24 ವರ್ಷಗಳ ದಾಂಪತ್ಯ ಅಂತ್ಯ.. ಪತ್ನಿಗೆ ದಿಢೀರ್‌ ವಿಚ್ಛೇದನ ಘೋಷಿಸಿದ ಖ್ಯಾತ ಸಿರೀಯಲ್ ನಟ!

Serial Actor Divorce: ಜನಪ್ರಿಯ ಧಾರಾವಾಹಿ 'ದಿಲ್ ಮಿಲ್ ಗಯೆ' ಮೂಲಕ ಮನೆಮಾತಾಗಿದ್ದ ನಟ ಪಂಕಿತ್ ಠಕ್ಕರ್ 24 ವರ್ಷಗಳ ದಾಂಪತ್ಯದ ನಂತರ ತಮ್ಮ ಪತ್ನಿ ಪ್ರಾಚಿಗೆ ವಿಚ್ಛೇದನ ನೀಡಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಂತರ, ಅವರು ಕಾನೂನುಬದ್ಧವಾಗಿ ಪರಸ್ಪರ ವಿಚ್ಛೇದನ ಪಡೆದಿದ್ದಾರೆ.  

Written by - Savita M B | Last Updated : Dec 19, 2024, 12:02 PM IST
  • ನಟ ಪಂಕಿತ್ ಠಕ್ಕರ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ.
  • 24 ವರ್ಷಗಳ ದಾಂಪತ್ಯದ ನಂತರ, ಪಂಕಿತ್ ಮತ್ತು ಪ್ರಾಚಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದ್ದಾರೆ
24 ವರ್ಷಗಳ ದಾಂಪತ್ಯ ಅಂತ್ಯ.. ಪತ್ನಿಗೆ ದಿಢೀರ್‌ ವಿಚ್ಛೇದನ ಘೋಷಿಸಿದ ಖ್ಯಾತ ಸಿರೀಯಲ್ ನಟ! title=

pankit thakker divorced his wife prachi: 'ದಿಲ್ ಮಿಲ್ ಗಯೆ', 'ಬಹು ಹಮಾರಿ ರಜನಿಕಾಂತ್', 'ಬರ್ಸತೀನ್', 'ಕುಂಕುಮ್' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಿದ್ದ ನಟ ಪಂಕಿತ್ ಠಕ್ಕರ್ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. 24 ವರ್ಷಗಳ ದಾಂಪತ್ಯದ ನಂತರ, ಪಂಕಿತ್ ಮತ್ತು ಪ್ರಾಚಿ ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದ್ದಾರೆ. 2015 ರಿಂದ ಅವರ ದಾಂಪತ್ಯದಲ್ಲಿ ಬಿರುಕು ಮೂಡಿವೆ ಎನ್ನುವ ಮಾತುಕತೆಗಳು ನಡೆದಿದ್ದವು.. ಅಂದಿನಿಂದ ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬಳಿಕ 2016 ರಲ್ಲಿ, ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ಘೋಷಿಸಿದರು. ಆ ನಂತರ ಡಿಸೆಂಬರ್ ತಿಂಗಳಿನಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದುಬಂದಿದೆ..  

ಪಂಕಿತ್ ಮತ್ತು ಪ್ರಾಚಿ 11 ಸೆಪ್ಟೆಂಬರ್ 2000 ರಂದು ವಿವಾಹವಾದರು.. ಆಗ ಪಂಕಿತ್ ಗೆ ಕೇವಲ 21 ವರ್ಷ. ಪಂಕಿತ್ ಮತ್ತು ಪ್ರಾಚಿ ಅವರ ಕುಟುಂಬದವರು ವಯಸ್ಸಿನ ಅಂತರದಿಂದಾಗಿ ಮದುವೆಯನ್ನು ವಿರೋಧಿಸಿದರು. ಪ್ರಾಚಿ ಪಂಕಿತ್‌ಗಿಂತ ಎಂಟು ವರ್ಷ ದೊಡ್ಡವಳು ಎಂದು ತಿಳಿದುಬಂದಿದೆ. ಪಂಕಿತ್ ತನ್ನ ಕುಟುಂಬದ ವಿರುದ್ಧ ಪ್ರಾಚಿಯನ್ನು ವಿವಾಹವಾದರು. ಕಳೆದ ಕೆಲವು ವರ್ಷಗಳಲ್ಲಿ ಅವರ ಜೀವನದಲ್ಲಿ ಅನೇಕ ಏರಿಳಿತಗಳು ಕಂಡುಬಂದಿದ್ದವು.. ಹೀಗಾಗಿ ಇಬ್ಬರೂ ಕೌನ್ಸೆಲಿಂಗ್ ಮೂಲಕ ತಮ್ಮ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸಿದರು. ಆದರೆ, ಯಾವುದೇ ಫಲ ಸಿಗದ ಕಾರಣ, ಕೊನೆಗೆ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ.‌

ಇದನ್ನೂ ಓದಿ-ʼವೀರ್ಯದಿಂದ ಫೇಶಿಯಲ್‌ ಮಾಡಿಸಿಕೊಳ್ಳುತ್ತೇನೆʼ ಖ್ಯಾತ ನಟಿಯ ಸೆನ್ಸೇಷನಲ್‌ ಕಾಮೆಂಟ್!!‌   

2021 ರಲ್ಲಿ ಸಂದರ್ಶನವೊಂದರಲ್ಲಿ, ಪಂಕಿತ್ ತನ್ನ ಹೋರಾಟದ ಬಗ್ಗೆ ಮುಕ್ತವಾಗಿ ಹೇಳಿದ್ದರು. "ನಾವು ಹೆಸರಾಂತ ಸಲಹೆಗಾರರ ​​ಬಳಿಗೆ ಹೋದೆವು, ಆದರೆ ಅದು ಸಹ ಸಹಾಯ ಮಾಡಲಿಲ್ಲ. ಈ ಸಂಬಂಧವನ್ನು ಉಳಿಸಲು ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ. ಆದರೆ ಅಂತಿಮವಾಗಿ ನಾವು ಆ ಶಾಂತಿ ಮತ್ತು ಸಂತೋಷವನ್ನು ಕಂಡುಕೊಂಡದ್ದು ಬೇರೆಯಾಗಿ ಬದುಕುವುದರ ಮೂಲಕ ಮಾತ್ರ. ನಾವು 2015 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಇದರಿಂದಾಗಿ ಈಗ ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ.. ನಾವಿಬ್ಬರೂ ಇನ್ನೂ ಪರಸ್ಪರ ಗೌರವವನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ. 

ಪಂಕಿತ್ ಮತ್ತು ಪ್ರಾಚಿಗೆ ಒಬ್ಬ ಮಗನಿದ್ದಾನೆ ಮತ್ತು ವಿಚ್ಛೇದನದ ನಂತರ ಪ್ರಾಚಿ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.. ಮಗುವಿನ ಪೋಷಣೆಗೆ ಅಗತ್ಯ ಸಹಾಯವನ್ನೂ ಪಂಕಿತ್ ನೀಡಲಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ಜೋಡಿಯ ವೈವಾಹಿಕ ಸಂಬಂಧ ವಿಚ್ಛೇದನದ ಮೂಲಕ ಅಂತ್ಯಗೊಂಡಿದೆ. ಪಂಕಿತ್ ಅನೇಕ ಪ್ರಸಿದ್ಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ 'ಕಭಿ ಸೌತಾನ್ ಕಬಿ ಸಹೇಲಿ', 'ಬರ್ಸತೀನ್ - ಮೌಸಮ್ ಪ್ಯಾರ್ ಕಾ', 'ದಿಲ್ ಮಿಲ್ ಗಯೆ' ಸೇರಿವೆ. ಪ್ರಾಚಿ 'ಕಸೌತಿ ಜಿಂದಗಿ ಕಿ', 'ಹವನ್' ಧಾರಾವಾಹಿಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ-ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌.. ಈ ತಿಂಗಳಲ್ಲಿ ಎಲ್ಲಾ ಶಾಲಾ - ಕಾಲೇಜುಗಳಿಗೆ 5 ದಿನ ರಜೆ ಘೋಷಿಸಿದ ರಾಜ್ಯ ಸರ್ಕಾರ! ಕಾರಣವೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News