ಏಪ್ರಿಲ್ 20ಕ್ಕೆ Social Media ಮೇಲೆ ಧಮಾಲ್ ಮಾಡಲು ಹೊರಟಿದ್ದಾರೆ Salman Khan

ಭಾನುವಾರ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೇಲೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಮಾಹಿತಿಯನ್ನು ತನ್ನ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

Last Updated : Apr 19, 2020, 10:22 PM IST
ಏಪ್ರಿಲ್ 20ಕ್ಕೆ Social Media ಮೇಲೆ ಧಮಾಲ್ ಮಾಡಲು ಹೊರಟಿದ್ದಾರೆ Salman Khan title=

ನವದೆಹಲಿ: ದೇಶಾದ್ಯಂತ ಕೊರೊನಾ ಪೀಡಿತರ ಸಂಖ್ಯೆ 14000 ತಲುಪಿದೆ. ಕೇಂದ್ರ ಆರೋಗ್ಯ ಇಲಾಖೆ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ ಇವರಲ್ಲಿ 11,000 ಜನ ಇದುವರೆಗೂ ಕೂಡ Covid-19 ವೈರಸ್ ನಿಂದ ಪೀಡಿತರಾಗಿದ್ದಾರೆ ಮತ್ತು 1992 ರೋಗಿಗಳನ್ನು ಚಿಕತ್ಸೆ ನೀಡಿ ಅವರ ಮನೆಗಳಿಗೆ ಕಳುಹಿಸಲಾಗಿದೆ. ಆದರೆ, ಇನ್ನೊಂದೆಡೆ ಈ ಮಾರಕ ವೈರಸ್ ದಾಳಿಯಿಂದ ಬಲಿಯಾದವರ ಸಂಖ್ಯೆ 480ಕ್ಕೆ ತಲುಪಿದೆ. ಈ ಮಾರಕ ಕಾಯಿಲೆ ವಿರುದ್ಧ ಯುದ್ಧವನ್ನೇ ಸಾರಿರುವ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದೆ. ಈ ಲಾಕ್ ಡೌನ್ ಮಧ್ಯೆಯೇ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಹೊರಬಂದಿದೆ. ಹೌದು, ಸಲ್ಮಾನ್ ಖಾನ್ ತಮ್ಮ ಯುಟ್ಯೂಬ್ ಚಾನೆಲ್ ಬಿಡುಗಡೆಗೆ ಸಿದ್ಧರಾಗಿದ್ದು, ತಮ್ಮ ಚಾನೆಲ್ ಗೆ ಅವರು 'Being Salman Khan' ಎಂದು ಹೆಸರಿಸಿದ್ದಾರೆ.

ಈ ಕುರಿತು ಭಾನುವಾರ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ್ದಾರೆ. ತಮ್ಮ ಚಾನೆಲ್ ಅನ್ನು ಏಪ್ರಿಲ್ 20 ರಂದು ಲಾಂಚ್ ಮಾಡಲಾಗುವುದು ಎಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯರಾಗಿರುವ ಸಲ್ಮಾನ್ ನಿತ್ಯ ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಕೆಲ ಘಟನೆಗಳನ್ನು ಹಾಗೂ ಸ್ವಾರಸ್ಯಕರ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ ಹಾಗೂ ಅಭಿಮಾನಿಗಳೂ ಕೂಡ ತಮ್ಮ ನೆಚ್ಚಿನ ನಟನ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕನೆಕ್ಟ್ ಆಗುತ್ತಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸಲ್ಮಾನ್ ಖಾನ್ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ತಮ್ಮ ಅಭಿಮಾನಿಗಳಿಗೆ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಕೆಲ ಕ್ಷಣಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಮತ್ತು ಹಿಂಬಾಲಕರಿಗೆ ಕೊವಿಡ್-19 ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್ 1989ರಲ್ಲಿ ಬಿಡುಗಡೆಯಾಗಿದ್ದ ತಮ್ಮ ಬ್ಲಾಕ್ ಬಸ್ಟರ್ 'ಮೈನೆ ಪ್ಯಾರ್ ಕಿಯಾ' ಚಿತ್ರದ ರೊಮ್ಯಾಂಟಿಕ್ ದೃಶ್ಯವನ್ನು ರೀಕ್ರಿಯೇಟ್ ಮಾಡಿ ಕೊರೊನಾ ಟ್ವಿಸ್ಟ್ ರೂಪದಲ್ಲಿ ಹಂಚಿಕೊಂಡಿದ್ದರು. ಅವರ ಈ ಪೋಸ್ಟ್ ಗೆ ಅಭಿಮಾಹಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಇನ್ನೊಂದೆಡೆ ಕೊರೊನಾ ವೈರಸ್ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ಎಚ್ಚರಿಕೆ ನೀಡಿದ್ದ ಸಲ್ಮಾನ್ ಭಾರಿ ಕ್ರೋಧ ವ್ಯಕ್ತಪಡಿಸಿದ್ದರು.

Trending News