ʼಇವರೇ ನನ್ನ ಲೈಫ್‌ ಪಾರ್ಟ್ನರ್ʼ ಕೊನೆಗೂ ಭವಿಷ್ಯದ ಸಂಗಾತಿ ಬಗ್ಗೆ ತುಟಿಬಿಚ್ಚಿದ ರಶ್ಮಿಕಾ ಮಂದಣ್ಣ! ಆ ಲಕ್ಕಿಬಾಯ್‌ ಬೇರಾರೂ ಅಲ್ಲ..

Rashmika Mandanna Life Partner: ರಶ್ಮಿಕಾ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಜೀವನದಲ್ಲಿ ಯಾವ ರೀತಿಯ ಸಂಗಾತಿಯನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ.
 

1 /6

'ಪುಷ್ಪ 2' ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡುತ್ತಿದೆ. 'ಪುಷ್ಪ' ಮತ್ತು 'ಪುಷ್ಪ 2' ಚಿತ್ರಗಳ ಅಗಾಧ ಯಶಸ್ಸು ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಭಾರತದಾದ್ಯಂತ ತಾರೆಯರನ್ನಾಗಿ ಮಾಡಿತು.   

2 /6

ತನ್ನ ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿನಲ್ಲಿ ಬೀಸುತ್ತಿರುವ ರಶ್ಮಿಕಾ, ಕಾಸ್ಮೋಪಾಲಿಟನ್ ಇಂಡಿಯಾಕ್ಕೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ತನ್ನ ಜೀವನದಲ್ಲಿ ತನಗೆ ಯಾವ ರೀತಿಯ ಸಂಗಾತಿ ಬೇಕು ಎಂಬುದರ ಕುರಿತು ಮಾತನಾಡಿದ್ದಾಳೆ.  

3 /6

ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಹೆಸರು ಬಹಳ ಹಿಂದಿನಿಂದಲೂ ಇದೆ. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಈಗ ನಟಿ ಸಂದರ್ಶನವೊಂದರಲ್ಲಿ ತನ್ನ ಜೀವನದಲ್ಲಿ ಸಂಗಾತಿಯನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. 'ಜೀವನದ ಪ್ರತಿ ತಿರುವಿನಲ್ಲಿಯೂ ನನಗೆ ನನ್ನ ಸಂಗಾತಿ ಇರಬೇಕು. ಒಂದೊಳ್ಳೆ ಭಾಂದವ್ಯ.. ಹೊಂದಾಣಿಕೆ ಇರು ಸಂಬಂಧಬೇಕು’ ಎಂದಿದ್ದಾರೆ..  

4 /6

ರಶ್ಮಿಕಾ ಪ್ರಕಾರ, ಅವರು ತಮ್ಮ ಸಂಬಂಧದಲ್ಲಿ ಕಾಳಜಿ-ಗೌರವವನ್ನು ಬಯಸುತ್ತಾರೆ 'ನಾವಿಬ್ಬರೂ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಗೌರವಿಸಿದಾಗ... ಒಬ್ಬರಿಗೊಬ್ಬರು ಕಾಳಜಿ ತೋರಿಸಿದಾಗ ಯಾವುದೇ ವೈಮಸ್ಯೆಗಳು ಉಂಟಾಗುವುದಿಲ್ಲ.. ಹೀಗಾಗಿ ನಾನು ಒಳ್ಳೆಯ ಹೃದಯವಂತ ಮತ್ತು ನಿಜವಾಗಿಯೂ ನನ್ನ ಬಗ್ಗೆ ಆಳವಾಗಿ ಕಾಳಜಿ ವಹಿಸುವ ವ್ಯಕ್ತಿಯನ್ನು ಹುಡುಕುತ್ತಿದ್ದೇನೆ" ಎಂದು ಹೇಳಿದ್ದಾರೆ..   

5 /6

ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್‌ ಮಾಡುವ ಮೊದಲು ರಶ್ಮಿಕಾ ಜೀವನದಲ್ಲಿ ಪ್ರೀತಿ ಪ್ರವೇಶಿಸಿತ್ತು... ತನ್ನ ಚೊಚ್ಚಲ ಚಿತ್ರ 'ಕಿರಿಕ್ ಪಾರ್ಟಿ' ಸೆಟ್‌ನಲ್ಲಿ ನಟಿ ತನ್ನ ಸಹನಟ ರಕ್ಷಿತ್ ಶೆಟ್ಟಿಯನ್ನು ಭೇಟಿಯಾಗಿದ್ದರು.. ಅವರನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು..   

6 /6

ರಕ್ಷಿತ್ ಶೆಟ್ಟಿಯೊಂದಿಗಿನ ಎಂಗೇಜ್‌ಮೆಂಟ್‌ ಸಂದರ್ಭದಲ್ಲಿ ರಶ್ಮಿಕಾ ಕೇವಲ 21 ವರ್ಷ ವಯಸ್ಸಿನವರಾಗಿದ್ದರು.. ರಕ್ಷಿತ್ ಶೆಟ್ಟಿ ಅವರಿಗಿಂತ 13 ವರ್ಷ ದೊಡ್ಡವರಾಗಿದ್ದರು. ಅವರ ನಿಶ್ಚಿತಾರ್ಥದ ಸುದ್ದಿಯಿಂದ ಎಲ್ಲರೂ ಶಾಕ್ ಆಗಿದ್ದರು. ಆದರೆ ಅವರ ಸಂಬಂಧದ ಕೇವಲ 12 ತಿಂಗಳ ನಂತರ ಮುರಿದು ಬಿತ್ತು..