ಎಟಿಎಂ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ನು ಈ ರೀತಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ!

ATM transaction New Rules: ಸದ್ಯ ಎಟಿಎಂಗಳಿಂದ ಹಣ ಹಿಂಪಡೆಯುವುದು ಒಂದು ರೀತಿ ರಿಸ್ಕ್ ಕೂಡ ಹೌದು. ಕೆಲವೊಮ್ಮೆ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಿದ ಸ್ವಲ್ಪಹೊತ್ತಿಗೆ ಅಥವಾ ದಿನದ ಕೊನೆಗೆ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬಳಿಕ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಲಪಟಾಯಿಸಲಾಗಿರುತ್ತದೆ. ಆರ್‌ಬಿ‌ಐ ಈಗ ಎಟಿಎಂಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಏರುತ್ತಿದೆ.

Written by - Yashaswini V | Last Updated : Dec 19, 2024, 03:30 PM IST
  • ಎಟಿಎಂಗಳಿಂದ ಹಣ ತೆಗೆಯುವಾಗ ಪ್ರೊಸಸ್ ತಡವಾದರೆ ಕೆಲವರು ಹಣ ಬರುತ್ತಿಲ್ಲ ಎಂದು ತಿಳಿದು ಹೊರಟುಹೋಗುತ್ತಾರೆ.
  • ಆಗ ಹಣ ಬೇರೆಯವರ ಅಥವಾ ವಂಚಕರ ಕೈಸೇರುವ ಸಾಧ್ಯತೆ ಇರುತ್ತದೆ.
  • ಎಟಿಎಂಗಳಲ್ಲಿ ಹಣ ವಿತ್ ಡ್ರಾ ಸಂದರ್ಭದಲ್ಲಿ ಆಗುವ ಇಂತಹ ಯಡವಟ್ಟುಗಳನ್ನು ತಪ್ಪಿಸಲು ಇದೀಗ ಆರ್‌ಬಿ‌ಐ ಹೊಸ ನಿಯಮವನ್ನು ರೂಪಿಸಿದೆ.
ಎಟಿಎಂ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ನು ಈ ರೀತಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ! title=

ATM New Rules: ಪ್ರಸ್ತುತ ಬ್ಯಾಂಕ್ ಗೆ ಹೋಗದೆ ಇದ್ರೂ ಹೇಗೋ ಮ್ಯಾನೇಜ್ ಮಾಡಬಹುದು, ಆದರೆ, ಎಟಿಎಂ ಇಲ್ಲದೆ ಇದ್ರೆ ವ್ಯಾಪಾರ-ವ್ಯವಹಾರ ಮಾಡೋದು ಬಹಳ ಕಷ್ಟ. ಹಾಗಾಗಿ ಎಟಿಎಂ ವಿಷಯದಲ್ಲಿ ಆಗುವ ಪ್ರತಿ ಬೆಳವಣಿಗೆ-ಬದಲಾವಣೆಯನ್ನು ತಿಳಿದುಕೊಳ್ಳಲೇಬೇಕು. ಎಟಿಎಂ ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆ ಆಗುತ್ತಿದ್ದು ಇನ್ನು ಮುಂದೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕೆಲ ನಿರ್ಬಂಧಗಳನ್ನು ಏರುತ್ತಿದೆ.

ಸದ್ಯ ಎಟಿಎಂಗಳಿಂದ ಹಣ ಹಿಂಪಡೆಯುವುದು ಒಂದು ರೀತಿ ರಿಸ್ಕ್ ಕೂಡ ಹೌದು. ಕೆಲವೊಮ್ಮೆ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಿದ ಸ್ವಲ್ಪಹೊತ್ತಿಗೆ ಅಥವಾ ದಿನದ ಕೊನೆಗೆ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬಳಿಕ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಲಪಟಾಯಿಸಲಾಗಿರುತ್ತದೆ. ಈ ರೀತಿಯ ಅಕ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.

ಇದನ್ನೂ ಓದಿ- ತೆರಿಗೆ ಪಾವತಿಯಲ್ಲಿ 16.6% ಸೇವ್ ಮಾಡಬಹುದು..! ಹೇಗ್ ಗೊತ್ತಾ..!

ಇನ್ನೊಂದು ಸಮಸ್ಯೆ ಏನೆಂದರೆ ಎಟಿಎಂಗಳಿಂದ ಹಣ ತೆಗೆಯುವಾಗ ಕೆಲವರು ಪ್ರೊಸಸ್ ತಡ ಆಗುವುದನ್ನು ಹಣ ಬರುತ್ತಿಲ್ಲ ಎಂದು ತಿಳಿದು ಹೊರಟುಹೋಗುತ್ತಾರೆ. ಹಣ ತಡವಾಗಿ ಹೊರಬಂದು ಬೇರೆಯವರ ಅಥವಾ ವಂಚಕರ ಕೈಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಟಿಎಂನಿಂದ ಗ್ರಾಹಕರು 30 ಸೆಕೆಂಡುಗಳಲ್ಲಿ ಹಣವನ್ನು ತೆಗೆದುಕೊಳ್ಳದಿದ್ದರೆ ನಂತರ ಅದು ಸ್ವಯಂಚಾಲಿತವಾಗಿ ಮತ್ತೆ ಎಟಿಎಂ ಮಷಿನ್ ಒಳಗೆ ಹೋಗುವಂತಹ ನಿಯಮವನ್ನು ಮಾಡಲಾಗಿದೆ.

ಇದನ್ನೂ ಓದಿ- ಲಕ್ಷಾಂತರ ತೆರಿಗೆದಾರರಿಗೆ ಗುಡ್ ನ್ಯೂಸ್: ಶೀಘ್ರವೇ ಹೊಸ ತೆರಿಗೆ ಪದ್ಧತಿ ಘೋಷಣೆ: ತೆರಿಗೆ ವಿನಾಯಿತಿ ಸಾಧ್ಯತೆ!

30 ಸೆಕೆಂಡುಗಳಲ್ಲಿ ನೀವು ತೆಗೆದುಕೊಳ್ಳದೇ ಇದ್ದ ಹಣ ಮರಳಿ ಎಟಿಎಂ ಮಷಿನ್ ಗೆ ಹೋಗುವುದಷ್ಟೇಯಲ್ಲ, ತ್ವರಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಕೂಡ ಆಗುತ್ತದೆ. ಈ ಹೊಸ ನಿಯಮದಿಂದಾಗಿ ಗ್ರಾಹಕರು ಮರೆತದ್ದರಿಂದ ಬೇರೆಯವರ ಪಾಲಾಗುತ್ತಿದ್ದ ಹಣ ಈಗ ಸುರಕ್ಷಿತವಾಗಿ ಗ್ರಾಹಕರ ಖಾತೆಗೆ ಹೋಗುವಂತಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News