ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ 5 ವರ್ಷದ ಹಿಂದೆ ಪ್ಲಾನ್ ರೂಪಿಸಿದ್ದ ಸನಾತನ ಸಂಸ್ಥೆ-ಎಸ್ಐಟಿ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ವಿಚಾರವಾಗಿ 9 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಎಸ್ಐಟಿ ಪೋಲಿಸ್ ತಂಡವು ಈಗ ಸನಾತನ ಸಂಸ್ಥೆಯು ಅವರನ್ನು ಕೊಲ್ಲಲು 5 ವರ್ಷಗಳ ಹಿಂದೆ ಪ್ಲಾನ್ ಸಿದ್ದಪಡಿಸಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಿದೆ.

Last Updated : Nov 24, 2018, 02:49 PM IST
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ 5 ವರ್ಷದ ಹಿಂದೆ ಪ್ಲಾನ್ ರೂಪಿಸಿದ್ದ ಸನಾತನ ಸಂಸ್ಥೆ-ಎಸ್ಐಟಿ title=

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದ ವಿಚಾರವಾಗಿ 9 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಎಸ್ಐಟಿ ಪೋಲಿಸ್ ತಂಡವು ಈಗ ಸನಾತನ ಸಂಸ್ಥೆಯು ಅವರನ್ನು ಕೊಲ್ಲಲು 5 ವರ್ಷಗಳ ಹಿಂದೆ ಪ್ಲಾನ್ ಸಿದ್ದಪಡಿಸಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಿದೆ.

ಆದರೆ ಗೌರಿ ಲಂಕೇಶ್ ಅವರನು ಹತ್ಯೆ ಮಾಡಲು ಯಾವುದೇ ರೀತಿಯ ವೈಯಕ್ತಿಕ ದ್ವೇಷವಿರಲಿಲ್ಲ ಎಂದು ವಿಶೇಷ ತನಿಖಾ ದಳ ತಿಳಿಸಿದೆ.ಈ ವಿಚಾರವಾಗಿ ಪಿಟಿಐಗೆ ತಿಳಿಸಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಸ್ ಬಾಲನ್ "ಹಂತಕರು ಮತ್ತು ಹತ್ಯೆಯಾದವರು ಯಾವುದೇ ರೀತಿಯ ವೈಯಕ್ತಿಕ ದ್ವೇಷವನ್ನು ಹೊಂದಿರಲಿಲ್ಲ.ಆದರೆ ಅವರು ಹತ್ಯೆಯಾಗಿದ್ದು ಏತಕ್ಕೆ? ಏಕೆಂದರೆ ಗೌರಿ ಲಂಕೇಶ್ ಒಂದು ಸಿದ್ದಾಂತದ ಮೇಲೆ ನಂಬಿಕೆಯನ್ನು ಹೊಂದಿದ್ದರು ಮತ್ತು ಅದರ ಬಗ್ಗೆ ಅವರು ಬರೆಯುತ್ತಿದ್ದರು ಮತ್ತು ಮಾತನಾಡುತ್ತಿದ್ದರು.ಅದು ಸಿದ್ದಾಂತವಾಗಿರಬಹುದು ಅಥವಾ ಸಂಘಟನೆಯಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ  ಈ ವಿಚಾರವಾಗಿ ಇನ್ನು ಹೆಚ್ಚಿನ ತನಿಖೆ ನಡೆಸಲು ಎಸ್ಐಟಿ ಸಮಯಾವಕಾಶವನ್ನು ಕೇಳಿದೆ.ಮೇ ತಿಂಗಳಲ್ಲಿ ಮೊದಲ ಚಾರ್ಜ್ ಶೀಟ್ ನ್ನು ಸಲ್ಲಿಸಲಾಗಿತ್ತು.ಕಳೆದ ವರ್ಷ  ಗೌರಿ ಲಂಕೇಶ್ ಅವರು ಸಪ್ಟೆಂಬರ್ 5 ರಂದು ಹತ್ಯೆಯಾಗಿದ್ದರು.ಈ ವಿಚಾರವಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಎಸ್ಐಟಿ ತಂಡವನ್ನು ನೇಮಕ ಮಾಡಿ ತನಿಖೆಗೆ ಆದೇಶಿಸಿತ್ತು.ಅದರ ಭಾಗವಾಗಿ  ಪರುಶುರಾಮ್ ವಾಗ್ಮೊರೆ,ಅಮೋಲ್ ಕಾಳೆ,ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ ,ಅಮಿತ್ ದೇಗ್ವೆಕರ್ ಅವರನ್ನು ಆರೋಪಿಗಳೆಂದು ಎಸ್ಐಟಿ ಹೆಸರಿಸಿತ್ತು. 

 

Trending News