ನವದೆಹಲಿ: ಇಂದು ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ವಿಷಯದ ಬಗ್ಗೆ ಚಿಂತಿಸುತ್ತಿರುತ್ತಾರೆ. ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ಇಕ್ಕಟ್ಟಿಗೆ ಸಿಲುಕಿರುತ್ತಾರೆ. ಒಂದಲ್ಲ ಒಂದು ರೀತಿ ಜೀವನದಲ್ಲಿ ಭಯ, ಉದ್ವೇಗ, ಆತಂಕ ಮತ್ತು ಬಿಕ್ಕಟ್ಟು ಇತ್ಯಾದಿಗಳು ಕಾಡುತ್ತಿರುತ್ತವೆ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಈ ಸಮಸ್ಯೆ ತೊಡೆದುಹಾಕಲು ಅನೇಕರು ವಿವಿಧ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ.
ಜ್ಯೋತಿಷ್ಯದಲ್ಲಿ ಇಂತಹ ಸಮಸ್ಯೆಗಳಿಗೆ ಕೆಲವು ಪರಿಹಾರಗಳ ಬಗ್ಗೆ ಹೇಳಲಾಗಿದೆ. ಇವುಗಳನ್ನು ಪಾಲಿಸುವ ಮೂಲಕ ವ್ಯಕ್ತಿಯು ಸಮಸ್ಯೆಗಳಿಂದ ಮುಕ್ತಿ ಕಂಡುಕೊಳ್ಳಬಹುದು. ಜ್ಯೋತಿಷ್ಯದಲ್ಲಿ ಪ್ರಭು ಶ್ರೀರಾಮನ ಭಂಟ ಹನುಮಂತನನ್ನು ಮೆಚ್ಚಿಸಲು ಮತ್ತು ಆಶೀರ್ವಾದ ಪಡೆಯಲು ಆಲದ ಮರದ ಕೆಲವು ಪರಿಹಾರಗಳ ಬಗ್ಗೆ ಹೇಳಲಾಗಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ಯಾವುದೇ ವ್ಯಕ್ತಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: Palmistry: ಕೈಯಲ್ಲಿ ಪರ್ವತ ಯೋಗ ಇದ್ರೆ ಅಪಾರ ಸಂಪತ್ತು ಮತ್ತು ಖ್ಯಾತಿ ಸಿಗುತ್ತದೆ!
ಆಲದ ಮರದ ಪರಿಹಾರಗಳು
ಜೀವನದಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಹನುಮಂತನನ್ನು ಭಕ್ತಿಯಿಂದ ಪ್ರಾರ್ಥಿಸಬೇಕು. ಇದು ಆಂಜನೇಯನನ್ನು ಮೆಚ್ಚಿಸುವ ಬಹಳ ಪುರಾತನವಾದ ತಂತ್ರವಾಗಿದೆ. ಹುಣ್ಣಿಮೆಯ ದಿನ ಸ್ನಾನದ ನಂತರ ಆಲದ ಮರದಿಂದ 11 ಅಥವಾ 21 ಎಲೆಗಳನ್ನು ಕಿತ್ತು ಮನೆಗೆ ತರಬೇಕು. ಈ ವೇಳೆ ಆ ಎಲೆಗಳನ್ನು ವಿರೂಪಗೊಳಿಸಬಾರದು ಮತ್ತು ಕೊಳಕು ಮಾಡಬಾರದು. ಬಳಿಕ ಈ ಎಲೆಗಳನ್ನು ಶುದ್ಧ ನೀರಿನಿಂದ ತೊಳೆದು ಶ್ರೀರಾಮನ ಹೆಸರನ್ನು ಶ್ರೀಗಂಧದಿಂದ ಬರೆಯಬೇಕು.
ನಂತರ ಎಲ್ಲಾ ಎಲೆಗಳನ್ನು ಸೇರಿಸಿ ಸುಂದರವಾದ ಮಾಲೆಯನ್ನು ಮಾಡಬೇಕು. ಮಾಲೆಯನ್ನು ತಯಾರಿಸುವಾಗ ಬಣ್ಣದ ದಾರವನ್ನು ಬಳಸಬೇಕು. ಇದರೊಂದಿಗೆ ಹನುಮಂತನಿಗೆ ಬೆಲ್ಲವನ್ನು ಅರ್ಪಿಸಬೇಕು. ಕೊನೆಯಲ್ಲಿ ರಾಮ ಸ್ತೋತ್ರವನ್ನು ಪಠಿಸಬೇಕು. ಆಂಜನೇಯನನ್ನು ಮೆಚ್ಚಿಸಲು ಈ ಪರಿಹಾರವು ತುಂಬಾ ಪರಿಣಾಮಕಾರಿ ಎಂದು ಹೇಳಲಾಗಿದೆ.
ಇದನ್ನೂ ಓದಿ: Vastu Tips: ನಿಮ್ಮ ಆದಾಯ ಹೆಚ್ಚಿಸಲು ಈ ವಸ್ತುವನ್ನು ಮನೆಗೆ ತನ್ನಿ, ಹಣದ ಮಳೆಯಾಗುತ್ತದೆ!
ಹನುಮಂತನ ಮೂರ್ತಿ ಪೂಜಿಸಿ
ದೇವರು ಮತ್ತು ದೇವತೆಗಳ ವಿವಿಧ ಲೋಹಗಳ ಮೂರ್ತಿಗಳನ್ನು ಪೂಜಿಸುವುದರಿಂದ ವಿವಿಧ ಪ್ರಯೋಜನಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಾದರಸದಿಂದ ಮಾಡಿದ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಹನುಮಂತನ ಪಾದರಸದಿಂದ ಮಾಡಿದ ವಿಗ್ರಹವನ್ನು ಪೂಜಿಸಿದರೆ ವ್ಯಕ್ತಿಯ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ ಎಂದು ತಂತ್ರಶಾಸ್ತ್ರ ಹೇಳುತ್ತದೆ. ಪಾದರಸದಿಂದ ಮಾಡಿದ ಹನುಮಂತನ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ. ಮನೆಗೆ ಯಾವುದೇ ರೀತಿಯ ಸಮಸ್ಯೆಗಳು ಕಾಡುವುದಿಲ್ಲ ಮತ್ತು ಪರಿಸರವು ಸಹ ಶುದ್ಧವಾಗಿರುತ್ತದೆ. ಅದೇ ರೀತಿ ಯಾವುದೇ ಒಬ್ಬ ವ್ಯಕ್ತಿ ಪಿತೃದೋಷದಿಂದ ಬಳಲುತ್ತಿದ್ದರೆ, ಅವರು ನಿಯಮಿತವಾಗಿ ಬಜರಂಗಬಲಿಯನ್ನು ಪೂಜಿಸಬೇಕೆಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.