ENG vs AUS, Ashes 1st Test: ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಆಶಸ್ ಸರಣಿ 2023 ಆರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯ ಜೂನ್ 16 ರಂದು ಇಂಗ್ಲೆಂಡ್ ನ ಎಡ್ಜ್ ಬಾಸ್ಟನ್ ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಆಡುತ್ತಿರುವ ಬ್ಯಾಟ್ಸ್ಮನ್ ಟೆಸ್ಟ್ ಕ್ರಿಕೆಟ್ ನಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದು, ಈ ಕಾರಣದಿಂದಾಗಿ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: “ಇದನ್ನು ನಾನು ನಿರೀಕ್ಷಿಸಿರಲಿಲ್ಲ...” ಟೆಸ್ಟ್ ಕ್ರಿಕೆಟ್ ಬಗ್ಗೆ ಗಂಗೂಲಿ ಹೇಳಿಕೆಗೆ ಛೀಮಾರಿ ಹಾಕಿದ ಈ ಅನುಭವಿ!
ಸಚಿನ್ ಅವರ ಈ ದೊಡ್ಡ ದಾಖಲೆಯನ್ನು ಮುರಿಯುವುದು ಸುಲಭದ ಕೆಲಸವಲ್ಲ, ಆದರೆ ಪ್ರಸ್ತುತ ಯಾವುದಾದರೂ ಒಬ್ಬ ಬ್ಯಾಟ್ಸ್ಮನ್ ಆ ದಾಖಲೆ ಮುರಿಯಲು ಸಾಧ್ಯ ಎಂದರೆ ಅದು ಇಂಗ್ಲೆಂಡ್ ನ ಈ ಬ್ಯಾಟ್ಸ್ಮನ್ ನಿಂದ ಮಾತ್ರ.
ಸುಮಾರು 25 ವರ್ಷಗಳ ಕಾಲ ಟೀಂ ಇಂಡಿಯಾ ಪರ ಕ್ರಿಕೆಟ್ ಆಡಿದ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇಂತಹ ಅನೇಕ ದಾಖಲೆಗಳಿವೆ. ಅದನ್ನು ಯೋಚಿಸುವುದೂ ಕಷ್ಟ. ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ 15921 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಅವರ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಹೀಗಿರುವಾಗ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋ ರೂಟ್ ಈ ದಿಸೆಯಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿದ್ದಾರೆ. ಮುಂದಿನ ಕೆಲವು ವರ್ಷಗಳವರೆಗೆ, ಅವರು ಬ್ಯಾಟಿಂಗ್ ಮಾಡುತ್ತಿರುವ ಮಾರಕ ಫಾರ್ಮ್ ಅನ್ನು ಮುಂದುವರಿಸಿದರೆ, ಅವರು ಈ ಶ್ರೇಷ್ಠ ದಾಖಲೆಯನ್ನು ಮುರಿಯಬಹುದು.
ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ ಜೋ ರೂಟ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಆಶಸ್ ಟೆಸ್ಟ್ ನ ಮೊದಲ ದಿನವೇ ಶತಕ ಸಿಡಿಸಿದ್ದರು. ಅವರು 152 ಎಸೆತಗಳಲ್ಲಿ 118 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. ಈ ವೇಳೆ ಅವರ ಬ್ಯಾಟ್ ನಿಂದ 7 ಬೌಂಡರಿ ಹಾಗೂ 4 ಸಿಕ್ಸರ್ ಗಳು ಹೊರಹೊಮ್ಮಿವೆ. ಕೆಲ ದಿನಗಳಿಂದ ರೂಟ್ ಓಡುತ್ತಿರುವ ಮಾರಕ ಫಾರ್ಮ್ ನೋಡಿದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್ ಗಳ ದಾಖಲೆಯನ್ನು ಕೆಡವಲಿದ್ದಾರೆ ಎನಿಸುತ್ತಿದೆ. ರೂಟ್ ಟೆಸ್ಟ್ ಕ್ರಿಕೆಟ್ ನಲ್ಲಿ 11122 ರನ್ ಗಳಿಸಿದ್ದಾರೆ. ಆದರೆ, ಈ ದೊಡ್ಡ ದಾಖಲೆಯನ್ನು ಮುರಿಯಲು, ಅವರು 3-4 ವರ್ಷಗಳ ಕಾಲ ಈ ಫಾರ್ಮ್ ನಲ್ಲಿ ಉಳಿಯಬೇಕಾಗುತ್ತದೆ.
ಇದನ್ನೂ ಓದಿ: 37 ವರ್ಷದ ಈ ಆಟಗಾರನಿಗೆ ಏಷ್ಯಾಕಪ್ ಕೊನೆ ಪಂದ್ಯ: ಟೆಸ್ಟ್’ನಲ್ಲಿ 7 ಶತಕ ಬಾರಿಸಿದ ಡ್ಯಾಶಿಂಗ್ ಓಪನರ್ ನಿವೃತ್ತಿ ಪಕ್ಕಾ!
ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಆಶಸ್ ಟೆಸ್ಟ್ ಪಂದ್ಯದ ಕುರಿತು ಮಾತನಾಡುವುದಾದರೆ, ಇಂಗ್ಲೆಂಡ್ ಬ್ಯಾಟಿಂಗ್ ಮಾಡುವಾಗ ಮೊದಲ ದಿನವೇ 393 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ತಂಡದ ಪರ ಜೋ ರೂಟ್ ಅಜೇಯ 118 ರನ್ ಗಳಿಸಿದರು. ಇದಲ್ಲದೇ ಆರಂಭಿಕರಾದ ಜಾಕ್ ಕ್ರೌಲಿ 61 ರನ್ ಗಳಿಸಿದರೆ, ಜಾನಿ ಬೈರ್ಸ್ಟೋವ್ 78 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ. ಆರಂಭಿಕ ಉಸ್ಮಾನ್ ಖವಾಜಾ (4) ಮತ್ತು ಡೇವಿಡ್ ವಾರ್ನರ್ (8) ಕ್ರೀಸ್ನಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ