ನಿಮ್ಮ FACEBOOK ಖಾತೆಯನ್ನು ಬೇರೊಬ್ಬರು ನೋಡುತ್ತಿದ್ದಾರೆಯೇ? ಹೀಗೆ ಪತ್ತೆ ಹಚ್ಚಿ

ಸಾಮಾನ್ಯವಾಗಿ FACEBOOK ಖಾತೆಯನ್ನು ನಿರ್ವಹಿಸಿದ ಬಳಿಕ ಕೆಲವೊಮ್ಮೆ ನಾವು ಲಾಗೌಟ್ ಮಾಡುವುದನ್ನು ಮರೆತು ಹೋಗುತ್ತೇವೆ.

Last Updated : Feb 28, 2020, 05:35 PM IST
ನಿಮ್ಮ FACEBOOK ಖಾತೆಯನ್ನು ಬೇರೊಬ್ಬರು ನೋಡುತ್ತಿದ್ದಾರೆಯೇ? ಹೀಗೆ ಪತ್ತೆ ಹಚ್ಚಿ title=

ಸಾಮಾನ್ಯವಾಗಿ FACEBOOK ಖಾತೆಯನ್ನು ನಿರ್ವಹಿಸಿದ ಬಳಿಕ ಕೆಲವೊಮ್ಮೆ ನಾವು ಲಾಗೌಟ್ ಮಾಡುವುದನ್ನು ಮರೆತು ಹೋಗುತ್ತೇವೆ. ಇದರಿಂದ ನಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ನಮ್ಮ ವೈಯಕ್ತಿಕ ಮಾಹಿತಿಯು ದುರ್ಬಳಕೆಯಾಗುವ ಸಾಧ್ಯತೆ ಇರುತ್ತದೆ. ಆದರೆ, ಭಯಪಡುವ ಅಗ್ಯತ್ಯವಿಲ್ಲ. ಒಂದು ವೇಳೆ ನೀವೂ ಕೂಡ ನಿಮ್ಮ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಿ ಲಾಗೌಟ್ ಆಗಲು ಮರೆತು ಹೋಗಿದ್ದೀರಾ? ಚಿಂತಿಸಬೇಡಿ ಈ ಸುಲಭ ವಿಧಾನ ಅನುಸರಿಸಿ ಯಾವುದೇ ಬ್ರೌಸರ್ ನಿಂದ ನೀವು ನಿಮ್ಮ ಖಾತೆಯನ್ನು ಲಾಗೌಟ್ ಮಾಡಬಹುದು.

ಅಷ್ಟೇ ಅಲ್ಲ, ನಿಮ್ಮ ಫೇಸ್‌ಬುಕ್ ಖಾತೆ ಎಲ್ಲಿ ಲಾಗ್ ಇನ್ ಆಗಿದೆ ಎಂಬುದನ್ನು ಸಹ ನೀವು ಕಂಡುಹಿಡಿಯಬಹುದು. ಜೊತೆಗೆ ಈ ಕುರಿತು ಫೇಸ್ ಬುಕ್ ನಲ್ಲಿಯೂ ಕೂಡ ನೀವು ಲಾಗಿನ್ ಆಗಿರುವ ಡಿವೈಸ್ ಕುರಿತು ಮಾಹಿತಿ ಪಡೆಯಬಹುದು. ಇದರಲ್ಲಿ ನಿಮಗೆ ಟೈಮ್ ಹಾಗೂ ದಿನಾಂಕದ ಮಾಹಿತಿ ಕೂಡ ಸಿಗಲಿದೆ. ಇದಕ್ಕಾಗಿ ಈ ಕೆಳಗೆ ಸೂಚಿಸಿರುವ ಸ್ಟೆಪ್ ಗಳನ್ನು ಅನುಸರಿಸಿ.

ಈ ರೀತಿ ಕಂಪ್ಯೂಟರ್ ನಲ್ಲಿ ಮಾಹಿತಿ ಪಡೆಯಿರಿ
ಮೊದಲು ಯಾವುದೇ ಬ್ರೌಸರ್ ನಿಂದ ನಿಮ್ಮ ಫೇಸ್ ಬುಕ್ ಅಕೌಂಟ್ ಗೆ ಲಾಗಿನ್ ಆಗಿ
ಬಳಿಕ ಅಕೌಂಟ್ ಸೆಟ್ಟಿಂಗ್ ಗೆ ಭೇಟಿ ನೀಡಿ.
ಈಗ ನಿಮ್ಮ ಮುಂದೆ ಒಂದು ಹೊಸ ಪೇಜ್ ತೆರೆದುಕೊಳ್ಳಲಿದೆ. ಈ ಪುಟದ ಎಡಬದಿಯಲ್ಲಿ 'Security and login' ಇರುವುದನ್ನು ನೀವು ಗಮನಿಸಬಹುದು.
ಅಲ್ಲಿ ನಿಮಗೆ 'Where you're logged in'ನ ಆಪ್ಶನ್ ಕಾಣಿಸಿಕೊಳ್ಳಲಿದೆ.
ಇಲ್ಲಿ ನಿಮ್ಮ ಫೇಸ್ ಬುಕ್ ಯಾವ ಡಿವೈಸ್ ಮೇಲೆ ಲಾಗಿನ್ ಆಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ.

ಸ್ಮಾರ್ಟ್ ಫೋನ್ ನಲ್ಲಿ ಈ ರೀತಿ ಮಾಹಿತಿ ಪಡೆಯಿರಿ
ನಿಮ್ಮ ಫೇಸ್ ಬುಕ್ ಆಪ್ ತೆರೆದುಕೊಂಡ ಬಳಿಕ ಸೆಟ್ಟಿಂಗ್ಸ್ ಗೆ ಭೇಟಿ ನೀಡಿ.
ಬಳಿಕ  'Security and login' ಮೇಲೆ ಕ್ಲಿಕ್ಕಿಸ.
ಅಲ್ಲಿ ನಿಮಬೆ 'Where you're logged in' ಕುರಿತ ಆಪ್ಶನ್ ಸಿಗಲಿದೆ.
ನಂತರ 'See all' ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ

Trending News