Abhishek Bachchan Best Husband: ಭಾರತದ ಸ್ಟಾರ್ ಸೆಲೆಬ್ರೆಟಿ ಕಪಲ್ ಎಂದೇ ಹೆಸರಾಗಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ವದಂತಿಯಿಂದಾಗಿ ಭಾರೀ ಚರ್ಚೆಯಲ್ಲಿದ್ದಾರೆ.
ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಗ್ರೇ ಡಿವೋರ್ಸ್ ಪಡೆದಿದ್ದಾರೆ. ಶೀಘ್ರದಲ್ಲೇ ನಟಿ ನಿಮ್ರತ್ ಕೌರ್ ಅವರೊಂದಿಗೆ ಅಭಿಷೇಕ್ ಮದುವೆಯಾಗಲಿದ್ದಾರೆ ಎಂಬಿತ್ಯಾದಿ ವದಂತಿಗಳು ಹರಿದಾಡುತ್ತಲೇ ಇವೆ. ಈ ಮಧ್ಯೆ, ಪತಿ ಬಗೆಗಿನ ಐಶ್ವರ್ಯ ರೈ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನನ್ನ ಪತಿ... ಐಶ್ ಹೇಳಿಕೆ ವೈರಲ್!
ಐಶ್ವರ್ಯ ರೈ ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್ "ವಿಶ್ವದ ಅತ್ಯುತ್ತಮ ಪತಿ" ಎಂದು ಹಾಡಿ ಹೊಗಳಿದ್ದಾರೆ. ಇದರಲ್ಲಿ ತಮ್ಮ ಯಶಸ್ಸಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಜೊತೆಗಿರುವ ಅಭಿಷೇಕ್ ಪ್ರೋತ್ಸಾಹಕ್ಕೆ ತಾವು ಕೃತಜ್ಞರಾಗಿರುವುದಾಗಿ ಮಾಜಿ ವಿಶ್ವ ಸುಂದರಿ ಹೇಳಿದ್ದಾರೆ.
ನನಗೆ ಇಂತಹ ಆಶೀರ್ವಾದ ಸಿಕ್ಕಿದ್ದೇ ನನ್ನ ಪುಣ್ಯ:
ಹಳೆಯ ಸಂದರ್ಶನದ ವಿದೀಯೋದಲ್ಲಿ ಪತಿಯನ್ನು ಹಾಡಿ ಹೊಗಳಿರುವ ಐಶ್ವರ್ಯ ರೈ, "ವಿಶ್ವದ ಅತ್ಯುತ್ತಮ ಪತಿಯನ್ನು ನಾನು ಹೊಂದಿದ್ದೇನೆ. ನನಗೆ ಇಂತಹ ಆಶೀರ್ವಾದ ಸಿಕ್ಕಿದ್ದೇ ನನ್ನ ಪುಣ್ಯ. ಸಾರ್ವಜನಿಕ ವೇದಿಕೆಗಳಲ್ಲಿ ತನ್ನ ಮಹಿಳೆಯ ಬಗ್ಗೆ ಪ್ರೋತ್ಸಾಹಕವಾಗಿ ಮಾತನಾಡಿ ಶಕ್ತಿ ತುಂಬುತ್ತಾರೆ. ಇನ್ನಷ್ಟು ಹೊಸತನ್ನು ಮಾಡಲು ಪ್ರೋತ್ಸಾಹಿಸುತ್ತಾರೆ" ಎಂದು ಹೇಳಿದ್ದರು.
ವಾಸ್ತವವಾಗಿ, ಭಾರತೀಯ ಚಿತ್ರರಂಗಕ್ಕೆ ಐಶ್ವರ್ಯ ರೈ ಅವರ ಅಮೋಘ ಕೊಡುಗೆಯನ್ನು ಗೌರವಿಸಿ ಅವರಿಗೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಂದರ್ಭದ ವಿಶೇಷ ಸಂದರ್ಶನದ ವಿಡಿಯೋದಲ್ಲಿ ಐಶ್ವರ್ಯ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರನ್ನು ಈ ರೀತಿ ಕೊಂಡಾಡಿದ್ದು, ಸದ್ಯ ಅವರ ಹೇಳಿಕೆ ಸಖತ್ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.