SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ಯಾ! ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬಂದ್ರೆ, ಎಚ್ಚರ!

SCAM ALERT: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವೆಂಬರ್ 1ನೇ ತಾರೀಖಿನಿಂದ UPI ಪಾವತಿಯೂ ಸೇರಿದಂತೆ ಬ್ಯಾಂಕ್ ವ್ಯವಹಾರದ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ಇದಲ್ಲದೆ ಡಿಸಂಬರ್ 1ನೇ ತಾರೀಖಿನಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಿದೆ.

Written by - Yashaswini V | Last Updated : Dec 2, 2024, 02:07 PM IST
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನವೆಂಬರ್ 1ನೇ ತಾರೀಖಿನಿಂದ UPI ಪಾವತಿ ಸೇರಿದಂತೆ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ.
  • ಅಲ್ಲದೆ ಡಿಸಂಬರ್ 1ನೇ ತಾರೀಖಿನಿಂದ ಕ್ರೆಡಿಟ್ ಕಾರ್ಡ್ ಬಳಕೆಯಲ್ಲೂ ಕೆಲವು ಮಾರ್ಪಾಡು ತಂದಿದೆ.
  • ಈ ಬಗ್ಗೆ ಗ್ರಾಹಕರಿಗೆ ಕಳುಹಿಸುವ ವಾಟ್ಸಾಪ್ ಮತ್ತು ಮೆಸೇಜ್ ಗಳ ಬಗ್ಗೆ ಎಚ್ಚರದಿಂದ ಇರಬೇಕು.
SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ಯಾ! ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬಂದ್ರೆ, ಎಚ್ಚರ!  title=

SCAM ALERT: ಬ್ಯಾಂಕಿಂಗ್ ನಿಯಮಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ. ವ್ಯವಹಾರದ ಕ್ರಮಗಳು ಬದಲಾಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ಬ್ಯಾಂಕುಗಳು ತನ್ನ ಗ್ರಾಹಕರ ಮೊಬೈಲುಗಳಿಗೆ ಮೆಸೇಜು ಕಳುಹಿಸುತ್ತಿರುತ್ತವೆ. ಬ್ಯಾಂಕುಗಳು ಮೊಬೈಲ್ ಗೆ ಮೆಸೇಜು ಕಳುಹಿಸುವ ರೀತಿಯನ್ನೇ ಕೆಲವರು ದುರುಪಯೋಗ ಮಾಡಿಕೊಂಡು, ಹುಸಿ ಮೆಸೇಜುಗಳನ್ನು ಕಳಿಸಿ ಗ್ರಾಹಕರನ್ನು ದಾರಿ ತಪ್ಪಿಸಿ ಅವರ ಹಣವನ್ನು ದೋಚುತ್ತಾರೆ. ಇಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನವೆಂಬರ್ 1ನೇ ತಾರೀಖಿನಿಂದ UPI ಪಾವತಿಯೂ ಸೇರಿದಂತೆ ಬ್ಯಾಂಕ್ ವ್ಯವಹಾರದ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ಇದಲ್ಲದೆ ಡಿಸಂಬರ್ 1ನೇ ತಾರೀಖಿನಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿಯೂ ಕೆಲವು ಮಾರ್ಪಾಡುಗಳನ್ನು ಮಾಡಿದೆ. ಈ ಮೂಲಕ ಈಗ ತನ್ನ ಗ್ರಾಹಕರಿಗೆ ವಾಟ್ಸಾಪ್ ಹಾಗು ಮೆಸೇಜು ಮೂಲಕ ಅರಿವು ಮೂಡಿಸುತ್ತಿದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ರೀತಿ ಮಾಡಲು ಪ್ರಮುಖ ಕಾರಣ ಇತ್ತೀಚಿಗೆ ಆನ್ಲೈನ್ ಕ್ರೈಮ್ ಜಾಸ್ತಿಯಾಗಿರುವುದುಕ್ಕೆ. ಹ್ಯಾಕರ್ ಗಳು ಬ್ಯಾಂಕುಗಳ ರೀತಿಯಲ್ಲೇ ಗ್ರಾಹಕರಿಗೆ ಮೆಸೇಜ್ ಕಳಿಸಿ ಹಣ ಲಪಟಾಯಿಸುವುದು ಹೆಚ್ಚಾಗಿರುವ ಕಾರಣಕ್ಕೆ. ಹಣ ಕದಿಯಲು ಪ್ರಯತ್ನಿಸುವವರು ಪ್ರತಿದಿನವೂ ಯಾವ ರೀತಿಯಲ್ಲಿ ಹ್ಯಾಕ್ ಮಾಡಬಹದು? ಗ್ರಾಹಕರನ್ನು ಯಾವ ರೀತಿ ದಾರಿ ತಪ್ಪಿಸಬಹುದು ಎಂದು ಹೊಂಚು ಹಾಕುತ್ತಲೇ ಇರುತ್ತಾರೆ. ಬ್ಯಾಂಕುಗಳು ಕಳುಹಿಸುವ ರೀತಿಯಲ್ಲೇ ಮೆಸೇಜುಗಳನ್ನು ಕಳಿಸಿ ವಂಚಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಮೋಸ ಹೋಗದಂತೆ ಎಚ್ಚರಿಸುತ್ತಿದೆ. 

ಇದನ್ನೂ ಓದಿ- Govt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್‌ಲೈನ್‌ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್‌ ಇಲ್ಲಿದೆ

ದೇಶದ ಮುಂಚೂಣಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಹಣದ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುತ್ತಾ ಬಂದಿದ್ದು ತನ್ನ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಆನ್ಲೈನ್ ವಂಚನೆ ಬಗ್ಗೆ ಎಚ್ಚರದಿಂದ ಇರುವಂತೆ ಹೇಳಿದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನವೆಂಬರ್ 1ನೇ ತಾರೀಖಿನಿಂದ UPI ಪಾವತಿ ಸೇರಿದಂತೆ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ಅಲ್ಲದೆ ಡಿಸಂಬರ್ 1ನೇ ತಾರೀಖಿನಿಂದ ಕ್ರೆಡಿಟ್ ಕಾರ್ಡ್ ಬಳಕೆಯಲ್ಲೂ ಕೆಲವು ಮಾರ್ಪಾಡು ತಂದಿದೆ. ಈ ಬಗ್ಗೆ ಗ್ರಾಹಕರಿಗೆ ಕಳುಹಿಸುವ ವಾಟ್ಸಾಪ್ ಮತ್ತು ಮೆಸೇಜ್ ಗಳ ಬಗ್ಗೆ ಎಚ್ಚರದಿಂದ ಇರಬೇಕು. ಹ್ಯಾಕರ್ ಗಳು ಇದೇ ರೀತಿಯ ಮೆಸೇಜುಗಳನ್ನು ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುವ ಮತ್ತು ನಿಮ್ಮ ಖಾತೆಯಿಂದ ಹಣ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಾಟ್ಸಾಪ್ ಮತ್ತು ಮೆಸೇಜ್ ಮೂಲಕ ನಿಮಗೆ ಕೆಲವು ರಿವಾರ್ಡ್ ಗಳು ಬಂದಿದೆ ಎನ್ನುವ ಕಳುಹಿಸುತ್ತದೆ. ಇದೇ ಮಾದರಿಯಲ್ಲಿ ಹ್ಯಾಕರ್ ಗಳು ಕೂಡ ಮಾಡುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಅಂತಹ ವಾಟ್ಸಾಪ್ ಸಂದೇಶಗಳನ್ನು ಮತ್ತು ಮೆಸೇಜ್ ಗಾಲ ಲಿಂಕ್ ಮೇಲೆ ಕ್ಲಿಕ್ ಮಾಡಬಾರದು ಎಂದು ಅಧಿಕೃತವಾಗಿ ತಿಳಿಸಿದೆ. 

ಇದನ್ನೂ ಓದಿ- EPFO ಡೆಡ್‌ ಲೈನ್... ELI ಸ್ಕೀಮ್‌ಗಾಗಿ ಆಧಾರ್ ಲಿಂಕ್ ಜೊತೆ UAN ಸಕ್ರಿಯಗೊಳಿಸಲು ಇಂದೇ ಕೊನೆ ದಿನ! ಪ್ರಕ್ರಿಯೆ ಪೂರ್ಣಗೊಳಿಸಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ

ಹ್ಯಾಕರ್ ಗಳು ಬ್ಯಾಂಕ್ ಮಾದರಿಯಲ್ಲೇ ನಕಲಿ ಲಿಂಕ್ ಗಳನ್ನು ಕಳುಹಿಸುತ್ತಾರೆ.  ಒಂದೊಮ್ಮೆ ನಿಮ್ಮ ಖಾತೆಗಳಲ್ಲಿ ಹಣ ಇಲ್ಲದೆ ಇದ್ದರೂ ಅಂತಹ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. ಜೊತೆಗೆ ಯಾವ ಕಾರಣಕ್ಕೂ ಯಾರಿಗೂ ನಿಮ್ಮ ಬ್ಯಾಂಕ್ ವಿವರ, ಪಾನ್ ಕಾರ್ಡ್ ಮತ್ತಿತರ ವೈಯಕ್ತಿಕ ವಿವರಗಳನ್ನು ನೀಡಬೇಡಿ. ಹಾಗೇನಾದರೂ ಮಾಡಿದರೆ ಕ್ಷಣ ಮಾತ್ರದಲ್ಲಿ ನಿಮ್ಮ ಹಣವನ್ನು ಕಡಿಯಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಿವಾರ್ಡ್ ಗಳಿಗೆ ಸಂಬಂಧಿಸಿದಂತೆ ಯಾವುದೇ ಸಂದೇಶ ಕಳುಹಿಸುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ. ಏನೇ ತೊಂದರೆ ಬಂದರೂ, ಅನುಮಾನ ಬಂದರೂ ಕೂಡಲೇ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ವಿಚಾರಿಸಿ ಎಂದು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News