WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ

ICC WTC 2023-25 Points Table Update: ಇದು ಕಳೆದ ಎರಡು ದಶಕಗಳಲ್ಲಿ ನಡೆದ 20 ಟೆಸ್ಟ್‌’ಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾದ 17 ನೇ ಜಯವಾಗಿದೆ. ಈ ಅವಧಿಯಲ್ಲಿ ಕಾಂಗರೂ ಕೇವಲ ಒಂದು ಪಂದ್ಯದಲ್ಲಿ ಸೋತಿದೆ. ಅಂದಹಾಗೆ ಆಸ್ಟ್ರೇಲಿಯದ ಗೆಲುವಿನಿಂದ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಹೆಚ್ಚಿನ ಅನುಕೂಲ ಲಭಿಸಿದೆ.

Written by - Bhavishya Shetty | Last Updated : Mar 3, 2024, 06:11 PM IST
    • ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಗೆಲುವು
    • ಗುರಿ ತಲುಪಲೆಂದು ಕಣಕ್ಕಿಳಿದ ನ್ಯೂಜಿಲೆಂಡ್ ತಂಡ 196 ರನ್‌’ಗಳಿಗೆ ಆಲೌಟ್ ಆಯಿತು
    • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ​​ಅಂಕಗಳ ಪಟ್ಟಿ
WTC Point Table: ಆಸ್ಟ್ರೇಲಿಯಾಗೆ ಗೆಲುವು, ನ್ಯೂಜಿಲೆಂಡ್’ಗೆ ಸೋಲು, ಆದ್ರೆ ಅಗ್ರಸ್ಥಾನಕ್ಕೇರಿದ್ದು ಭಾರತ: ಹೀಗಿದೆ ನೋಡಿ WTC ಅಂಕಪಟ್ಟಿ title=
WTC Points Table 2023-2025

ICC WTC 2023-25 Points Table Update: ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ 172 ರನ್‌’ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ವೆಲ್ಲಿಂಗ್ಟನ್’ನಲ್ಲಿ ನಡೆದ ಈ ಪಂದ್ಯದಲ್ಲಿ ಕಾಂಗರೂ ಪಡೆ ಕಿವೀಸ್’ಗೆ 369 ರನ್ ಗಳ ಗುರಿ ನೀಡಿತ್ತು. ಗುರಿ ತಲುಪಲೆಂದು ಕಣಕ್ಕಿಳಿದ ನ್ಯೂಜಿಲೆಂಡ್ ತಂಡ 196 ರನ್‌’ಗಳಿಗೆ ಆಲೌಟ್ ಆಯಿತು.

ಇದು ಕಳೆದ ಎರಡು ದಶಕಗಳಲ್ಲಿ ನಡೆದ 20 ಟೆಸ್ಟ್‌’ಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾದ 17 ನೇ ಜಯವಾಗಿದೆ. ಈ ಅವಧಿಯಲ್ಲಿ ಕಾಂಗರೂ ಕೇವಲ ಒಂದು ಪಂದ್ಯದಲ್ಲಿ ಸೋತಿದೆ. ಅಂದಹಾಗೆ ಆಸ್ಟ್ರೇಲಿಯದ ಗೆಲುವಿನಿಂದ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಹೆಚ್ಚಿನ ಅನುಕೂಲ ಲಭಿಸಿದೆ. ಈ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ: ಟಿಕೆಟ್ ಗೊಂದಲ ಏನಿಲ್ಲ, ಧಾರವಾಡ ಕ್ಷೇತ್ರದಲ್ಲಿ ಚುನಾವಣೆ ತಯಾರಿ ನಡೆಸಿದ್ದೇನೆ: ಪ್ರಹ್ಲಾದ ಜೋಶಿ

ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ, ನ್ಯೂಜಿಲೆಂಡ್‌ ಅಂಕಗಳ ಶೇಕಡಾವಾರು 75 ರಿಂದ 60 ಕ್ಕೆ ಇಳಿದಿದೆ. ಇದುವರೆಗೆ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದಿದ್ದಾರೆ. ಕಿವೀಸ್ ತಂಡ ಒಂದರಲ್ಲಿ ಸೋತಿದೆ. ಕಿವೀಸ್ ತಂಡ 36 ಅಂಕಗಳೊಂದಿಗೆ ಶೇ.60 ಅಂಕ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದೇ ವೇಳೆ, ಭಾರತದ ಅಂಕಗಳ ಶೇಕಡಾವಾರು 64.58 ಆಗಿದೆ. ಆಡಿದ ಎಂಟು ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿದ್ದು, ಎರಡರಲ್ಲಿ ಸೋತಿದೆ ಟೀಂ ಇಂಡಿಯಾ. ಒಂದು ಟೆಸ್ಟ್ ಡ್ರಾ ಆಗಿತ್ತು. ಭಾರತ 62 ಅಂಕ ಹೊಂದಿದೆ. ಆಸ್ಟ್ರೇಲಿಯಾದ ಸ್ಕೋರಿಂಗ್ ಶೇಕಡಾವಾರು 59.09 ಆಗಿದ್ದು, 78 ಅಂಕಗಳನ್ನು ಹೊಂದಿದ್ದಾರೆ. ಇದುವರೆಗೆ 11 ಟೆಸ್ಟ್‌ಗಳನ್ನು ಆಡಿದ್ದು, ಏಳರಲ್ಲಿ ಗೆದ್ದಿದ್ದಾರೆ. ಮೂರರಲ್ಲಿ ಸೋಲು ಕಂಡಿದ್ದು, ಒಂದು ಟೆಸ್ಟ್ ಡ್ರಾ ಆಗಿದೆ.

50 ಅಂಕಗಳೊಂದಿಗೆ ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಅಂಕಗಳ ಶೇಕಡಾವಾರು 36.66 ಇದ್ದು, ಐದನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 33.33 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ, ದಕ್ಷಿಣ ಆಫ್ರಿಕಾ ಶೇಕಡಾ 25 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ನಾಲ್ಕನೇ ಟೆಸ್ಟ್‌’ನಲ್ಲಿ ಭಾರತದ ವಿರುದ್ಧ ಸೋತ ನಂತರ, ಇಂಗ್ಲೆಂಡ್ ಅಂಕ ಶೇಕಡಾ 19.44 ಆಗಿದ್ದು, ಎಂಟನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25 ​​ಅಂಕಗಳ ಪಟ್ಟಿ

ತಂಡ ಪಂದ್ಯ ಗೆಲುವು ಸೋಲು ಡ್ರಾ ಅಂಕ ಶೇಕಡವಾರು
ಭಾರತ 8 5 2 1 62 64.58%
ನ್ಯೂಜಿಲೆಂಡ್ 5 3 2 0 36 60.00
ಆಸ್ಟ್ರೇಲಿಯಾ 11 7 3 1 78 59.09
ಬಾಂಗ್ಲಾದೇಶ 2 1 1 0 12 50.00
ಪಾಕಿಸ್ತಾನ 0 22 36.66
ವೆಸ್ಟ್ ಇಂಡೀಸ್ 1 2 1 16 33.33
ದಕ್ಷಿಣ ಆಫ್ರಿಕಾ 1 0 12 25.00
ಇಂಗ್ಲೆಂಡ್ 3 5 1 21 19.44
ಶ್ರೀಲಂಕಾ 2 0 2 0 0 0.00

ಇದನ್ನೂ ಓದಿ: ಟಿಕೆಟ್ ಗೊಂದಲ ಏನಿಲ್ಲ, ಧಾರವಾಡ ಕ್ಷೇತ್ರದಲ್ಲಿ ಚುನಾವಣೆ ತಯಾರಿ ನಡೆಸಿದ್ದೇನೆ: ಪ್ರಹ್ಲಾದ ಜೋಶಿ

ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೆ ಭಾರತ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಳ್ಳುತ್ತದೆ. ಐದನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡರೆ ಅಥವಾ ಇಂಗ್ಲೆಂಡ್ ಗೆದ್ದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎರಡಕ್ಕೂ ಪಾಯಿಂಟ್ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಸಾಧ್ಯವಾಗುತ್ತದೆ. ಇನ್ನೊಂದೆಡೆ ನ್ಯೂಜಿಲೆಂಡ್ vs ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಶುಕ್ರವಾರ ಅಂದರೆ ಮಾರ್ಚ್ 8 ರಿಂದ ಕ್ರೈಸ್ಟ್‌ಚರ್ಚ್‌’ನಲ್ಲಿ ಪ್ರಾರಂಭವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News