Mohammed Shami : ಮೊಹಮ್ಮದ್ ಶಮಿ. ಇಡೀ ವಿಶ್ವ ಕ್ರಿಕೆಟ್ ಜಪಿಸುತ್ತಿರುವ ಹೆಸರು.. ಭಾರತದ ಪರ ಬೆಂಕಿ ಬೌಲರ್ ಮಹಮ್ಮದ್ ಶಮಿ ತಮ್ಮ ರಿಯಲ್ ತಾಕತ್ ಏನು ಅಂತ ಇಡೀ ಕ್ರಿಕೆಟ್ ಜಗತ್ತಿಗೆ ತೋರಿಸಿದ್ದಾರೆ. ಆದರೆ ತನ್ನ ಬಗ್ಗೆ ಪದೇ ಪದೆ ಮಾಡಬಾರದ ಆರೋಪಗಳನ್ನೇ ಮಾಡುತ್ತಾ ಟಾರ್ಗೆಟ್ ಮಾಡ್ತಿದ್ದ ತನ್ನ ಮಾಜಿ ಹೆಂಡತಿಗೆ, ಶಮಿ ಬಾಲ್ ಮೂಲಕವೇ ನೇರವಾಗಿ ಉತ್ತರಿಸಿದ್ದಾರೆ.
ಶಮಿ ಸಂಸಾರ ತುಂಬಾ ಚೆನ್ನಾಗಿ ಇತ್ತು, ಗಂಡ & ಹೆಂಡತಿ ಇಬ್ಬರೂ ನೆಮ್ಮದಿಯಾಗಿ ಬದುಕುತ್ತಿದ್ದರು. ಆಗ ಮಹಮ್ಮದ್ ಶಮಿ ಕೂಡ ಉತ್ತಮವಾಗಿ ಆಟವಾಡಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದರು. ಆದರೆ ದಿಢೀರ್ ಏನಾಯ್ತೋ ಏನೋ.. ಮಹಮ್ಮದ್ ಶಮಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಶಮಿ ಹೆಂಡತಿ ತನ್ನ ಗಂಡನ ವಿರುದ್ಧವೇ ಸಾಲು ಸಾಲು ಗಂಭೀರ ಆರೋಪ ಮಾಡಿದ್ದರು. ಹೀಗೆ ಹೊತ್ತಿಕೊಂಡ ಕಿಚ್ಚು, ಹಲವು ವರ್ಷಗಳ ಕಾಲ ಹಾಗೆಯೇ ಉಳಿದಿದೆ. ಮೊನ್ನೆ ಮೊನ್ನೆಯಷ್ಟೆ ಮತ್ತೊಮ್ಮೆ ಶಮಿ ಕುರಿತು ಮಾಜಿ ಪತ್ನಿ ಹಸಿನ್ ಜಹಾನ್ ಮಾತನಾಡಿದ್ದರಿಂದ ಮಹಮ್ಮದ್ ಶಮಿ ಪಿತ್ತ ನೆತ್ತಿಗೇರಿಸಿದ್ದರು.
ಇದನ್ನೂ ಓದಿ: ಭಾರತ ತಂಡ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ: ಸಿಎಂ ಸಿದ್ದರಾಮಯ್ಯ
ಶಮಿ ವಿರುದ್ಧ ಹಸಿನ್ ಜಹಾನ್ ವಿರುದ್ಧ ಆರೋಪ ಮಾಡಿದ ಕೆಲ ಗಂಟೆಗಳಲ್ಲೇ ಕ್ರಿಕೆಟ್ ಅಂಗಳದಲ್ಲೇ ಶಮಿ ಉತ್ತರ ನೀಡಿದ್ದಾರೆ. ಭಾರತ ನ್ಯೂಜಿಲೆಂಡ್ ಪಡೆಗೆ 398 ರನ್ಗಳ ಬೃಹತ್ ಗುರಿ ನೀಡಿದ್ದರೂ, ಅದನ್ನು ಅರಗಿಸಿಕೊಳ್ಳಲು ಆಗಲೇ ಇಲ್ಲ. ಇನ್ನೇನು ನ್ಯೂಜಿಲೆಂಡ್ ತಂಡ 398 ರನ್ಗಳ ಗುರಿ ತಲುಪಿ ಭಾರತಕ್ಕೆ ಸೋಲು ತೋರಿಸುತ್ತೆ ಅನ್ನುವಾಗಲೇ ಬೆಂಕಿಯ ಉಂಡೆಯಂತೆ ಎಂಟ್ರಿ ಕೊಟ್ಟಿದ್ದರು ಮೊಹಮ್ಮದ್ ಶಮಿ. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಆರಂಭದಲ್ಲೇ 40 ರನ್ಗಳ ಒಳಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆಗ ಕಿವೀಸ್ ಪಡೆಯ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಜೋಡಿ ನೀಡಿದ್ದ 181 ರನ್ ಜೊತೆಯಾಟ ಭಯ ತರಿಸಿತ್ತು. ಹೀಗಿದ್ದಾಗಲೇ ಈ ವೇಳೆ ನಾಯಕ ರೋಹಿತ್ ಶರ್ಮಾ ಶಮಿಗೆ ಬಾಲ್ ನೀಡಿದ್ದರು. ನ್ಯೂಜಿಲೆಂಡ್ ಸ್ಕೋರ್ 220 ರನ್ ಆಗಿದ್ದಾಗ ವಿಲಿಯಮ್ಸನ್ ವಿಕೆಟ್ ಬೀಳಿಸುವಲ್ಲಿ ಯಶಸ್ವಿಯಾದ್ರು. ಅಲ್ಲಿಂದ ವಿಕೆಟ್ ಸರಣಿ ಶುರು ಮಾಡಿದ ಶಮಿ 7 ವಿಕೆಟ್ ಪಡೆದು ಅಬ್ಬರಿಸಿದರು.
ಇದನ್ನೂ ಓದಿ:ಫೈನಲ್ ಗೂ ಮುನ್ನ ಭಯ ಬಿದ್ದ ಕಾಂಗರೂ ಪಡೆ ! ಮ್ಯಾಚ್ ವಿನ್ನರ್ ಬಾಯಿಯಿಂದ ಬಂತು ಈ ಮಾತು !
ಮಾಜಿ ಪತ್ನಿಯ ಆರೋಪಗಳಿಗೆ ತಲೆ ಮೇಲೆ ಬಾಲ್ ಇಟ್ಟುಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ ಅಂತ ಫ್ಯಾನ್ಸ್ ಈಗ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಮಹಮ್ಮದ್ ಶಮಿ ಅವರ ಪತ್ನಿ ಮಾಡಿದ್ದ ಆರೋಪಗಳಿಗೆ ಅಭಿಮಾನಿ ಬಳಗ ಫುಲ್ ಗರಂ ಆಗಿದೆ. ಈ ಮೂಲಕ 2023 ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕಿಚ್ಚು ಹೊತ್ತಿದೆ. ಇಡೀ ಟೂರ್ನಿಯಲ್ಲಿ ಭಾರತದ ಪರ ಮಿಂಚಿರುವ ಬೌಲರ್, ಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾದ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.
ಅದೆನೇ ಇರ್ಲಿ.. ವಿಶ್ವಕಪ್ನ ಕೆಲ ಆರಂಭಿಕ ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಶಮಿ ಸದ್ಯ ಇಡೀ ಭಾರತದಲ್ಲಿ ಹಿರೋ ಆಗಿರುವುದು ಹೆಮ್ಮೆಯೇ ಸರಿ.. ಆಲ್ ದಿ ಬೆಸ್ಟ್ ಶಮಿ.. ಆಲ್ ದಿ ಬೆಸ್ಟ್ ಟೀಂ ಇಂಡಿಯಾ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.