ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಹೊಸ ಕೈಗಾರಿಕಾ ನೀತಿ ಘೋಷಣೆ..! ವಿಶೇಷತೆ ಏನಿದೆ..?

ನಮ್ಮನ್ನು ನೋಡಿ ದೇಶದ ಇತರ ರಾಜ್ಯಗಳು ಶುರು ಮಾಡಿದ್ದಾರೆ. 11 ರಿಂದ‌14 ವರೆಗೆ ಸಮಾವೇಶ ನಡೆಲಿದೆ. ಎಲ್ಲಾ ಭರದ ಸಿದ್ದತೆ ನಡೆಸಲಾಗ್ತಿದೆ ಎಂದು ವಿವರಿಸಿದರು.  

Written by - RACHAPPA SUTTUR | Last Updated : Feb 3, 2025, 03:29 PM IST
  • ಜಾಗತಿಕ ಹೂಡಿಕೆ ಸಮಾವೇಶ
  • ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು
  • ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಹೊಸ ಕೈಗಾರಿಕಾ ನೀತಿ ಘೋಷಣೆ..! ವಿಶೇಷತೆ ಏನಿದೆ..? title=

ಬೆಂಗಳೂರು: ಫೆಬ್ರವರಿ 11 ರಿಂದ 14 ನೇ ತಾರೀಕಿನ ವರೆಗೆ ನಡೆಯಲಿರುವ ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ನಾವೇ ನಾಯಕರು. ನಮ್ಮನ್ನು ನೋಡಿ ದೇಶದ ಇತರ ರಾಜ್ಯಗಳು ಶುರು ಮಾಡಿದ್ದಾರೆ. 11 ರಿಂದ‌14 ವರೆಗೆ ಸಮಾವೇಶ ನಡೆಲಿದೆ. ಎಲ್ಲಾ ಭರದ ಸಿದ್ದತೆ ನಡೆಸಲಾಗ್ತಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಮೈಕ್ರೊಫೈನಾನ್ಸ್ ಗಳಿಂದ ಬಡವರ ಮೇಲಿನ ದೌರ್ಜನ್ಯ ತಡೆಯಲು ಸುಗ್ರೀವಾಜ್ಞೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕೈಗಾರಿಕಾ ಸಚಿವರು ಹಾಗೂ ತಂಡ 16 ದೇಶಗಳಿಗೆ ಭೇಟಿ ಕೊಟ್ಟು ರೋಡ್ ಶೋ ಮಾಡಿ, ಅನೇಕರನ್ನು ಆಹ್ವಾನಿಸಿದ್ದಾರೆ. ಹೂಡಿಕೆ ಸಾಕಷ್ಟು ಜನರು ನಮ್ಮ ರಾಜ್ಯಕ್ಕೆ ಹೂಡಿಕೆ ಮಾಡಲು ಬರಲಿದ್ದಾರೆ ಎಂದು ತಿಳಿಸಿದರು.

10 ಲಕ್ಷ ಕೋಟಿ ಹೂಡಿಕೆ ಗುರಿ!

ಈ ಬಾರಿಯ ಜಾಗತಿಕ ಹೂಡಿಕೆದಾರ ಸಮಾವೇಶದಲ್ಲಿ ಹತ್ತು ಲಕ್ಷ ಕೋಟಿ ಹೂಡಿಕೆ ಗುರಿ ಇದೆ. 7 ಲಕ್ಷ ಕೋಟಿ ಹೂಡಿಕೆ ಈಗಾಗಲೇ ಧೃಡೀಕರಿಸಲಾಗಿದೆ. ಸಮಾವೇಶದಲ್ಲಿ
60 ಕ್ಕೂ ಹೆಚ್ಚು ಗಣ್ಯರು ಭಾಗಿಯಾಗಲಿದ್ದಾರೆ ಎಂದು ವಿವರಿಸಿದರು. 

ಈಗಾಗಲೇ 2000 ಹೂಡಿಕೆದಾರರು ನೋಂದಣಿ ಮಾಡಿದ್ದಾರೆ.‌ ಸಮಾವೇಶದಲ್ಲಿ 18 ದೇಶಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
9 ದೇಶಗಳು ಸಮಾವೇಶದಲ್ಲಿ ಪೆವಿಲಿಯನ್ ಹಾಕಲಿದ್ದಾರೆ ಎಂದು ತಿಳಿಸಿದರು. 

ಈ ವರ್ಷ  ರಾಜ್ಯ ಹೊಸ ಕೈಗಾರಿಕಾ ನೀತಿ ಘೋಷಣೆ ಮಾಡುತ್ತಿದ್ದೇವೆ. ಕೈಗಾರಿಕಾ ನೀತಿ 2025- 30 ಜಾರಿಗೆ ತರಲಾಗುವುದು. ರಾಷ್ಟ್ರದ ಎಲ್ಲಾ ರಾಜ್ಯಗಳ ನೀತಿ ಅಧ್ಯಯನ ಮಾಡಿ, ಅದಕ್ಕಿಂತ ಆಕರ್ಷಣೆಯವಾದ ನೀತಿ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ ಕ್ಲೀನ್ ಮೊಬಿಲಿಟಿ ನೀತಿ 2025- 30 ಅನಾವರಣ ಗೊಳಿಸಲಾಗುವುದು ಎಂದು ತಿಳಿಸಿದರು.

ಖರೀದಿದಾರು ಮತ್ತು ಮಾರಾಟಗಾರರಿಗೆ ಹೊಂದಾಣಿಕೆ ಮಾಡುವ ಪ್ರಯತ್ನ ಭಾಗವಾಗಿ ಎಸ್ ಎಂ ಇ ಪೋರ್ಟಲ್ ಅನಾವರಣ ಮಾಡಲಾಗುವುದು.  ಕೆ ಟೆಕ್ ಸಹಯೋಗದಲ್ಲಿ 2000 ಎಸ್ ಎಂ ಇ ಗಳಿಗೆ ತರಬೇತಿ ನೀಡಲಾಗುವುದು. ಎಸ್ ಎಂ ಇ  85 ಸ್ಟಾಲ್  ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಂತ್ರಿಕ ಕಾರ್ಯಗಾರ ವ್ಯವಸ್ಥೆ ಮಾಡುತ್ತೇವೆ.  ಕೈಗಾರಿಕಾ ಹತ್ತು ದಿಗ್ಗಜರು ಇದರಲ್ಲಿ ಭಾಗಿಯಾಗದ್ದಾರೆ. ಉದ್ಯೋಗ ಸೃಷ್ಟಿಗೆ ಒತ್ತು, ಬೆಂಗಳೂರು ಹೊರತು ಪಡಿಸಿದ ನಗರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು‌.

ಇದನ್ನೂ ಓದಿ: ಪ್ರಾಣ ಒತ್ತೆಯಿಟ್ಟು ಹೆಬ್ಬಾವನ್ನು ರಕ್ಷಿಸಿದ ಯುವಕ..! ಎದೆ ಝಲ್‌ ಎನ್ನುವ... ವಿಡಿಯೋ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News