುದು. 

Written by - Yashaswini V | Last Updated : Dec 23, 2024, 09:08 AM IST
  • ಸಂಬಳ ಪಡೆಯಲು, ಸರ್ಕಾರದ ಯೋಜನೆಗಳ ಲಾಭ ಪಡೆಯಲು, ಡಿಜಿಟಲ್ ವ್ಯವಹಾರ ಮಾಡಲು ಸೇವಿಂಗ್ಸ್ ಅಕೌಂಟ್ ಬೇಕೇ ಬೇಕು.
  • ಉಳಿತಾಯ ಖಾತೆ ಬಗ್ಗೆ ಆದಾಯ ತೆರಿಗೆ ಇಲಾಖೆ ನಿಯಮಗಳು ಏನು ಎಂದು ತಿಳಿಯುವುದು ಅತ್ಯಗತ್ಯವಾಗಿದೆ.
  • ಬಹುತೇಕ ಜನ ಸೇವಿಂಗ್ಸ್ ಅಕೌಂಟ್ ಗಳಿಗೆ ಎಷ್ಟು ಬೇಕಾದರೂ ಹಣ ಪಾವತಿ ಮಾಡಬಹುದು ಎಂದು ಭಾವಿಸುತ್ತಾರೆ. ಆದರಿದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.
Income Tax Notice: ಉಳಿತಾಯ ಖಾತೆಯಲ್ಲಿ ಲಿಮಿಟ್ ಗಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ ಬರುತ್ತೆ 'ಐಟಿ ನೋಟೀಸ್'...! title=

Income Tax Notice: ಬಹುತೇಕ ಜನರಿಗೆ ಸೇವಿಂಗ್ಸ್ ಅಕೌಂಟ್ ಗಳಿಗೆ ಎಷ್ಟು ಬೇಕಾದರೂ ಹಣ ಪಾವತಿ ಮಾಡಬಹುದು ಅಥವಾ ಸೇವಿಂಗ್ಸ್ ಅಕೌಂಟ್ ಮೂಲಕ ಎಷ್ಟು ಬೇಕಾದರೂ ಹಣದ ವ್ಯವಹಾರ ಮಾಡಬಹುದು, ಅದಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಾಗಿರುವುದಿಲ್ಲ ಎನ್ನುವ ಅಭಿಪ್ರಾಯ ಇದೆ. ಆದರೆ ಆದಾಯ ತೆರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ, ಉಳಿತಾಯ ಖಾತೆಗಳಲ್ಲಿ ಹಣ ಡಿಪಾಸಿಟ್ ಮಾಡುವುದಕ್ಕೆ ಮಿತಿ ಇರುತ್ತದೆ. ಅಷ್ಟೇ ಅಲ್ಲ ಆ ಲಿಮಿಟ್ ದಾಟಿದರೆ ತೆರಿಗೆ ಕಟ್ಟಬೇಕಾಗುತ್ತದೆ.

ನೀವು ನೌಕರರಾಗಿದ್ದರೆ ಸಂಬಳ ಪಡೆಯಲು ಉಳಿತಾಯ ಖಾತೆ ಬೇಕು. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಉಳಿತಾಯ ಖಾತೆ ಬೇಕು. ಡಿಜಿಟಲ್ ವ್ಯವಹಾರ ಮಾಡುವುದಕ್ಕೂ ಸೇವಿಂಗ್ಸ್ ಅಕೌಂಟ್ ಬೇಕೇ ಬೇಕು. ಒಟ್ಟಿನಲ್ಲಿ ಉಳಿತಾಯ ಖಾತೆ ಹೊಂದುವುದು ಪ್ರತಿಯೊಬ್ಬರಿಗೂ ಅಗತ್ಯ. ಜೊತೆಗೆ ಉಳಿತಾಯ ಖಾತೆ ಬಗ್ಗೆ ಆದಾಯ ತೆರಿಗೆ ಇಲಾಖೆ ನಿಯಮಗಳು ಏನು ಎಂದು ತಿಳಿಯುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ- ಮನೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಡುವ ಬಗ್ಗೆ ಹುಷಾರ್! IT Raid ಆಗಬಹುದು!!

ಮೊದಲನೆಯದಾಗಿ ಆದಾಯ ತೆರಿಗೆ ಇಲಾಖೆ ಹೊಸ ನಿಯಮಗಳ ಪ್ರಕಾರ, ಯಾವುದೇ ಆರ್ಥಿಕ ವರ್ಷದಲ್ಲಿ ಎಂದರೆ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಉಳಿತಾಯ ಖಾತೆಗಳಿಗೆ 10 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬಹುದು. ಅಷ್ಟೇಯಲ್ಲ, ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಉಳಿತಾಯ ಖಾತೆಗಳಲ್ಲಿ 10 ಲಕ್ಷ ರೂಪಾಯಿವರೆಗೆ ಹಣ ವರ್ಗಾವಣೆ ಮಾಡಬಹುದು. ಈ ಲಿಮಿಟೆಡ್ ದಾಟಿದರೆ ತೆರಿಗೆ ಕಟ್ಟಬೇಕಾಗುತ್ತದೆ. ಇಲ್ಲವಾದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟೀಸ್ ನೀಡಬಹುದು. 

ಇದನ್ನೂ ಓದಿ- ಎಟಿಎಂ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ನು ಈ ರೀತಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ!

ವಾಸ್ತವವಾಗಿ, ಆದಾಯ ತೆರಿಗೆ ಇಲಾಖೆ ನಿಯಮಗಳನುಸಾರ, ಉಳಿತಾಯ ಖಾತೆಗಳಲ್ಲಿ ಒಂದು ವರ್ಷಕ್ಕೆ 10 ಲಕ್ಷ ರೂಪಾಯಿಗಿಂತ ಹೆಚ್ಚು ಪಾವತಿಸಿದರೆ ಅಥವಾ 10 ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದರೆ ನಿಮ್ಮ ಬ್ಯಾಂಕ್ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತದೆ. ಆದಾಯ ಇಲಾಖೆ ಕೂಡಲೇ ನಿಮಗೆ ಆದಾಯದ ಮೂಲ ಕೇಳಿ ಮತ್ತು ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತದೆ. ಸರಿಯಾದ ಆದಾಯದ ಮೂಲ ತಿಳಿಸದಿದ್ದರೆ ತೊಂದರೆಗೆ ಸಿಲುಕಬೇಕಾಗುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News