ನನ್ನ ಪಾದಯಾತ್ರೆಯಿಂದಲೇ ರೆಡ್ಡಿ ಜೈಲಿಗೆ ಹೋಗಿದ್ದು : ಸಿದ್ದರಾಮಯ್ಯ

ನಾನು ಮಾಡಿದ ಪಾದಯಾತ್ರೆಯ ಪರಿಣಾಮವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕರಾದ ಆನಂದ್ ಸಿಂಗ್, ಸುರೇಶ್ ಬಾಬು, ನಾಗೇಂದ್ರ ಜೈಲಿಗೆ  ಹೋಗಬೇಕಾಯಿತು. ಅಲ್ಲಿಗೆ ರಿಪಬ್ಲಿಕ್ ಆಫ್ ಬಳ್ಳಾರಿಗೆ ಮುಕ್ತಿ ಸಿಕ್ತು ಎಂದು ಮುಕ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

Last Updated : Dec 19, 2017, 04:46 PM IST
ನನ್ನ ಪಾದಯಾತ್ರೆಯಿಂದಲೇ ರೆಡ್ಡಿ ಜೈಲಿಗೆ ಹೋಗಿದ್ದು : ಸಿದ್ದರಾಮಯ್ಯ title=

ಬಳ್ಳಾರಿ: ನಾನು ಪಾದಯಾತ್ರೆ ಮಾಡಿದ್ದಕ್ಕೇ ಮಾಜಿ ಸಚಿವ ಜನಾರ್ಧನರೆಡ್ಡಿ ಮತ್ತಿತರರು ಜೈಲಿಗೆ ಹೋಗಬೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಜಿಲ್ಲೆಯ ಸಂಡೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ನಡೆದ ಸಮಾರಮ್ಹದಲ್ಲಿ ಮಾತನಾಡಿದ ಅವರು, ಯಡಿಯುರಪ್ಪ ಅವರರು ಮುಖ್ಯಮಂತ್ರಿ ಆಗಿದ್ದಾಗ ಬಳ್ಳಾರಿ ಒಂದು ರಿಪಬ್ಲಿಕ್ನಂತೆ ಇತ್ತು. ಆಗ ನಾನು ವಿರೋಧಪಕ್ಷದ ನಾಯಕನಾಗಿ ರಾಮಗಢದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನೋಡಲು ಬಂದಿದ್ದೆ. ಆಗ ಎಲ್ಲಿ ನೋಡಿದರೂ ಗುಂಡಾಗಳು ಕಾಣಿಸುತ್ತಿದ್ದರು, ನಾನು ಅಲ್ಲಿಗೆ ಹೋಗಬಾರದೆಂದು ರಸ್ತೆಯುದ್ದಕ್ಕೂ ಕಲ್ಲು, ಮನ್ನುಗಳನ್ನು ಸುರಿದಿದ್ದರು ಎಂದು ಸಿದ್ದರಾಮಯ್ಯ ಆ ದಿನಗಳನ್ನು ವಿವರಿಸಿದರು.

ಬಳ್ಳಾರಿಯಲ್ಲಿ ಅಕ್ರಮ ಗಣಿಕಾರಿಕೆ, ಗುಂಡಾಗಿರಿಯನ್ನು ತಡೆಯಲೆಂದೇ ನಾನು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ನಿರ್ಧಾರ ಕೈಗೊಂಡೆ. ಅಂದು ನನ್ನೊಂದಿಗೆ ಒಬ್ಬ ಪೋಲಿಸ್ ಪೇದೆಯೂ ಬಂದಿರಲಿಲ್ಲ. ನಾನು ಮಾಡಿದ ಪಾದಯಾತ್ರೆಯ ಪರಿಣಾಮವಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕರಾದ ಆನಂದ್ ಸಿಂಗ್, ಸುರೇಶ್ ಬಾಬು, ನಾಗೇಂದ್ರ ಜೈಲಿಗೆ ಹೋಗಬೇಕಾಯಿತು. ಅಲ್ಲಿಗೆ ರಿಪಬ್ಲಿಕ್ ಆಫ್ ಬಳ್ಳಾರಿಗೆ ಮುಕ್ತಿ ಸಿಕ್ತು ಎಂದು ಹೇಳುವ ಸಿದ್ದರಾಮಯ್ಯ ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡಿದರು. ಹೇಳಿದರು. 

Trending News