"ಇದೆಲ್ಲಾ ಆಡಿಷನ್‌ನ ಒಂದು ಭಾಗ; ಸಹಕರಿಸಿದ್ರೆ ದುಡ್ಡು, ಆಫರ್‌..."- ಕಾಸ್ಟಿಂಗ್‌ ಕೌಚ್‌ ಬಗ್ಗೆ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ ವೈರಲ್

actress statement on casting couch: ನಿರ್ದೇಶಕ ರಂಜಿತ್​ ವಿರುದ್ಧ ಇದೇ ರೀತಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಆರೋಪ ಮಾಡಿದ್ದರು. ಕೊಚ್ಚಿಯ ಖಾಸಗಿ ಹೋಟೆಲ್​ನಲ್ಲಿ ರಂಜಿತ್​ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ FIR ಕೂಡ ದಾಖಲಾಗಿದೆ.

Written by - Bhavishya Shetty | Last Updated : Dec 15, 2024, 03:38 PM IST
    • ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಕಾವು ದಿನೇದಿನೇ ತೀವ್ರಗೊಳ್ಳುತ್ತಿದೆ
    • ಈ ಬಗ್ಗೆ ನಟಿಯರು ತಮ್ಮ ಹೇಳಿಕೆಗಳನ್ನು ಮುಕ್ತವಾಗಿ ನೀಡುತ್ತಿದ್ದಾರೆ
    • ನಟಿ ತಮಗಾದ ಕಾಸ್ಟಿಂಗ್‌ ಕೌಚ್‌ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ
"ಇದೆಲ್ಲಾ ಆಡಿಷನ್‌ನ ಒಂದು ಭಾಗ; ಸಹಕರಿಸಿದ್ರೆ ದುಡ್ಡು, ಆಫರ್‌..."- ಕಾಸ್ಟಿಂಗ್‌ ಕೌಚ್‌ ಬಗ್ಗೆ ಸ್ಟಾರ್‌ ನಟಿಯ ಶಾಕಿಂಗ್‌ ಹೇಳಿಕೆ ವೈರಲ್ title=
actress statement on casting couch

Actress statement on Casting Couch: ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳ ಕಾವು ದಿನೇದಿನೇ ತೀವ್ರಗೊಳ್ಳುತ್ತಿದೆ. #MeToo ಅಭಿಯಾನ ಪ್ರಾರಂಭವಾದಾಗಿನಿಂದ ಈ ಬಗ್ಗೆ ನಟಿಯರು ತಮ್ಮ ಹೇಳಿಕೆಗಳನ್ನು ಮುಕ್ತವಾಗಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಮದುವೆಯಾಗೋದಕ್ಕೆ ಸರಿಯಾದ ವಯಸ್ಸು ಯಾವುದು ಗೊತ್ತಾ? ಗಂಡ-ಹೆಂಡತಿಯ ನಡುವೆ ಇರಬೇಕಾದ ವಯಸ್ಸಿನ ಅಂತರವೆಷ್ಟು? ಸಂಶೋಧನೆ ಹೇಳಿದ್ದೇನು?

ಇತ್ತೀಚೆಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಅನೇಕ ನಟಿಯರು ತಾವು ಅನುಭವಿಸಿದ ನೋವುಗಳ ಬಗ್ಗೆ ಮುಕ್ತ ಹೇಳಿಕೆ ನೀಡಿದ್ದರು. ಅದರಲ್ಲೊಬ್ಬ ನಟಿ (ಹೆಸರು ಹೇಳಬಯಸದ) ತಮಗಾದ ಕಾಸ್ಟಿಂಗ್‌ ಕೌಚ್‌ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.

ಖ್ಯಾತ ನಿರ್ದೇಶಕನ ಕರಾಳ ಮುಖವನ್ನು ಬಟಾಬಯಲು ಮಾಡಿರುವ ನಟಿ, ಆತ ನೀಡಿದ ಕಿರುಕುಳದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.  

"ಮಲಯಾಳಂನ ಖ್ಯಾತ ನಿರ್ದೇಶಕ ರಂಜಿತ್,​ 2012ರಲ್ಲಿ ಆಡಿಷನ್‌ಗೆಂದು ನನ್ನನ್ನು ಬೆಂಗಳೂರಿಗೆ ಕರೆದೊಯ್ದಿದ್ದ. ಅಲ್ಲಿ ಹೋಟೆಲ್​ ಒಂದರಲ್ಲಿ ಉಳಿದುಕೊಳ್ಳಲು ರಂಜಿತ್‌ ವ್ಯವಸ್ಥೆ ಮಾಡಿದ್ದು, ಆದರೆ ಅಲ್ಲಿ ನನ್ನ ರೂಮಿಗೆ ಬಂದು,​ ನನ್ನ ಮೇಲೆ ಹಲ್ಲೆ ಮಾಡಿ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಷ್ಟೇ ಅಲ್ಲ, ಇದು ಆಡಿಷನ್‌​ನ ಒಂದು ಭಾಗ, ಹೀಗೆ ಸಹಕರಿಸಿದ್ರೆ ಮಾತ್ರ ಒಳ್ಳೆಯ ಆಫರ್​ ಹಾಗೂ ಹಣ ಕೊಡುವುದಾಗಿ ಆಮಿಷ್​ ಒಡ್ಡಿದ್ದ. ಮಾರನೆಯ ದಿನ ನನಗೆ ಹಣ ಕೊಟ್ಟು ಯಾರ ಬಳಿಯೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದ" ಎಂದು ಹೆಸರೇಳಲು ಇಚ್ಛಿಸಿದ ನಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿರ್ದೇಶಕ ರಂಜಿತ್​ ವಿರುದ್ಧ ಇದೇ ರೀತಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಆರೋಪ ಮಾಡಿದ್ದರು. ಕೊಚ್ಚಿಯ ಖಾಸಗಿ ಹೋಟೆಲ್​ನಲ್ಲಿ ರಂಜಿತ್​ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಸಂಬಂಧ FIR ಕೂಡ ದಾಖಲಾಗಿದೆ.

ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಖರೀದಿಗೆ ಇದೇ ಉತ್ತಮ ಸಮಯ!!

ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ, ಮಲಯಾಳಂ ಚಿತ್ರರಂಗ ಅಲ್ಲೋಲ ಕಲ್ಲೋಲವಾಗಿದೆ. ಅಷ್ಟೇ ಅಲ್ಲದೆ, ಅನೇಕ ನಟರ ಕರಾಳ ಮುಖಗಳು ಸಹ ಬಯಲಾಗಿದ್ದು, ನಟಿಯರು ತಮಗಾದ ಕಹಿ ಅನುಭವಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಸಿಕ್ಕಂತಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News