Tomato For Gray Hair: ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ 'ಟೊಮಾಟೊ' ಬಳಸಿ ಬಿಳಿ ಕೂದಲು ಸೇರಿದಂತೆ ಕೂದಲಿನ ಸರ್ವ ಸಮಸ್ಯೆಗೂ ಪರಿಹಾರ ಪಡೆಯಬಹುದು.
Tomato Benefits For Hair: ಟೊಮಾಟೊ ಬಳಕೆಯಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದಷ್ಟೇ ಅಲ್ಲ, ಬುಡದಿಂದಲೂ ಗಟ್ಟಿಮುಟ್ಟಾದ ಸ್ಟ್ರಾಂಗ್ ಉದ್ದ ಕೂದಲನ್ನು ನಿಮ್ಮದಾಗಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಬಿಳಿ ಕೂದಲು, ಕೂದಲು ಉದುರುವಿಕೆ, ಸ್ಪ್ಲಿಟ್ ಹೇರ್, ತಲೆಹೊಟ್ಟು, ನೆತ್ತಿಯ ಆರೋಗ್ಯ ಹೀಗೆ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಸಹ ಟೊಮಾಟೊ ಒಂದೇ ಪರಿಹಾರ ನೀಡಬಲ್ಲದು.
ಟೊಮಾಟೊದಲ್ಲಿ ವಿಟಮಿನ್ ಎ, ಬಿ, ಸಿ, ಇ ಸಮೃದ್ಧವಾಗಿದೆ. ಇದು ಕೂದಲು ಉದುರುವಿಕೆಯನ್ನು ನಿಯಂತ್ರಿಸಿ, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಟೊಮಾಟೊ ಬಳಕೆಯಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗಿ, ಕೂದಲು ಮೃದುವಾಗಿ ಬಲಶಾಲಿಯಾಗಿ ಬೆಳೆಯುತ್ತದೆ.
ಟೊಮಾಟೊದಲ್ಲಿರುವ ಪೋಷಕಾಂಶಗಳು ಕೂದಲು ಬುಡದಿಂದಲೂ ನೈಸರ್ಗಿಕ ಬಣ್ಣವನ್ನು ಪಡೆಯಲು ಸಹಕಾರಿ ಆಗಿದೆ.
ಮೊದಲೇ ತಿಳಿಸಿದಂತೆ ಕೂದಲಿನ ಸರ್ವ ಸಮಸ್ಯೆಗೂ ಟೊಮಾಟೊ ಪರಿಹಾರವಾಗಿದೆ. ಇದಕ್ಕಾಗಿ, ಟೊಮಾಟೊದಲ್ಲಿ ಕೆಲ ಪದಾರ್ಥಗಳನ್ನು ಬೆರೆಸಿ ಬಳಸಬೇಕು.
ಅಲೋವೆರಾ ಕೂದಲಿಗೆ ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ ಮತ್ತು ಕೂದಲು ಒಡೆಯುವಿಕೆಯನ್ನು ತಡೆಯುತ್ತದೆ.
ಇದ್ದಿಲು ಪುಡಿ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ. ಜೊತೆಗೆ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಬೆಳ್ಳಗಾಗಿರುವ ಕೂದಲು ಮರಳಿ ನೈಸರ್ಗಿಕವಾಗಿ ಕಪ್ಪಾಗಲು ಪ್ರಯೋಜನಕಾರಿ ಆಗಿದೆ.
ಮೊದಲಿಗೆ ಟೊಮಾಟೊವನ್ನು ಸಣ್ಣದಾಗಿ ತುರಿದು ಜಾಲರಿ ಸಹಾಯದಿಂದ ರಸವನ್ನು ಬೇರ್ಪಡಿಸಿ. ಟೊಮಾಟೊ ರಸರಲ್ಲಿ ಅರ್ಧ ಸ್ಪೂನ್ ಅಲೋವೆರಾ ಮತ್ತು ಹರಳೆಣ್ಣೆ, ಒಂದು ಸ್ಪೂನ್ ಇದ್ದಿಲ ಪುಡಿ, ಒಂದು ಸಣ್ಣ ಶಾಂಪೂ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಈ ರೀತಿ ಟೊಮಾಟೊ ಪ್ಯಾಕ್ ತಯಾರಿಸಿ ನಿಯಮಿತವಾಗಿ ಬಳಸುತ್ತಾ ಬಂದರೆ ಕೂದಲಿನ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ. ಜೊತೆಗೆ ದಷ್ಟಪುಷ್ಟವಾದ ಕಾಂತಿಯುತ ಕಪ್ಪು ನೀಳ ಕೇಶರಾಶಿಯನ್ನು ನಿಮ್ಮದಾಗಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.