ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ (ವಿಶೇಷ ತನಿಖಾ ತಂಡ) ಈಗ ಪರಾರಿಯಾಗಿದ್ದ ಆರೋಪಿ ರುಶಿಕೇಶ್ ದೇವದಿಕರ್ ಅವರನ್ನು ಬಂಧಿಸಿದೆ ಎಂದು ಸ್ಥಳೀಯ ಸುದ್ದಿ ಮಾದ್ಯಮಗಳು ವರದಿ ಮಾಡಿವೆ.
#GauriLankesh murder case:
Accused No 18 Rushikesh Devdikar is originally from #Aurangabad, #Maharashtra. His family still lives there. He was hiding in a house in Katras, Dhanbad. https://t.co/Lkxe8SqetA
— Atul Chaturvedi (@atulchaturvedii) January 9, 2020
ಜಾರ್ಖಂಡ್‌ನ ಧನ್ಬಾದ್‌ನಿಂದ ಆರೋಪಿಯನ್ನು ಬಂಧಿಸಲಾಗಿದ್ದು, ಅವರನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ 18 ನೇ ಶಂಕಿತ ರುಶಿಕೇಶ್ ಎಂದು ಮುಖ್ಯ ತನಿಖಾಧಿಕಾರಿ ಎಂ ಎನ್ ಅನುಚೆತ್ ತಿಳಿಸಿದ್ದಾರೆ. ಗೌರಿಯ ಕೊಲೆ ಸಂಚಿನಲ್ಲಿ ಆತ ಮುಖ್ಯವಾಗಿ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಧನ್ಭಾಗ್ ಕತ್ರಾಸ್‌ನ ಮನೆಯಲ್ಲಿ ಅಡಗಿಕೊಂಡಿದ್ದ ಆತನು ಅಡಗಿಕೊಂಡಿದ್ದ ಎನ್ನಲಾಗಿದೆ.
ಇತನು ಮೂಲತಃ ಮಹಾರಾಷ್ಟ್ರದ ಔರಂಗಾಬಾದ್ ನವನಾಗಿದ್ದು, ಇಂದಿಗೂ ಕೂಡ ಆತನ ಕುಟುಂಬ ಅಲ್ಲಿ ವಾಸಿಸುತ್ತಿದೆ ಎನ್ನಲಾಗಿದೆ.