Ricky Ponting Rushed To Hospital: ಆಸ್ಟ್ರೇಲಿಯಾದ ಮಾಜಿ ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ನಾಯಕ ರಿಕಿ ಪಾಂಟಿಂಗ್ ಅವರನ್ನು ಅನಾರೋಗ್ಯದ ಕಾರಣ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಸ್ಟ್ರೇಲಿಯಾದ ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿದೆ. ವರದಿಯ ಪ್ರಕಾರ, ಊಟದ ಸಮಯದಲ್ಲಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಹೆ ಕರೆದೊಯ್ಯಲಾಯಿತು. ಅವರಗೆ ಹೃದಯಾಘಾತದ ಲಕ್ಷಣಗಳು ಗೋಚರಿಸಿವೆ ಎಂದು ಹಲವು ಮಾಧ್ಯಮಗಳು ಹೇಳಿವೆ. ಈ ಹಿನ್ನೆಲೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಆಸ್ಟ್ರೇಲಿಯಾದ ದಿನಪತ್ರಿಕೆ ಡೈಲಿ ಟೆಲಿಗ್ರಾಫ್ನ ವರದಿಯ ಪ್ರಕಾರ, ರಿಕಿ ಪಾಂಟಿಂಗ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ. ವರದಿಗಳ ಪ್ರಕಾರ, ಪಾಂಟಿಂಗ್ ಅವರು ಅಸ್ವಸ್ಥರಾದಾಗ ಸ್ವತಃ ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿದರು. ಆಗ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ : Dwayne Bravo Retirement : ಐಪಿಎಲ್ಗೆ ಗುಡ್ ಬೈ ಹೇಳಿದ ಡ್ವೇನ್ ಬ್ರಾವೋ..!
1 ನೇ ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದ ವೇಳೆ ಕಾಮೆಂಟ್ರಿ ಮಾಡುವಾಗ ಆಸ್ಟ್ರೇಲಿಯಾದ ಶ್ರೇಷ್ಠ ರಿಕಿ ಪಾಂಟಿಂಗ್ ಅಸ್ತಸ್ಥಗೊಂಡಿದ್ದಾರೆ. ಅವರನ್ನು ಪರ್ತ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ವರದಿಯಾಗಿದೆ. ಪಾಂಟಿಂಗ್ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಯಾವುದೇ ದೃಢೀಕೃತ ವಿವರಗಳು ಹೊರಹೊಮ್ಮಿಲ್ಲ. ಊಟದ ಸಮಯದಲ್ಲಿ ಅಸ್ತಸ್ಥಗೊಳ್ಳುವ ಮೊದಲು ಪಾಂಟಿಂಗ್ ಸುಮಾರು 40 ನಿಮಿಷಗಳ ಕಾಲ ಕಾಮೆಂಟ್ರಿ ಮಾಡಿದ್ದರು. ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
#BREAKING | Former Australia skipper Ricky Ponting taken to hospital after heart scare while commentating during day three of Australia's first test against West Indies at Perth Stadium, reports news agency Reuters
(File photo) pic.twitter.com/GCD2SdwqdU
— WION Sports (@WIONSportsNews) December 2, 2022
"ರಿಕಿ ಪಾಂಟಿಂಗ್ ಅವರು ಅಸ್ವಸ್ಥರಾಗಿದ್ದಾರೆ ಮತ್ತು ಇಂದಿನ ಮ್ಯಾಚ್ನ ಉಳಿದ ಭಾಗಕ್ಕೆ ಕಾಮೆಂಟ್ರಿ ನೀಡುವುದಿಲ್ಲ" ಎಂದು ಪ್ರಸಾರಕ Channel 7 ರ ವಕ್ತಾರರು ಆಸ್ಟ್ರೇಲಿಯಾದ ಮಾಧ್ಯಮಕ್ಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪಾಂಟಿಂಗ್ ಅವರು ಆಸ್ಟ್ರೇಲಿಯಾವನ್ನು ಅನೇಕ ಪಂದ್ಯಗಳಲ್ಲಿ ಮುನ್ನಡೆಸಿದರು. ಅವರ ಕ್ಯಾಪ್ಟೆನ್ಸಿಯಲ್ಲಿ ಆಸ್ಟ್ರೇಲಿಯಾ 2003 ಮತ್ತು 2007 ರಲ್ಲಿ ಬ್ಯಾಕ್-ಟು-ಬ್ಯಾಕ್ ವರ್ಲ್ಡ್ ಕಪ್ಗಳನ್ನು ಗೆದ್ದುಕೊಂಡಿತು. ಪಾಂಟಿಂಗ್ ಸಾರ್ವಕಾಲಿಕ ಎರಡನೇ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದಾರೆ.
ಇದನ್ನೂ ಓದಿ : ENG vs PAK: ಆಧುನಿಕ ಟೆಸ್ಟ್ ಕ್ರಿಕೆಟ್ ಅಂದರೆ ಇದೇನಾ? ಒಂದೇ ದಿನದಲ್ಲಿ 4 ಶತಕ, ಸ್ಕೋರ್ ಎಷ್ಟು ಗೊತ್ತಾ?
ಆಸ್ಟ್ರೇಲಿಯಾ ಪರ 168 ಟೆಸ್ಟ್ಗಳು ಮತ್ತು 375 ODIಗಳನ್ನು ಆಡಿದ್ದಾರೆ. ಪಾಂಟಿಂಗ್ ಅವರು 41 ಶತಕಗಳು ಸೇರಿದಂತೆ 51.85 ಸರಾಸರಿಯಲ್ಲಿ 13,378 ರನ್ ಗಳಿಸುವ ಮೂಲಕ ಟೆಸ್ಟ್ನಲ್ಲಿ ದೇಶದ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 29 ಶತಕಗಳು ಮತ್ತು 82 ಅರ್ಧ ಶತಕಗಳು ಸೇರಿದಂತೆ 13,589 ರನ್ಗಳೊಂದಿಗೆ ODIಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 1999 ರಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಪಾಂಟಿಂಗ್ ಅವರು 2012 ರಲ್ಲಿ ನಿವೃತ್ತಿ ಘೋಷಿಸಿದರು ಮತ್ತು ಪ್ರಸ್ತುತ IPL ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ಗಾಗಿ ಕೋಚಿಂಗ್ ಸೆಟಪ್ನಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.